ಗುರುವಾಯನ ಕೆರೆ ಮೀನುಗಳ ಮಾರಾಣ ಹೋಮ ಸ್ಥಳಕ್ಕೆ ತಹಶೀಲ್ದಾರ್ ಭೇಟಿ ಧ್ವನಿ ವರ್ಧಕದ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಸೂಚನೆ.

 

 

 

 

ಬೆಳ್ತಂಗಡಿ: ಗುರುವಾಯನ ಕೆರೆ ಕೆರೆಯ ದಂಡೆಯ ಸುತ್ತ ಮುತ್ತ ಸಂಶಯಸ್ಪದ ರೀತಿಯಲ್ಲಿ ಸಾವಿರಾರು ಮೀನುಗಳು ಸತ್ತು ಬಿದ್ದಿದ್ದು ಸ್ಥಳಕ್ಕೆ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಅದಲ್ಲದೇ ತಕ್ಷಣ ಕೆರೆಯ ಸುತ್ತಮುತ್ತದ ಹಾಗೂ  ಸಾರ್ವಜನಿಕರಿಗೆ ಮೀನು ಹಿಡಿಯದಂತೆ ಸಾಕು ಪ್ರಾಣಿಗಳನ್ನು ಕೆರೆಯ ನೀರು ಕುಡಿಯಲು ಬಿಡದಂತೆ ಧ್ವನಿ ವರ್ಧಕದ ಮೂಲಕ  ಎಚ್ಚರಿಕೆ ಮಾಹಿತಿ ನೀಡುವಂತೆ ಪಂಚಾಯತ್ ಪಿಡಿಒ ಅವರಿಗೆ ತಿಳಿಸಿದರು .ಈಗಾಗಲೇ ಕೆರೆಯ  ನೀರಿನ ಸ್ಯಾಂಪಲ್ ತೆಗೆದು  ಲ್ಯಾಬ್ ಗೆ ತೆಗೆದುಕೊಂಡು ಹೋಗಲಾಗುವುದು ಎಂದು ಕುವೆಟ್ಟು ಗ್ರಾಮ ಪಂಚಾಯತ್ ಪಿಡಿಒ ಮಾಹಿತಿ ನೀಡಿದ್ದಾರೆ.

error: Content is protected !!