ಸ್ವ ಉದ್ಯೋಗದ ಮೂಲಕ ಸ್ವಾವಲಂಬಿ ಬದುಕು ಲಾಯಿಲದ ಸ್ನೇಹ ಸಂಜೀವಿನಿಯ ಮಹಿಳೆಯರ ಸಾಧನೆ ವಿವಿಧ ಬಗೆಯ ಮೀನಿನ ಆಹಾರ ಪದಾರ್ಥಕ್ಕೆ ಉತ್ತಮ ಬೇಡಿಕೆ

 

 

ವರದಿ:  ಪ್ರಸಾದ್ ಶೆಟ್ಟಿ ಎಣಿಂಜೆ

 

ಬೆಳ್ತಂಗಡಿ: ಸ್ವ ಉದ್ಯೋಗದ ಮೂಲಕ ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಪ್ರಾರಂಭವಾದ ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರು ವಿವಿಧ ಬಗೆಯ ತಿಂಡಿ ತಿನಸುಗಳನ್ನು ತಯಾರಿಸಿ ಎಲ್ಲಡೆ ಪ್ರಸಿದ್ಧಿಯಾಗಿದ್ದಾರೆ.ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಸ್ನೇಹ ಸಂಜೀವಿನಿ ಸ್ವ ಸಹಾಯ ಸಂಘದ ಮಹಿಳೆಯರು ಸೇರಿಕೊಂಡು ಸ್ವಂತ ನೆಲೆಯಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂಬ ಧೃಡ ಸಂಕಲ್ಪವನ್ನು ಮಾಡಿಕೊಂಡು ಒಂದೆಡೆ ಸೇರಿ ಆದಾಯ ಗಳಿಸುವಂತಹ ಸಣ್ಣ ಮಟ್ಟಿನ ಅಣಬೆ ಕೃಷಿ ಪ್ರಾರಂಭಿಸಿ ಅದನ್ನು ಮನೆ ಮನೆಗೆ ಸಂಘದ ಸದಸ್ಯರು ಸೇರಿಕೊಂಡು ಮಾರಾಟ ಮಾಡಿ ಅದರಿಂದ ಬಂದಂತಹ ಆದಾಯದಲ್ಲಿ ಕೋಳಿ , ಆಡು ಸಾಕಣಿಕೆಯನ್ನು ಪ್ರಾರಂಭಿಸಿಕೊಂಡು ನಂತರ ತಮ್ಮ ಉದ್ಯಮವನ್ನು ವಿಸ್ತರಿಸಿಕೊಂಡು ವಿವಿಧ ಇಲಾಖೆಗಳ ಸಹಕಾರ ಮಾಹಿತಿ ಪಡೆದುಕೊಂಡು ಮೀನಿನ ಆಹಾರೋತ್ಪನ್ನಗಳನ್ನು ಪ್ರಾರಂಭಿಸಿ ರಾಜ್ಯದಾದ್ಯಂತ ಪ್ರಸಿದ್ಧಿ ಪಡೆಯುತಿದ್ದಾರೆ.

 

 

 

ಇವರ ಶ್ರಮಕ್ಕೆ ಲಾಯಿಲ ಗ್ರಾಮ ಪಂಚಾಯತ್ ಸಂಪೂರ್ಣ ಸಹಕಾರ ಪ್ರೋತ್ಸಾಹ ನೀಡಿ ಆಹಾರೋತ್ಪನ್ನ ತಯಾರಿಕೆಗಾಗಿ ಅವರಿಗೆ ನೂತನ ಕಟ್ಟಡವನ್ನೂ ನಿರ್ಮಿಸಿಕೊಟ್ಟಿದೆ. ಈ ಬಾರಿಯ ರಂಝಾನ್ ತಿಂಗಳಲ್ಲಿ ಮನೆ ಮನೆಗೆ ವಿವಿಧ ಬಗೆಯ ಬಿರಿಯಾನಿ ,ಚಿಕನ್ ರೋಲ್, ಕಟ್ಲಿಟ್ಟ್, ಚಿಕನ್ ಲಾಲಿಪಪ್, ರೊಟ್ಟಿ ಸೇರಿದಂತೆ ಸುಮಾರು 10 ಕ್ಕಿಂತಲೂ ಅಧಿಕ ಬಗೆಯ ಆಹಾರಗಳನ್ನು ತಯಾರಿಸುತ್ತಾರೆ ಬೆಳಗ್ಗೆ 10 ಗಂಟೆ ತನಕ ಇವರಿಗೆ ಪೋನ್ ಮಾಡಿ ಐಟಂ ಬಗ್ಗೆ ಆರ್ಡರ್ ನೀಡಿದ್ದಲ್ಲಿ ಸಂಜೆ 5 ಗಂಟೆಗೆ ಆರ್ಡರ್ ನೀಡಿದ ಆಹಾರ ಪ್ಯಾಕ್ ಸಿದ್ಧವಾಗುತ್ತದೆ ಅದನ್ನು ಬಂದು ಪಡೆದುಕೊಂಡು ಹೋಗುತ್ತಾರೆ.

 

 

ದಿನವೊಂದಕ್ಕೆ 300 ರಷ್ಟು ಬಿರಿಯಾನಿ ಪ್ಯಾಕ್ ಅಲ್ಲದೇ ಇನ್ನಿತರ ತಿಂಡಿಗಳು ಇವರಿಂದ ಪಡೆದುಕೊಂಡು ಹೋಗಿದ್ದಾರೆ. ಅದಲ್ಲದೇ ಉತ್ತಮ ಕ್ವಾಲಿಟಿಯ ಆಹಾರ ತಯಾರಿಕೆ ಮಾಡಿಕೊಟ್ಟಿರುವುದರಿಂದ ಈಗಲೂ ಬಹಳ ಬೇಡಿಕೆ ಬರುತಿದೆಯಂತೆ. ಇದನ್ನು ಮುಂದುವರಿಸಿಕೊಂಡು ಹೋಗುವ ಬಗ್ಗೆಯೂ ಯೋಚನೆ ಮಾಡುತಿದ್ದಾರೆ.

 

ಸ್ನೇಹ ಸಂಜೀವಿನಿ
ಸ್ವ ಸಹಾಯ ಸಂಘ ಲಾಯಿಲ ಇದರ ಸದಸ್ಯೆ ಸಾವಿತ್ರಿ ಎಚ್. ಎಸ್. ಪ್ರತಿಕ್ರಿಯೆ ನೀಡಿ ಕಳೆದ 20 ವರ್ಷಗಳಿಂದ ಲಾಯಿಲ ಗ್ರಾಮದಲ್ಲಿ ಸ್ನೇಹ ಸಂಜೀವಿನಿ ಸ್ವ ಸಹಾಯ ಸಂಘವನ್ನು ರಚಿಸಿ ಮೊದಲು ಸಣ್ಣ ರೀತಿಯ ಅಂತರೀಕ ಸಾಲವನ್ನು ಪಡೆದು ಅಣಬೆ ಕೃಷಿ, ಕೋಳಿ, ಆಡು ಸಾಕಣೆಯ ಮೂಲಕ ನಮ್ಮದೇ ಆದ ಸ್ವ ಉದ್ಯೋಗವನ್ನು ಮಾಡಿಕೊಂಡು ಬರುತಿದ್ದೇವು. ಕಳೆದ ವರ್ಷ ಸರ್ಕಾರದ ಸೂಚನೆಯಂತೆ ಜಿಲ್ಲೆಯಿಂದ ಬಂದಂತಹ ಸುತ್ತೊಲೆಯಲ್ಲಿ ಮೀನಿನ ಖಾದ್ಯ ತಯಾರಿಕೆಯ ಬಗ್ಗೆ ಮಾಹಿತಿ ನೋಡಿ ಪಿಶರೀಸ್ ಕಾಲೇಜು, ಬಿವಿಟಿ, ನಬಾರ್ಡ್, ಸಹಕಾರದಲ್ಲಿ ಶಾಹಿದಾ ಬೇಗಂ, ನಸೀಮಾ ಮತ್ತು ಹರ್ಷಿಯಾ ಹಾಗೂ ನಾನು ಸೇರಿಕೊಂಡು ನಾಲ್ಕು ಮಂದಿ ತರಬೇತಿಗಾಗಿ ಮಂಗಳೂರಿಗೆ ಹೋದೆವು ಅಲ್ಲಿ ನಮಗೆ ನೀಡಿದಂತಹ ತರಬೇತಿಯ ಮಾಹಿತಿಗಳನ್ನು ಸರಿಯಾಗಿ ತಿಳಿದುಕೊಂಡೆವು ನಾಲ್ಕು ಮಂದಿ ಸದಸ್ಯರುಗಳು ನಮ್ಮ ಸಂಘದ ಮೂಲಕ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ನಾವು ಕೂಡ ಸ್ವಾವಲಂಬಿ ಬದುಕು ಕಟ್ಟಿಕೊಳ್ಳ ಬೇಕು ಎಂಬ ದೊಡ್ಡ ಕನಸು ಹೊತ್ತು ಮೀನಿನ  ಖಾದ್ಯ ಹಾಗೂ ತಿಂಡಿಗಳ ತಯಾರಿಕೆಯನ್ನು ಪ್ರಾರಂಭಿಸಿದೆವು ಇದಕ್ಕೆ ನಮಗೆ ಎಲ್ಲ ರೀತಿಯಲ್ಲೂ ಎಲ್ಲಾ ಕಡೆಗಳಿಂದ ಬೆಂಬಲ ಸಿಕ್ಕಿತು ಬೆಂಗಳೂರು ಸೇರಿದಂತೆ ಕೃಷಿಮೇಳ ಜಿಲ್ಲೆಯ ಕೆಲವು ಕಡೆಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇವೆ ಅದಲ್ಲದೇ ಕಳೆದ ಮಾರ್ಚ್ ತಿಂಗಳಲ್ಲಿ ವಿಧಾನ ಸೌಧದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ನಬಾರ್ಡ್ ನವರು ಮಂತ್ರಿಮಹಲ್ ನಲ್ಲಿ ಮಹಿಳಾ ದಿನಾಚರಣೆಗೆ ಅವಕಾಶ ಮಾಡಿಕೊಟ್ಟಿದ್ದಾರೆ ಇದರಿಂದ ನಮಗೆ ಇನ್ನಷ್ಟು ಮುಂದುವರಿಯಲು ಅವಕಾಶ ಸಿಕ್ಕಂತಾಯಿತು.ಇದೆಲ್ಲದರ ನಡುವೆ ರಂಝಾನ್ ತಿಂಗಳಲ್ಲಿ ಏನಾದರೂ ಮಾಡಬೇಕು ಎಂದು ಯೋಚಿಸಿದಾಗ ಮನೆ ಮನೆಗೆ ಆಹಾರ ತಯಾರಿಸಿ ನೀಡುವ ಬಗ್ಗೆ ನಾಲ್ಕು ಮಂದಿ ನಾವು ಕಾರ್ಯಯೋಜನೆಗಳನ್ನು ಮಾಡಿಕೊಂಡೆವು ಇದೂ ಕೂಡ ನಮಗೆ ಯಶಸ್ಸು ತಂದುಕೊಟ್ಟಿದೆ .

 

ಮತ್ತೋರ್ವ ಸದಸ್ಯೆ ಹರ್ಷಿಯಾ ಮಾತನಾಡಿ
ಕಳೆದ ಒಂದು ವರ್ಷಗಳಿಂದ ನಾವೆಲ್ಲರೂ ಸೇರಿಕೊಂಡು ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿ ಮಾರುಕಟ್ಟೆಗೆ ಮಾರಾಟ ಮಾಡುತಿದ್ದೇವೆ ಉತ್ತಮ ರೀತಿಯ ಬೇಡಿಕೆಯೂ ಸಿಗುತ್ತಿದೆ ಅದೇ ರೀತಿ ಎಲ್ಲರೂ ನಮ್ಮನ್ನು ಪ್ರೋತ್ಸಾಹಿಸುತಿದ್ದಾರೆ ರಂಝಾನ್ ತಿಂಗಳಲ್ಲಿ ಆಹಾರ ತಯಾರಿಸಿಕೊಡುತಿದ್ದೇವೆ ಗುರುವಾಯನಕೆರೆ, ಬೆಳ್ತಂಗಡಿ, ಉಜಿರೆ ಭಾಗಗಳಿಂದ ನಮಗೆ ವಿವಿಧ ಬಗೆಯ ಆಹಾರ ತಿಂಡಿ ತಯಾರಿಸಿಕೊಡಲು ಆರ್ಡರ್ ಗಳು ಬರುತಿದೆ. ಜನರು ನಮ್ಮನ್ನು ಗುರುತಿಸಿಕೊಳ್ಳುತಿದ್ದಾರೆ ಹಾಗೂ ಎಲ್ಲರೂ ಪ್ರೋತ್ಸಾಹಿಸುತಿದ್ದಾರೆ ಎಂದು ಹೇಳಲು ಸಂತೋಷವಾಗುತ್ತಿದೆ .
ಶ್ರಮ ಪಟ್ಟರೆ ಯಶಸ್ಸು ಖಂಡಿತ ಸ್ನೇಹ ಮಹಿಳಾ ಸ್ವ ಸಹಾಯ ಸಂಘದ ಮಹಿಳೆಯರ ಶ್ರಮಕ್ಕೆ ಹಾಗೂ ಸಾಧನೆಗೆ ಇನ್ನಷ್ಟು ಶಕ್ತಿ ದೊರೆತು ಇನ್ನಿತರ ಮಹಿಳೆಯರಿಗೂ ಪ್ರೇರಣೆ ದೊರೆಯಲಿ ಎನ್ನುವುದೇ ನಮ್ಮ ಆಶಯ.

error: Content is protected !!