ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತ ಉದಯ ಕುಮಾರ್ ಲಾಯಿಲ ಬಿಜೆಪಿ ಲಾಯಿಲ ಶಕ್ತಿ ಕೇಂದ್ರದ ವತಿಯಿಂದ ಸನ್ಮಾನ

 

 

 

 

 

ಬೆಳ್ತಂಗಡಿ: ತಾಲೂಕಿನ ಇತಿಹಾಸದಲ್ಲಿ ಮೊದಲಬಾರಿಗೆ ಜಾನಪದ ಕ್ಷೇತ್ರದಲ್ಲಿ ಅಭೂತ ಪೂರ್ವ ಸಾಧನೆ ಮಾಡಿ ಅಂತರಾಷ್ಟೀಯ ಅರ್ಯಭಟ ಪ್ರಶಸ್ತಿಗೆ ಭಾಜನರಾದ ಲಾಯಿಲ ಗ್ರಾಮದ ಹೆಮ್ಮೆಯ ಕಲಾವಿದ ಉದಯ ಕುಮಾರ್ ಲಾಯಿಲ ಇವರನ್ನು ಭಾರತೀಯ ಜನತಾ ಪಾರ್ಟಿ ಲಾಯಿಲ ಶಕ್ತಿ ಕೇಂದ್ರದ ವತಿಯಿಂದ ಮೇ.19ರಂದು ಮನೆಗೆ ಭೇಟಿ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ಆಶಾ ಸಲ್ದಾನ, ಉಪಾಧ್ಯಕ್ಷ ಗಣೇಶ್ ಆರ್. ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ರುಕ್ಮಯ ಕನ್ನಾಜೆ, ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯ ಈಶ್ವರ ಬೈರ, ಬೂತ್ ಅಧ್ಯಕ್ಷ ರಾಜೇಶ್ ಶೆಟ್ಟಿ, ಲಾಯಿಲ ಗ್ರಾಮ ಪಂಚಾಯತ್ ಸದಸ್ಯರಾದ ದಿನೇಶ್ ಶೆಟ್ಟಿ, ಅರವಿಂದ್ ಕುಮಾರ್, ಆಶಾಲತಾ ಪ್ರಶಾಂತ್, ಕಾರ್ಯಕರ್ತರಾದ ಸುಜಿತ್ ಗುರಿಂಗಾನ ಉಪಸ್ಥಿತರಿದ್ದರು.

error: Content is protected !!