ಅಭಿವೃದ್ಧಿಯತ್ತ ತಾಲೂಕಿನ ಕುಗ್ರಾಮ ಖ್ಯಾತಿಯ ಎಳನೀರು ಪ್ರದೇಶ:  ‌ಶಾಸಕ ಹರೀಶ್ ಪೂಂಜರಿಂದ ಸುಮಾರು ₹ 11.20 ಕೋಟಿ ವೆಚ್ಚದ ಕಾಮಗಾರಿಗೆ ಇಂದು ಚಾಲನೆ: ಬೆಳ್ತಂಗಡಿಯ ಕಾಶ್ಮೀರಕ್ಕೆ ಶಾಸಕರ ವಿಶೇಷ ಅನುದಾನದಿಂದ ಕೊಡುಗೆ, ವಿವಿಧ ಕಾಮಗಾರಿಗಳಿಗೆ ಚಾಲನೆ, ಉದ್ಘಾಟನೆ

 

 

 

ಉಜಿರೆ:ಬೆಳ್ತಂಗಡಿಯ ಕಾಶ್ಮೀರ ಎಂದೇ ಕರೆಯಲ್ಪಡುವ ಕುಗ್ರಾಮ ಮಲವಂತಿಗೆ ಗ್ರಾಮದ ಎಳನೀರ್ ಪ್ರದೇಶ ಅಭಿವೃದ್ಧಿ ಹೊಂದುವತ್ತ ಹೆಜ್ಜೆ ಹಾಕಿದೆ ಆ ಭಾಗದ ಜನರ ಅದೆಷ್ಟೋ ವರ್ಷಗಳ ಕನಸುಗಳು ಈಡೇರುತ್ತಿವೆ.ಮೂಲಭೂತ ಸೌಕರ್ಯಗಳಿಲ್ಲದೇ ಆತಂಕ ಪಡುತ್ತಿರುವ ದಿನಗಳು ದೂರ ಆಗುತ್ತಿದೆ. ಇಂದು ಫೆ 02 ಬುಧವಾರ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಎಳನೀರ್ ಭಾಗದಲ್ಲಿ ಸುಮಾರು 11-20 ಕೋಟಿ ರೂಪಾಯಿಯ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ.
ಬಂಗಾರಪಲ್ಕೆ ಪರಿಸರದ ಜನರ ಅನುಕೂಲಕ್ಕಾಗಿ ಪಶ್ಚಿಮವಾಹಿನಿ ಯೋಜನೆಯಡಿಯಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಸೇತುವೆ ಸಹಿತ ಕಿಂಡಿ ಅಣೆಕಟ್ಟು ರೂ. 5 ಕೋಟಿ ಅನುದಾನದ ಕಾಮಗಾರಿ. ಎಳನೀರು ದಿಡುಪೆ ರಸ್ತೆ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನದ ಕಾಮಗಾರಿ,  50 ಲಕ್ಷ ರೂ. ಅನುದಾನದ ಎಳನೀರ್ ಪ.ಪಂಗಡದ ಕಾಲನಿಗೆ ಕಿರು ಸೇತುವೆ ನಿರ್ಮಾಣ, 13 ಲಕ್ಷ ರೂ ಅನುದಾನದಲ್ಲಿ ನಿರ್ಮಾಣವಾದ ಗುತ್ಯಡ್ಕ ಅಂಗನವಾಡಿ ಉದ್ಘಾಟನೆ,ರೂ10 ಲಕ್ಷ ಅನುದಾನದಲ್ಲಿ ಕುರೆಕಲ್ ರಸ್ತೆ ಕಾಂಕ್ರಿಟೀಕರಣ, ರೂ 10 ಲಕ್ಷ ಅನುದಾನದ ಗುತ್ಯಡ್ಕ ಶಾಲೆಯ ರಸ್ತೆ ಕಾಂಕ್ರಿಟೀಕರಣ, 9 ಲಕ್ಷದ ಬಡಮನೆ ರಸ್ತೆ ಕಾಂಕ್ರಿಟೀಕರಣ,8 ಲಕ್ಷ ವೆಚ್ಚದ ಬ್ರಹ್ಮ ಸ್ಥಾನದ ತೂಗು ಸೇತುವೆ, ಎಳನೀರ್ ಸಮುದಾಯ ಭವನ ದುರಸ್ಥಿ 5 ಲಕ್ಷ, ಎಳನೀರ್ ಅಂಗನವಾಡಿ ದುರಸ್ಥಿ 2 ಲಕ್ಷ, ಗುತ್ಯಡ್ಕ ಶಾಲೆ ಬಳಿ ಮೋರಿ ರಚನೆ 3 ಲಕ್ಷ, ಬಂಗಾರಪಲ್ಕೆ ರಸ್ತೆ ಕಾಂಕ್ರಿಟೀಕರಣ ಸೇರಿದಂತೆ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಲಿದ್ದಾರೆ.

error: Content is protected !!