ಮೇ 22 ಬೆಳ್ತಂಗಡಿಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

 

 

ಬೆಳ್ತಂಗಡಿ:ಮೇ 22 ರಂದು ಬೆಳ್ತಂಗಡಿ ಗುರುನಾರಾಯಣ ಸಭಾಭವನದಲ್ಲಿ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸ್ವಯಂಪ್ರೇರಿತ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ ಎಂದು ಶ್ರೀ ಗುರುನಾರಾಯಣ ಸೇವಾ ಸಂಘ ಬೆಳ್ತಂಗಡಿ ಅಧ್ಯಕ್ಷ ಚಿದಾನಂದ ಎಲ್ದಕ್ಕ ಹೇಳಿದರು ಹೇಳಿದರು.ಅವರು ಬೆಳ್ತಂಗಡಿ ಪತ್ರಿಕಾಭವನದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ

ರಕ್ತನಿಧಿ ಕೇಂದ್ರ ಸರಕಾರಿ ವೆನ್ ಲಾಕ್ ಆಸ್ಪತ್ರೆ ಮಂಗಳೂರು ಮತ್ತು ಜೆ.ಸಿ.ಐ ಬೆಳ್ತಂಗಡಿ ಮಂಜುಶ್ರೀ ಇದರ ನೇತೃತ್ವದಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ, ತಾಲೂಕು ಯುವ ಬಿಲ್ಲವ ವೇದಿಕೆ ಬೆಳ್ತಂಗಡಿ ತಾಲೂಕು, ಮಹಿಳಾ ಬಿಲ್ಲವ ವೇದಿಕೆ , ತಾಲೂಕು ಯುವ ವಾಹಿನಿ ಬೆಳ್ತಂಗಡಿ ಘಟಕ, ಯುವ ವಾಹಿನಿ ವೇಣೂರು ಘಟಕ ಇದರ ಸಹಭಾಗಿತ್ವದಲ್ಲಿ‌ ನಡೆಯಲಿದೆ.
ಬೆಳಿಗ್ಗೆ 9-30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು ನಾವೂರು ಆರೋಗ್ಯ ಕ್ಲಿನಿಕ್ ನ ಡಾ. ಪ್ರದೀಪ್ ನಾವೂರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಅಧ್ಯಕ್ಷತೆಯನ್ನು ಜೆ.ಸಿ.ಐ ಬೆಳ್ತಂಗಡಿ ಅಧ್ಯಕ್ಷ ಪ್ರಸಾದ್ ಬಿ ಎಸ್ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ವೆನ್ ಲಾಕ್ ಆಸ್ಪತ್ರೆಯ ಡಾ.ಶರತ್ ಕುಮಾರ್ ರಾವ್ .ಜೆ. ಬೆಳ್ತಂಗಡಿ ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಎಲ್ದಕ್ಕ, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ನಿತೀಶ್ ಕೋಟ್ಯಾನ್, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಸುಜಿತಾ.ವಿ. ಬಂಗೇರ,ಯುವ ವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಸುಜಾತ ಅಣ್ಣಿ ಪೂಜಾರಿ,ಡಿ.‌ಜಗದೀಶ್ ಆರೋಗ್ಯ ಸಂಚಾಲಕರು ಮತ್ತು ಕಾರ್ಯಕ್ರಮ ಸಂಯೋಜಕರು, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ, ಯೋಗೀಶ್ ಬಿ. ಅಧ್ಯಕ್ಷರು ಯುವ ವಾಹಿನಿ ವೇಣೂರು ಘಟಕ ಇವರು ಭಾಗವಹಿಸಲಿದ್ದಾರೆ.ಎಂದರು. ಪತ್ರಿಕಾಗೋಷ್ಠಿಯಲ್ಲಿ ಸುಜಿತಾ ವಿ. ಬಂಗೇರ, ಪ್ರಸಾದ್ ಬಿ.ಎಸ್, ಜಗದೀಶ್, ಜಯವಿಕ್ರಮ ಕಲ್ಲಾಪು, ದಿನೇಶ್ ಕೋಟ್ಯಾನ್ ಬೆಳಾಲು ಉಪಸ್ಥಿತರಿದ್ದರು.

error: Content is protected !!