ಬೆಳ್ತಂಗಡಿ ಪಿಎಸ್ಐ ನಂದಕುಮಾರ್ ಗೆ ಮುಖ್ಯ ಮಂತ್ರಿ ಚಿನ್ನದ  ಪದಕ

 

 

 

ಬೆಳ್ತಂಗಡಿ: ಬೆಳ್ತಂಗಡಿ ಪೊಲೀಸ್ ಠಾಣಾ ಉಪ ನಿರೀಕ್ಷಕ ನಂದಕುಮಾರ್ ಅವರು ಮುಖ್ಯಮಂತ್ರಿ ಚಿನ್ನದ ಪದಕ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಅತ್ಯುನ್ನತ ಸೇವೆ ಸಲ್ಲಿಸಿದ ಇವರ ಕರ್ತವ್ಯವನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಮೂಲತಃ ಕೊಡಗು ಜಿಲ್ಲೆಯವರಾದ ನಂದ ಕುಮಾರ್ ಅವರು ತನ್ನ ವಿದ್ಯಾಭ್ಯಾಸವನ್ನು ಕೊಡಗಿನಲ್ಲೇ ಪೂರೈಸಿದ್ದಾರೆ. ಬಳಿಕ ಕೆಎಸ್ಪಿ ಪರೀಕ್ಷೆ ಬರೆದು ಉತ್ತೀರ್ಣರಾಗಿ 2010 ರ ಬ್ಯಾಚ್ ನಲ್ಲಿ ಪೊಲೀಸ್ ಇಲಾಖೆಗೆ ಆಯ್ಕೆಯಾಗಿದ್ದಾರೆ.
ಕಲುಬರ್ಗಿಯಲ್ಲಿ ಟ್ರೈನಿಂಗ್ ಮುಗಿಸಿ, ಕೆಜಿಎಫ್ ಕೋಲಾರದಲ್ಲಿ ಪ್ರೊಬೆಶನರಿ ಮುಗಿಸಿ, ಮಂಗಳೂರು ಸಿಟಿ, ಬಂಟ್ವಾಳ, ಉಪ್ಪಿನಂಗಡಿ ಕರ್ತವ್ಯ ನಿರ್ವಹಿಸಿದ್ದರು. ಪ್ರಸ್ತುತ ಈಗ ಬೆಳ್ತಂಗಡಿ ಯಲ್ಲಿ ಉಪ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

 

error: Content is protected !!