ಎಂಡೋಸಲ್ಫಾನ್ ಪೀಡಿತ ಮಕ್ಕಳ ಸಂಕಷ್ಟಕ್ಕೆ ಸರಕಾರ ತಕ್ಷಣ ಸ್ಪಂದಿಸಬೇಕು :ವಿ.ಪ.ಶಾಸಕ ಹರೀಶ್ ಕುಮಾರ್ ಆಗ್ರಹ ಉಜಿರೆ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದ ವಿವಿಧ ಕಾಮಗಾರಿಗಳ ಉದ್ಘಾಟನೆ

 

 

ಬೆಳ್ತಂಗಡಿ:ಎಂಡೋಪೀಡಿತ ಮಕ್ಕಳದ್ದು ಕಾಯಿಲೆಯಲ್ಲ,ಅದು ಮಾನವ ಸೃಷ್ಟಿ ಕಾಯಿಲೆ. ಸರಕಾರ ಗೇರು ಕೃಷಿಗೆ ಔಷಧ ಸಿಂಪಡಣೆಯಿಂದ ಉಂಟಾದ ತೊಂದರೆಯ ಗಂಭೀರ ಸಮಸ್ಯೆಗೆ ಸಮರ್ಪಕ ಪರಿಹಾರವಾಗಿಲ್ಲ. ಸಾನಿಧ್ಯ ಸಂಸ್ಥೆ ಅವರ ಮಕ್ಕಳ ಆರೈಕೆಯ ಉಸ್ತುವಾರಿ ವಹಿಸಿಕೊಂಡು ಅಗತ್ಯ ಸೌಲಭ್ಯಗಳನ್ನು ದಾನಿ ಸಂಸ್ಥೆಗಳ ನೆರವಿನಿಂದ ಒದಗಿಸುತ್ತಿದೆ. ವಿಧಾನ ಪರಿಷತ್ತಿನಲ್ಲೂ ಅವರ ಸಂಕಷ್ಟ ಹಾಗೂ ಪರಿಹಾರ ಒದಗಿಸುವ ಕುರಿತು ಪ್ರಸ್ತಾವಿಸಿ ಸರಕಾರದ ಗಮನ ಸೆಳೆದಿದ್ದೇನೆ ಸಂಸ್ಥೆ ಪರಿಪೂರ್ಣವಾಗಿ ಕಾರ್ಯನಿರ್ವಹಿಸಲು ಸರಕಾರ ಹಾಗು ಸಂಘ ಸಂಸ್ಥೆಗಳ ನೆರವು ಅಗತ್ಯವಾಗಿದೆ ಎಂದು ವಿಧಾನಪರಿಷತ್ ಶಾಸಕ ಹರೀಶ್ ಕುಮಾರ್ ಹೇಳಿದರು. ಅವರು ಎ 26 ರಂದು ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆದ ಉಜಿರೆಯ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರ(ಎಂಡೋಸಂತ್ರಸ್ತ ಮಕ್ಕಳ )ದ ಪೂರ್ಣಗೊಂಡ ಕಾಮಗಾರಿಗಳ ಲೋಕಾರ್ಪಣೆ ಬಳಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

 

 

ಬೆಳ್ತಂಗಡಿ ವೃತ್ತ ನಿರೀಕ್ಷಕ ಶಿವಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಎಂಡೋ ಸಂತ್ರಸ್ತ ಮಕ್ಕಳಲ್ಲೂ ಉತ್ತಮ ಪ್ರತಿಭೆಯಿದೆ. ಸಾನಿಧ್ಯ ಸ್ವಯಂಸೇವಾ ಸಂಸ್ಥೆ ಮಕ್ಕಳ ಬದುಕಿನಲ್ಲಿ ಭರವಸೆ ಮೂಡಿಸುವ ಕೆಲಸ ಮಾಡುತ್ತಿದೆ. ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಸಂಸ್ಥೆ ಅವರ ಶಿಕ್ಷಣ ಹಾಗು ಪ್ರತಿಭಾ ವಿಕಸನಕ್ಕೆ ಶ್ರಮಿಸುತ್ತಿದೆ. ಸ್ವಂತ ನಿವೇಶನದಲ್ಲಿ ವಸತಿ ಹಾಸ್ಟೆಲ್ ಆರಂಭಿಸುವ ಯೋಜನೆಗೆ ಸರಕಾರ ಹಾಗೂ ಸಂಘ ಸಂಸ್ಥೆಗಳು ನೆರವು ನೀಡಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಅವರ ಅರೋಗ್ಯ ಹಾಗೂ ವ್ಯಕ್ತಿತ್ವದಲ್ಲಿ ಬದಲಾವಣೆಯಾಗಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಧನಕೀರ್ತಿ ಅರಿಗ ಮತ್ತು ಬೆಳ್ತಂಗಡಿ ಮಂಜುಶ್ರೀ ಜೆ ಸಿ ಯ ಪ್ರಸಾದ್ ಎಂಡೋ ಪೀಡಿತ ಮಕ್ಕಳಿಗೆ ಅನುಕಂಪ ಬೇಡ ,ಸ್ಪಂದನೆ ಮಾಡುವುದು ಶ್ರೇಷ್ಠ . ಅವರನ್ನು ಮುಖ್ಯವಾಹಿನಿಗೆ ತರುವ ಗುರಿ ಈಡೇರಲಿ ಎಂದು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಸಾನಿಧ್ಯ ಕೌಶಲ್ಯ ಕೇಂದ್ರದ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸಿದ ಗುತ್ತಿಗೆದಾರ ಮಂಜುನಾಥ ಕಾಮತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಶ್ರೀ ಗಣೇಶ್ ಸೇವಾ ಟ್ರಸ್ಟ್ ಅಧ್ಯಕ್ಷ ಮಹಾಬಲ ಮಾರ್ಲ ,ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೋಡೆಲ್ ಅಧಿಕಾರಿ ಡಾ! ನವೀನಚಂದ್ರ ಕುಲಾಲ್,ಖಜಾಂಚಿ ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು. ಸಾನಿಧ್ಯ ಕೇಂದ್ರದ ಮೇಲ್ವಿಚಾರಕಿ ಮಲ್ಲಿಕಾ ಕೇಂದ್ರದ ವರದಿ ಮಂಡಿಸಿ,ಡಾ! ವೀರೇಂದ್ರ ಹೆಗ್ಗಡೆಯವರ ಶುಭ ಸಂದೇಶ ವಾಚಿಸಿದರು. ಆಡಳಿತಾಧಿಕಾರಿ ಡಾ! ವಸಂತಕುಮಾರ್ ಶೆಟ್ಟಿ ಸ್ವಾಗತಿಸಿ ,ಪ್ರಸ್ತಾವಿಸಿ ಉಜಿರೆಯ ಸಾನಿಧ್ಯ ಕೇಂದ್ರಕ್ಕೆ ಸರಕಾರದಿಂದ ಸ್ವಂತ ನಿವೇಶನ ಹಾಗೂ ವಸತಿ ಹಾಸ್ಟೆಲ್ ನಿರ್ಮಿಸಲು ನೆರವು ಹಾಗೂ ಸಂಘ ಸಂಸ್ಥೆಗಳ ಸಹಕಾರ ಅಗತ್ಯವೆಂದು ಹೇಳಿದರು. ನಿರ್ವಹಣಾ ಮೇಲ್ವಿಚಾರಕ ದೀಪಕ್ .ಜಿ.ನಿರೂಪಿಸಿದ ಕಾರ್ಯಕ್ರಮದಲ್ಲಿ ಕರಕುಶಲ ಶಿಕ್ಷಕಿ ಹೇಮಾವತಿ ವಂದಿಸಿದರು.

 

 

 

ವಿಧಾನ.ಪರಿಷತ್  ಶಾಸಕ ಪ್ರತಾಪಸಿಂಹ ನಾಯಕ್ ಅವರ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ 9.46 ಲಕ್ಷ ಅನುದಾನದಿಂದ ಸಾನಿಧ್ಯ ಕೇಂದ್ರಕ್ಕೆ ಆವರಣ ಗೋಡೆ ವಾಹನ ನಿಲುಗಡೆ ಶೆಡ್ ,ನೀರಿನ ಸೌಕರ್ಯ ಮತ್ತು ಉಜಿರೆ ಗ್ರಾ.ಪಂ.ವತಿಯಿಂದ ಇಂಟರ್ ಲಾಕ್ ಮತ್ತು ಉದ್ಯಾನವನ ನಿರ್ಮಾಣಕ್ಕೆ ರೂ 1 ಲಕ್ಷ ಅನುದಾನದ ಕಾಮಗಾರಿಗಳನ್ನು ವಿ.ಪ.ಶಾಸಕ ಪ್ರತಾಪಸಿಂಹ ನಾಯಕ್ ಉದ್ಘಾಟಿಸಿದರು. ಗ್ರಾ.ಪಂ.ಅಧ್ಯಕ್ಷೆ ಪುಷ್ಪಾವತಿ ಆರ್ .ಶೆಟ್ಟಿ ಉಪಸ್ಥಿತರಿದ್ದರು. ಎಂಡೋ ಸಂತ್ರಸ್ತ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ “ಶ್ವೇ ತಕುಮಾರ ಪುನರ್ಜನ್ಮ’ಯಕ್ಷಗಾನ ಪ್ರದರ್ಶನ,ಅಮರ್ ಜವಾನ್ ನೃ ತ್ಯರೂಪಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

error: Content is protected !!