ದೇಶದ ಸಾರ್ವಭೌಮತ್ವದ ಉಳಿವಿಗೆ ಸಂಘಟಿತ ಹೋರಾಟ ಅನಿವಾರ್ಯ: ರಕ್ಷಿತ್ ಶಿವರಾಂ ದೊಂದಿ ಹಣತೆ ಹಚ್ಚುವ ಮೂಲಕ ವಿಭಿನ್ನ ರೀತಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

 

 

ಬೆಳ್ತಂಗಡಿ:ದೇಶವು ವಿಷಮ ಪರಿಸ್ಥಿತಿಯನ್ನು ಎದುರಿಸುವ ಈ ಸಂದರ್ಭದಲ್ಲಿ ಅಂಬೇಡ್ಕರ್ ಅವರ ವಿಚಾರಗಳು ಅತ್ಯಂತ ಪ್ರಸ್ತುತವಾಗಿದೆ. ದೇಶದ ಸಂವಿಧಾನವನ್ನು ಉಳಿಸಿ , ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು
ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ,ಬೆಳ್ತಂಗಡಿ ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ ಹೇಳಿದರು ಅವರು ಬೆಸ್ಟ್ ಫೌಂಡೇಷನ್ ಬೆಳ್ತಂಗಡಿ ಆಶ್ರಯದಲ್ಲಿ ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್ ವಾದ ನಗರ ಶಾಖೆ , ಸಂಗಮ್ ಫ್ರೆಂಡ್ಸ್ ಕ್ಲಬ್,ಅಣ್ಣ್ ತಮ್ಮ ಫ್ರೆಂಡ್ಸ್ ಸುದೆಮುಗೇರು ಇವರ ಸಹಕಾರದೊಂದಿಗೆ ಬೆಳ್ತಂಗಡಿ ಸುದೆಮುಗೇರು ಅಂಗನವಾಡಿ ಬಳಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 131 ನೇ ಜನ್ಮದಿನಾಚರಣೆಯನ್ನು ದೊಂದಿ ಹಾಗೂ ಹಣತೆ ಹಚ್ಚುವ ಮೂಲಕ ಉದ್ಘಾಟಿಸಿ ಮಾತನಾಡಿದರು

ರೈತ, ಕಾರ್ಮಿಕ ,ನೌಕರ , ಮಹಿಳೆ , ಸೇರಿದಂತೆ ಸರ್ವರಿಗೂ ಸಮಪಾಲು ನೀಡಿದ ಮಹಾನ್ ಚೇತನವನ್ನು ಎಂದಿಗೂ ಮರೆಯಬಾರದು ಎಂದ ಅವರು ದೇಶದ ಸೌಹಾರ್ದತೆ , ಐಕ್ಯತೆ, ಸಾರ್ವಭೌಮತ್ವದ ಉಳಿವಿಗಾಗಿ ನಾವು ಸಂಘಟಿತ ಹೋರಾಟ ನಡೆಸಬೇಕಾಗಿದೆ. ಅನ್ಯಾಯ , ಅಸಮಾನತೆ , ಸಾಮಾಜಿಕ ತಾರತಮ್ಯದ ವಿರುದ್ಧದ ಹೋರಾಟವನ್ನು ಗಟ್ಟಿಗೊಳಿಸುವ ಮೂಲಕ ಅಂಬೇಡ್ಕರ್ ಅವರ ವಿಚಾರಗಳನ್ನು ಜೀವಂತವಾಗಿಡುವುದು ಇಂದಿನ ತುರ್ತು ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ
ಸಂವಿಧಾನದ ಪೀಠಿಕೆ ಪಠಣ , ಹೋರಾಟದ ಹಾಡು , ಜೈಭೀಮ್ ಚಲನಚಿತ್ರ ಪ್ರದರ್ಶನ ನಡೆಯಿತು. ಸೇರಿದ್ದ ಗಣ್ಯರು
ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಈ ಸಂದರ್ಭದಲ್ಲಿ ದಸಂಸ (ಅಂಬೇಡ್ಕರ್ ವಾದ) ತಾಲೂಕು ಸಂಚಾಲಕ ನೇಮಿರಾಜ್ ಕಿಲ್ಲೂರು , ಮೈಸೂರು ವಿಭಾಗ ಸಂಘಟನಾ ಸಂಚಾಲಕ ಬಿ.ಕೆ ವಸಂತ , ಪಟ್ಟಣ ಪಂಚಾಯತ್ ಸದಸ್ಯರಾದ ಜಗದೀಶ್ ಡಿ , ಜನಾರ್ದನ ಕುಲಾಲ್ , ಪಟ್ಟಣ ಪಂಚಾಯತ್ ಮಾಜಿ ನಾಮನಿರ್ದೇಶಿತ ಸದಸ್ಯ ಜನಾರ್ದನ ಬಂಗೇರ ಮೂಡಾಯಿಗುತ್ತು , ಮಾಲಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬೇಬಿ ಸುವರ್ಣ , ಪದ್ಮನಾಭ ಸಾಲಿಯಾನ್ , ದಲಿತ ಮುಖಂಡ ನಾಗರಾಜ್ ಲಾಯಿಲ , ಯುವ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಪೈ ಬಂಗಾಡಿ , ಯುವ ಇಂಟಕ್ ಅಧ್ಯಕ್ಷ ನವೀನ್ ಗೌಡ ಸವಣಾಲು , ತಾಲೂಕು ಕಾಂಗ್ರೆಸ್ ವಕ್ತಾರ, ನ್ಯಾಯವಾದಿ ಮನೋಹರ್ ಇಳಂತಿಲ , ಕಾಂಗ್ರೇಸ್ ಮುಖಂಡ ಅಜಯ್ ಎ. ಜೆ , ದಸಂಸ ಅಂಬೇಡ್ಕರ್ ವಾದದ ಬೆಳ್ತಂಗಡಿ ನಗರ ಅಧ್ಯಕ್ಷ ದಿನೇಶ್ ಸುದೆಮುಗೇರು , ಸಂಗಮ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಬಿ.ಎಚ್ ರಾಜು , ಶೈನ್ ಫ್ರೆಂಡ್ಸ್ ಸುದೆಮುಗೇರು ಅಧ್ಯಕ್ಷ ಹಕೀಂ ಸುದೆಮುಗೇರು , ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕ ಶೇಖರ್ ಲಾಯಿಲ ಉಪಸ್ಥಿತರಿದ್ದರು. ಆಕಾಶವಾಣಿ ಕಲಾವಿದ ಹೆಚ್ ಕೃಷ್ಣಯ್ಯ ಲಾಯಿಲ ಮತ್ತು ಕಲಾ ಶಿಕ್ಷಕ ಪ್ರಶಾಂತ್ ಬೆಳ್ತಂಗಡಿ ಅವರು ಹೋರಾಟದ ಹಾಡುಗಳನ್ನು ಹಾಡಿದರು. ಉಪನ್ಯಾಸಕ ಸುಕೇಶ್ ಮಾಲಾಡಿ ಕಾರ್ಯಕ್ರಮ ನಿರೂಪಿಸಿ , ವಂದಿಸಿದರು.

error: Content is protected !!