ವಿದ್ಯಾರ್ಥಿ ಬದುಕು ಸಾಧನೆಗೆ ಮೆಟ್ಟಿಲು: ವಸಂತ ಬಂಗೇರ ಶ್ರೀ ಗುರುದೇವ ಪ. ಪೂ.ಕಾಲೇಜಿನ ವಾರ್ಷಿಕ ಕ್ರೀಡಾಕೂಟ

 

 

ಬೆಳ್ತಂಗಡಿ : ವಿದ್ಯಾರ್ಥಿ ಬದುಕು ಸಾಧನೆಗೆ ಮೆಟ್ಟಿಲು. ಆ ಸಂದರ್ಭ ಇರುವ ಅವಕಾಶಗಳನ್ನು ವಿದ್ಯಾರ್ಥಿಗಳು ಚೆನ್ನಾಗಿ ಬಳಸಿಕೊಂಡು ಸಾಧಕರಾಗಬೇಕು. ಪಠ್ಯ ಚಟುಟಿಕೆಗಳ ಜೊತೆ ಜೊತೆಯಲ್ಲಿ ಕ್ರೀಡೆಯಲ್ಲೂ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು’ ಎಂದು ಶ್ರೀ ಗುರುದೇವ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ, ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.

ಅವರು ಶನಿವಾರ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾ ಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಗೇರುಕಟ್ಟೆ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಮಾತನಾಡಿ, ‘ಕ್ರೀಡಾ ಚಟುಟಿಕೆಗಳಿಗೆ ಭಾಗವಹಿಸುವುದು ಪ್ರತಿಯೊಬ್ಬನ ಆಸಕ್ತಿಯ ವಿಚಾರವಾಗಬೇಕು. ವಿದ್ಯಾರ್ಥಿ ದೆಸೆಯಲ್ಲಿ ಇದಕ್ಕೆ ಮುಕ್ತವಾದ ಅವಕಾಶಗಳಿವೆ. ಆದರೆ ಕ್ರೀಡೆಯೇ ಮುಖ್ಯ ಎಂದು ಭಾವಿಸದೆ ಉತ್ತಮ ವಿದ್ಯಾರ್ಜನೆಯೂ ಮುಖ್ಯ ಗುರಿಯಾಗಬೇಕು’ ಎಂದರು.

ವೇದಿಕೆಯಲ್ಲಿ ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಪ್ರವೀಣ್ ಬಿ, ಕ್ರೀಡಾ ತರಬೇತುದಾರ ಶೇಕ್ ರಶೀದ್ ಇದ್ದರು.
ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ಕೆ ಸ್ವಾಗತಿಸಿದರು. ಉಪನ್ಯಾಸಕ ರಾಕೇಶ್ ಕುಮಾರ್ ಪರಿಚಯಿಸಿ, ಉಪನ್ಯಾಸಕಿ ಡಾ.ಸವಿತಾ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ನಿರ್ದೇಶಕಿ ದೀಪಾ ಸುವರ್ಣ ವಂದಿಸಿದರು.

error: Content is protected !!