ಸತತ 7 ನೇ ಬಾರಿಗೆ ಶೇ 100 ಫಲಿತಾಂಶ ಪಡೆದ ಬೆಳ್ತಂಗಡಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ

 

 

ಬೆಳ್ತಂಗಡಿ: 2021-22ನೇ ಶೈಕ್ಷಣಿಕ ಸಾಲಿನ ಎಸ್ ಎಸ್ ಎಲ್ ಸಿ ಅಂತಿಮ ಪರೀಕ್ಷೆಯಲ್ಲಿ
ಶೇ 100 ಫಲಿತಾಂಶ ಪಡೆಯುವ ಮೂಲಕ ಸತತ 7ನೇ ಬಾರಿಗೆ 100% ಫಲಿತಾಂಶ ಪಡೆದ ಶಾಲೆ ಎಂಬ ಹೆಗ್ಗಳಿಕೆಗೆ ಬೆಳ್ತಂಗಡಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆ ಪಾತ್ರವಾಗಿದೆ.

 

                 ಸೃಷ್ಟಿ ‌.ಆರ್.ರೈ (614)

 

ವಿದ್ಯಾರ್ಥಿನಿಯರಾದ ಸೃಷ್ಟಿ ಆರ್ ರೈ (614), ಗ್ಲೆನಿಟಾ ಮೋನಿಸ್ ( 608), ರಿಯೋನ ಡಿಸೋಜ (605), ವಿಲಿಟಾ ಲೋಬೋ (603) ಅಂಕಗಳನ್ನು ಪಡೆದು  ಸಾಧನೆಗೈದಿರುತ್ತಾರೆ.

 

           ಗ್ಲೆನಿಟಾ ಆನ್ಸೆಲಿನ್ ಮೋನಿಸ್ (608)

 

ಪರೀಕ್ಷೆ ಬರೆದ ಒಟ್ಟು 44 ವಿದ್ಯಾರ್ಥಿಗಳಲ್ಲಿ 18 ಉನ್ನತ ಶ್ರೇಣಿ, 26 ಪ್ರಥಮಶ್ರೇಣಿ ಪಡೆದು ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.

 

            ರಿಯೋನ ಡಿಸೋಜ (605)

 

 

               ವಿಲಿಟಾ ಲೋಬೋ (603)

 

            

ಶಾಲೆಯ ಘನತೆಯನ್ನು ಹೆಚ್ಚಿಸಿದ ವಿದ್ಯಾರ್ಥಿಗಳನ್ನು  ಶಿಕ್ಷಕ ವೃಂದವನ್ನು  ಶಾಲೆಯ ಸಂಚಾಲಕರಾದ ವಂದನೀಯ ಫಾ. ಜೋಸೆಫ್ ಅಲ್ಫೋನ್ ಕಾರ್ಡೋಜ, ಶಾಲಾ ಮುಖ್ಯೋಪಾಧ್ಯಾಯರಾದ ವಂದನೀಯ ಫಾ.ಕ್ಲಿಫರ್ಡ್ ಸೈಮನ್ ಪಿಂಟೋ, ಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಾಲಾ ಶಿಕ್ಷಕ ರಕ್ಷಕ ಸಂಘದ ಸದಸ್ಯರು ಮತ್ತು ಪೋಷಕರು ಅಭಿನಂದಿಸಿದರು.

error: Content is protected !!