ಪಟ್ರಮೆ ಶಾಲೆಯಲ್ಲಿ ಚಿಣ್ಣರ ಕಲರವ ಕಾರ್ಯಕ್ರಮ

 

 

ಬೆಳ್ತಂಗಡಿ: ಸರಕಾರಿ ಉನ್ನತ ಹಿರಿಯ ಪ್ರಾರ್ಥಮಿಕ.ಶಾಲೆ ಪಟ್ರಮೆ ಇಲ್ಲಿ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ಮಂಗಳೂರು, ಶಿಕ್ಷಣ ಸಂಪನ್ಮೂಲ ಕೇಂದ್ರ ಬೆಳ್ತಂಗಡಿ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಬೆಳ್ತಂಗಡಿ ಇವರ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ಚಿಣ್ಣರ ಕಲರವ ಕಾರ್ಯಕ್ರಮ ಎ 5 ರಂದು ನಡೆಯಿತು.
ಕಾರ್ಯಕ್ರಮವನ್ನು ಪಟ್ರಮೆ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಧನಂಜಯ ಗೌಡ ಉದ್ಘಾಟಿಸಿ ಶುಭ ಹಾರೈಸಿದರು. ಚಿನ್ನರ ಕಲರವದಲ್ಲಿ ಖ್ಯಾತ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಶೀನ ನಾಡೋಳಿ ಮತ್ತು ವಿ.ಕೆ .ವಿಟ್ಲ ವಿವಿಧ ಪಠ್ಯೇತರ ಚಟುವಟಿಕೆಗಳನ್ನು ವಿದ್ಯಾರ್ಥಿಗಳಲ್ಲಿ ಮಾಡಿಸುವ ಮೂಲಕ ಮನರಂಜಿಸಿದರು. ಪಡಿ ಸಂಸ್ಥೆ ಮಂಗಳೂರಿನ ತರಬೇತಿ ಸಂಯೋಜಕರಾದ ಶ್ರೀಮತಿ ಕಸ್ತೂರಿ ” ಶಿಕ್ಷಣದಲ್ಲಿ ಜೀವನ ಮೌಲ್ಯ ಮತ್ತು ಹಕ್ಕುಗಳು” ಈ ಬಗ್ಗೆ ಮಾಹಿತಿ ನೀಡಿದರು. ದಂತ ವೈದ್ಯೆ ಯಾದ ಶ್ರೀಮತಿ ಡಾ. ದೀಪಾಲಿ ಡೊಂಗ್ರೆ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಹಲ್ಲಿನ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮಕ್ಕೆ ಪಡಿ ಸಂಸ್ಥೆಯ ಮಂಗಳೂರು, ರೋಟರಿ ಆನ್ಸ್ ಬೆಳ್ತಂಗಡಿ, ಗ್ರಾ. ಪಂ. ಪಟ್ರಮೆ, ಪಟ್ರಮೆ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಸಹಕಾರ ನೀಡಿದರು.
ಸಮಾರಂಭದಲ್ಲಿ ರೋಟರಿ ಅಧ್ಯಕ್ಷರಾದ ಶ್ರೀಮತಿ ನವೀನ ಜಯಕುಮಾರ್ ,ಕಾರ್ಯದರ್ಶಿ ಡಾಕ್ಟರ್ ಭಾರತಿ ಬೆನಕ ಸೆಂಟರ್ ,ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮುಕ್ತೇಶ್ವರ ಶ್ರೀ ದೇವಾಪಾಲ ಅಜ್ರಿ , ಉಳಿಯ ಬೀಡು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಶ್ರೀನಿವಾಸಗೌಡ ಪಟ್ರಮೆ ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷೆ ಶ್ರೀಮತಿ ವಿನುತಾ ರಜತ್ ಗೌಡ ವಹಿಸಿದ್ದರು. ಪ್ರಸ್ತಾವನೆ ಶಾಲಾ ಮುಖ್ಯಶಿಕ್ಷಕ ಕೃಷ್ಣಮೂರ್ತಿ ಮಾಡಿದರು. ಶಿಕ್ಷಕಿ ಗೀತಾ ಮತ್ತು ಸಹಶಿಕ್ಷಕ ಪ್ರಕಾಶ ನಿರೂಪಣೆ ಮಾಡಿದರು. ಶಿ. ಸಂ. ಕೇಂದ್ರದ ಕಾರ್ಯದರ್ಶಿ ಶ್ರೀಮತಿ ಪುಷ್ಪ ಶ್ರೀನಿವಾಸಗೌಡ ವಂದನಾರ್ಪಣೆಗೈದರು. ಪೋಷಕರು ಮತ್ತು ಊರಿನ ನಾಗರಿಕರು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಬೆಳ್ತಂಗಡಿ ಶಿ. ಸಂ. ಕೇಂದ್ರದ ಕಾರ್ಯಕಾರಿ ಸಮಿತಿ ಸದಸ್ಯರಾದ
ವಾಲ್ಟರ್ . ಜೆ. ಪಿಂಟೋ, ಆನಂದ್ ಎಂ. ಕೆ., ಲಕ್ಷ್ಮಣ, ರೇಶ್ಮ ಪುಷ್ಪಕ್, ಸಾoತಪ್ಪ, ಶ್ರೀಧರ್ ರಾವ್ ಕಳಂಜ, ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರುಗಳಾದ ಮಂಜು ಆರ್. ಅಧ್ಯಾಪಕರು(SDM.DEd ಕಾಲೇಜ್ ), ವಿಜೇಂದ್ರ ದೇವಾಡಿಗ, ಹರೀಶ್ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಿಬಿಎಸ್ಇ ಸ್ಕೂಲ್ ಅಧ್ಯಾಪಕರು ಭಾಗವಹಿಸಿದರು.

error: Content is protected !!