ಇಂದು ಇನ್ನಷ್ಟು‌ ದೊಡ್ಡ ಮೀನುಗಳ‌ ಸಾವು,:‌ ಗುರುವಾಯನಕೆರೆ ಕೆರೆ ಸುತ್ತಮುತ್ತಲಿನ ಪರಿಸರದಲ್ಲಿ ದುರ್ನಾತ: ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ, ಸಾಂಕ್ರಾಮಿಕ ರೋಗ ಹರಡುವ ಭೀತಿ

 

 

ಬೆಳ್ತಂಗಡಿ: ಗುರುವಾಯನ ಕೆರೆಯಲ್ಲಿ ನಿನ್ನೆಯಿಂದ ಸಂಶಯಾಸ್ಪದ ರೀತಿಯಲ್ಲಿ ಮೀನುಗಳು ಸಾಯುತಿದ್ದು ಇವತ್ತು ಕೆರೆಯ ಸುತ್ತ ರಾಶಿ ರಾಶಿ ಮೀನುಗಳು ಸತ್ತು ಬಿದ್ದು ಪರಿಸರ ಇಡೀ ದುರ್ನಾತ ಬೀರುತ್ತಿದೆ ಕೆರೆಯ ಬಳಿ ಸುಳಿಯದ ಹಾಗೆ ಆಗಿದೆ ಕೆರೆಯ ನಡು ನೀರಿನಲ್ಲಿ ಸುಮಾರು 8 ಕೆಜಿ ತೂಕದ ಮೀನುಗಳೂ  ಸತ್ತು ನೀರಲ್ಲಿ ತೆಲಾಡುತ್ತಿರುವ ದೃಶ್ಯ ಮನಕಲಕುವಂತಿದೆ.

 

ಕೆರೆಯ ಇಡೀ ಪರಿಸರ ದುರ್ನಾತ ಬೀರುತಿದ್ದು ಮೂಗು ಮುಚ್ಚಿ ಸಂಚಾರಿಸುವಂತಹ ಸ್ಥಿತಿ ನಿರ್ಮಾಣವಾಗಿದೆ.ಸತ್ತ ಮೀನಿನ ರಾಶಿಯ ತೆರವು ಕಾರ್ಯ ಮಾಡದಿದ್ದಲ್ಲಿ ಸಾಂಕ್ರಾಮಿಕ ರೋಗ ಹರಡುವ ಸಂಭವ ಇದೆ ಎಂದು ಸಾರ್ವಜನಿಕರು ಆತಂಕ ಪಡುವಂತಾಗಿದೆ.ಈ ಬಗ್ಗೆ ಸಂಬಂಧಪಟ್ಟವರು ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ.

 

ಅಧಿಕಾರಿಗಳು ಮೌನ: ಸಾರ್ವಜನಿಕರ ಆಕ್ರೋಶ

ಕೆರೆ ನೀರು ಕಲುಷಿತಗೊಂಡು ಮೀನುಗಳು ಸತ್ತಿದ್ದರೂ, ವಿವಿಧ ಇಲಾಖೆ ಅಧಿಕಾರಿಗಳು ಭೇಟಿ ಮಾಡಿ ಸುಮ್ಮನಿದ್ದಾರೆ. ಕನಿಷ್ಠ ಕೆರೆ ಸುತ್ತಮುತ್ತ ಸುಣ್ಣ ಹಾಕುವುದು, ನೀರಿನಲ್ಲಿ ಗುಣಮಟ್ಟ ಹೆಚ್ಚಿಸಲು ಸಾಧ್ಯವಿರುವ ಕೆಲ ಪ್ರಯತ್ನಗಳನ್ನು ನಡೆಸಿದಲ್ಲಿ ಒಂದು ದಿನದ ಸಮಯ ಇದ್ದಿದ್ದರಿಂದ ದೊಡ್ಡ ಮೀನುಗಳು ಸಾಯುತ್ತಿರಲಿಲ್ಲ. ಮೀನುಗಾರಿಕೆ ಸಂಬಂಧಿಸಿದ ಹಿರಿಯ ಅಧಿಕಾರಿಗಳನ್ನು ಕರೆಸಿ ದೊಡ್ಡ ಮಟ್ಟದ ತನಿಖೆ ಹಾಗೂ ಈ ದುರ್ಘಟನೆಗೆ ಸ್ಪಷ್ಟ ಕಾರಣ ಹುಡುಕಬೇಕಿದೆ‌, ಈ‌ ಮೂಲಕ ಘಟನೆಗೆ ಕಾರಣರಾದವರಿಗೆ ತಕ್ಕ ಶಾಸ್ತಿ ಮಾಡಬೇಕಿದೆ ಎಂದು ಸ್ಥಳೀಯರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

error: Content is protected !!