ಲಾಯಿಲ ಬಾವಿಗೆ ಬಿದ್ದ ಹಸು ಅಗ್ನಿಶಾಮಕ ದಳದಿಂದ ರಕ್ಷಣೆ

 

ಬೆಳ್ತಂಗಡಿ: ಲಾಯಿಲ ಗ್ರಾಮದ ಕುಂಡಡ್ಕ ಎಂಬಲ್ಲಿ ದನವೊಂದು ಅಂಗಳದಲ್ಲಿದ್ದ ಬಾವಿಗೆ ಬಿದ್ದ ಘಟನೆ ನಡೆದಿದೆ.ಕುಂಡಡ್ಕ ತೇಜ್ ಕಿರಣ್ ರಾವ್ ಎಂಬವರ  ಮನೆಯ ಅಂಗಳದಲ್ಲಿ   ಸುಮಾರು 30 ಅಡಿ ಆಳದ  ಅವರಣ ಗೋಡೆಯಿರುವ ಬಾವಿಗೆ ಬಿದಿದ್ದು ಮನೆಯವರು  ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ .

 

 

 

 

ತಕ್ಷಣ ಸ್ಪಂದಿಸಿದ  ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಬಂದ್ದು ದನವನ್ನು ಬಾವಿಯಿಂದ ಎತ್ತಿ ರಕ್ಷಿಸಿದ್ದಾರೆ . ಬಾವಿಯಲ್ಲಿ ನೀರು ಇದ್ದುದರಿಂದ ದನಕ್ಕೆ ಯಾವುದೇ ರೀತಿಯ ಅಪಾಯವಾಗಿಲ್ಲ.

ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗಳಾದ ಠಾಣಾಧಿಕಾರಿ ಕೆ. ವಿಶ್ವನಾಥ್ ಪೂಜಾರಿ, ಚಾಲಕ ಲಿಂಗರಾಜ್ ಲಮಾಣಿ, ಮಂಗಳದಾಸ್ ನಾಯ್ಕ್ , ಮಹಮ್ಮದ್ ಜಂಬಗಿ, ವಿನೋದ್ ರಾಜ್ ಹಾಗೂ ಲಾಯಿಲ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆ ಸೇರಿದಂತೆ ಸ್ಥಳೀಯರು ಸಹಕರಿಸಿದರು.

error: Content is protected !!