ಬೆಳ್ತಂಗಡಿ: ಉಜಿರೆ ಕಡೆಯಿಂದ ಮೂಡಿಗೆರೆ ಕಡೆಗೆ ಬೋಲೆರೋ ಪಿಕ್ ಅಪ್ ವಾಹನವೊಂದರಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ರೂ. 49,500 ಮೌಲ್ಯದ 33 ಕ್ವಿಂಟಾಲ್ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಧರ್ಮಸ್ಥಳ ಪೊಲೀಸರು ಪತ್ತೆ ಹಚ್ಚಿ ವಾಹನ ಸಹಿತ ಆರೋಪಿಯನ್ನು ಬಂಧಿಸಿದ ಘಟನೆ ಮೇ.18ರಂದು ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುತ್ತಿಗೆಪುರ ಗ್ರಾಮದ ವಿನಯ್ (23 ವರ್ಷ) ಹಾಗೂ ಇತರರನ್ನು ಪೊಲೀಸರು ಬಂಧಿಸಿ, ಪಿಕಫ್ ಹಾಗೂ ಅದರಲ್ಲಿದ್ದ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿಕೊಳ್ಳಲಾಗಿದೆ.
ಘಟನೆಯ ಹಿನ್ನಲೆ:
ಮೇ. 18 ಧರ್ಮಸ್ಥಳ ಠಾಣೆಯ ಎಸ್.ಐ ಕಷ್ಣಕಾಂತ ಪಾಟೀಲ್ ಮತ್ತು ಸಿಬ್ಬಂದಿಗಳು, ಅನ್ನ ಬಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿಯಂತೆ ಚಾರ್ಮಾಡಿ ಪೊಲೀಸ್ ಚೆಕ್ ಪೋಸ್ಟ್ ಬಳಿ ವಾಹನವನ್ನು ತಪಾಸಣೆ ಮಾಡುತ್ತಿರುವ ಸಮಯ ಉಜಿರೆ ಕಡೆಯಿಂದ ಮೂಡಿಗೆರೆ ಕಡೆಗೆ ಬರುತ್ತಿದ್ದ ವಾಹನವನ್ನು ತಡೆದು ನಿಲ್ಲಿಸಿ, ಪರಿಶೀಲನೆ ನಡೆಸಿದಾಗ ವಾಹದಲ್ಲಿ ಅಕ್ಕಿ ಮೂಟೆ ಇರುವುದನ್ನು ಗಮನಿಸಿ ಚಾಲಕನನ್ನು ವಿಚಾರಿಸಿದಾಗ ಅನ್ನಭಾಗ್ಯದ ಅಕ್ಕಿ ಅಕ್ರಮ ಸಾಗಾಟದ ಈ ಪ್ರಕರಣ ಬೆಳಕಿಗೆ ಬಂದಿತ್ತು.
ಕೂಡಲೇ ತಾಲೂಕು ಆಹಾರ ನೀರೀಕ್ಷಕರಿಗೆ ಮಾಹಿತಿ ನೀಡಿದಾಗ ಅವರು ತಮ್ಮ ಸಿಬ್ಬಂದಿಗಳ ಜೊತೆ ಸ್ಥಳಕ್ಕೆ ಆಗಮಿಸಿ, ವಾಹನದ್ದ ಅಕ್ಕಿಯನ್ನು ಪರೀಶಿಲಿಸಿ, ಸದ್ರಿ ಅಕ್ಕಿಯು 2022ನೇ ಮೇ ತಿಂಗಳ ಅನ್ನಭಾಗ್ಯ ಯೋಜನೆಯಡಿಯಲ್ಲಿ ಪಡಿತರ ಚೀಟಿದಾರರಿಗೆ ವಿತರಣೆಗಾಗಿ ನ್ಯಾಯಬೆಲೆ ಅಂಗಡಿಯ ಸರಬರಾಜು ನೀಡಿ ರುವ ಅಕ್ಕಿಗೆ ಹೋಲಿಕೆ ಇರುವುದಾಗಿ ತಿಳಿಸಿದರೆನ್ನಲಾಗಿದೆ.
ಪಿಕ್ ಅಪ್ ನಲ್ಲಿ 59 ಪ್ಲಾಸ್ಟಿಕ್ ಗೋಣಿ ಚೀಲಗಳಲ್ಲಿ ತಲಾ 50 ಕೆ.ಜಿ ಅಕ್ಕಿ ಮತ್ತು 14 ಪ್ಲಾಸ್ಟಿಕ್ ಗೋಣಿ ಚೀಲಗಳಲ್ಲಿ ತಲಾ 25 ಕೆ.ಜಿ ಅಕ್ಕಿಯಂತೆ ಸೇರಿದಂತೆ ಒಟ್ಟು 33 ಕ್ವಿಂಟಾಲ್ ಅಕ್ಕಿ ಪತ್ತೆಯಾಯಿತು. ವಶಪಡಿಸಿಕೊಂಡ ಅಕ್ಕಿ ಯ ಅಂದಾಜು ಮೌಲ್ಯ ರೂ. 49,500ಎಂದು ಅಂದಾಜಿಸಲಾಗಿದೆ. ಸಾಗಾಟಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಅಕ್ಕಿಯನ್ನು ಅಕ್ರಮವಾಗಿ ಮುಕ್ತ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶ ಕೊಂಡು ಹೋಗುತ್ತಿರುವುದಾಗಿ ತನಿಖೆ ವೇಳೆ ಗೊತ್ತಾಗಿದೆ.
ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಮಹಮ್ಮದ್ ಅಸ್ಲಾಂ, ಹೆಚ್.ಸಿ ರಾಹುಲ್ ರಾವ್, ಚೆಕ್ ಪೋಸ್ಟ್ ಕರ್ತವ್ಯದಲ್ಲಿದ್ದ ಸಿಬ್ಬಂದಿ ಮುತ್ತಪ್ಪ ಗೋಡಿ ಮತ್ತು ಹೆಚ್.ಜಿ ಲಿಂಗಪ್ಪ ಸಹಕರಿಸಿದರು. ಹೆಚ್ಚಿನ ತನಿಖೆ ಮುಂದುವರಿದಿದೆ.
ಪಡಿತರ ಅಕ್ರಮಗಳ ವಿಶೇಷ ವರದಿಯನ್ನು ಫೆ 03 ರಂದು ಪ್ರಜಾಪ್ರಕಾಶ ನ್ಯೂಸ್ ಪ್ರಕಟಿಸಿತ್ತು.
ಇದನ್ನೂ ಓದಿ: