ಬೃಹತ್ ಉಚಿತ ವೈದ್ಯಕೀಯ ಹಾಗೂ ದಂತ ಚಿಕಿತ್ಸಾ ಶಿಬಿರ: ಡಿ.ಕೆ.ಆರ್. ಡಿ.ಎಸ್ ಬೆಳ್ತಂಗಡಿ ನೇತೃತ್ವ

 

 

ಬೆಳ್ತಂಗಡಿ:ಗ್ರಾಮಾಂತರ ಪ್ರದೇಶದಲ್ಲಿ ಉತ್ತಮ ಆರೋಗ್ಯ ಪಡೆಯಲು ಆರೋಗ್ಯ ಶಿಬಿರ ಗಳು ಪೂರಕ ಎಂದು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷರಾದ ರೋ. ಶರತ್ ಕೃಷ್ಣ ಪಡ್ವೆಟ್ನಾಯ ಅಭಿಪ್ರಾಯ ಪಟ್ಟರು. ಅವರು ದಿನಾಂಕ 27 ಫೆಬ್ರವರಿಯಂದು ಮುಂಡಾಜೆ ಸೈಂಟ್ ಮೇರೀಸ್ ಚರ್ಚ್ ವಠಾರದಲ್ಲಿ ನಡೆದ ಬೃಹತ್ ಉಚಿತ ವೈದ್ಯಕೀಯ ಹಾಗೂ ದಂತ ಚಿಕಿತ್ಸಾ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಮುಂಡಾಜೆ ಸೈಂಟ್ ಮೇರೀಸ್ ಚರ್ಚಿನ ಧರ್ಮಗುರು ವಂದನೀಯ ಫಾ. ಸೆಬಾಸ್ಟಿಯನ್ ಪುನ್ನತ್ತಾನತ್ ಅಧ್ಯಕ್ಷೀಯ ನೆಲೆಯಿಂದ ಮಾತನಾಡಿದರು. ಮಣಿಪಾಲ್ ದಂತ ವೈದ್ಯಕೀಯ ಮಹಾವಿದ್ಯಾಲಯ ಇಲ್ಲಿನ ಸಮುದಾಯ ಆರೋಗ್ಯ ವಿಭಾಗದ ಹಿರಿಯ ಪ್ರಾದ್ಯಾಪಕರಾದ ಡಾ. ಅವಿನಾಶ್ ಬಿ. ಆರ್. ಮುಖ್ಯ ಅಭ್ಯಾಗತರಾಗಿ ಆಗಮಿಸಿ, ಶಿಬಿರಕ್ಕೆ ಶುಭ ಹಾರೈಸಿದರು.

 

ಲಾಯಿಲ ಜ್ಯೋತಿ ಆಸ್ಪತ್ರೆಯ ಆಡಳಿತಾಧಿಕಾರಿಯಾದ ಸಿ. ಮೆರಿಲಿಟ್ ಹಾಗೂ ಮಂಗಳೂರು ಪ್ರಸಾದ್ ನೇತ್ರಾಲಯದ ನೇತೃ ತಜ್ಞರಾದ ಡಾ. ಸೀಮಾ, ಮುಂಡಾಜೆ ರೋಟರಿ ಸಮುದಾಯ ದಳದ ಅಧ್ಯಕ್ಷರಾದ ಶ್ರೀ. ಸೆಬಾಸ್ಟಿಯನ್ ಪಿ.ಸಿ., ಬೆಳ್ತಂಗಡಿ ಸ್ನೇಹಕಿರಣ್ ಜಿಲ್ಲಾ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಮಂಜುಳಾ ಜೋನ್, ಮುಂಡಾಜೆ ಸೊಸೈಟಿ ಆಫ್ ಸೈಂಟ್ ವಿನ್ಸೆಂಟ್ ಡಿ’ ಪೌಲ್ ಅಧ್ಯಕ್ಷರಾದ ಶ್ರೀ. ತೋಮಸ್ ಕೆ.ಎ., ಕರ್ನಾಟಕ ಸೀರೋ ಮಲಬಾರ್ ಕ್ಯಾಥೋಲಿಕ್ ಎಸೋಸಿಯೇಶನ್ ಮುಂಡಾಜೆ ಘಟಕದ ಅಧ್ಯಕ್ಷರಾದ ಶ್ರೀ. ಸೆಬಾಸ್ಟಿಯನ್ ತಿರುದನತ್ತಿಲ್, ಮುಂಡಾಜೆ ಸೀರೋ ಮಲಬಾರ್ ಯೂತ್ ಮೂವ್ ಮೆಂಟ್ ಅಧ್ಯಕ್ಷರಾದ ಶ್ರೀ. ಡಿವಿನ್ ಕೆ.ಆರ್. ಮುಂಡಾಜೆ ಸೈಂಟ್ ಮೇರೀಸ್ ಚರ್ಚಿನ ಟ್ರಸ್ಟಿ ಶ್ರೀ. ಸಜಿ ಕರಿಕಂಡತ್ತಿಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂ. ಫಾ. ಬಿನೋಯಿ. ಎ. ಜೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಸೈಂಟ್ ಮೇರೀಸ್ ಚರ್ಚಿನ ಶ್ರೀ. ಸೆಬಾಸ್ಟಿಯನ್ ತಿರುಧನತ್ತಿಲ್ ಎಲ್ಲರನ್ನು ಸ್ವಾಗತಿಸಿದರು. ಡಿ.ಕೆ.ಆರ್.ಡಿ.ಎಸ್. ಸಂಸ್ಥೆಯ ಸಂಯೋಜಕರಾದ ಶ್ರೀ. ಸುನಿಲ್ ಗೊನ್ಸಾಲ್ವಿಸ್ ಕಾರ್ಯಕ್ರಮ ನಿರೂಪಿಸಿ, ಸಂಸ್ಥೆಯ ಕಾರ್ಯಕರ್ತರಾದ ಶ್ರೀ. ಜೋನ್ಸನ್ ರವರು ವಂದನಾರ್ಪಣೆಗೈದರು. ಮುಂಡಾಜೆ ಸ್ಟಾರ್ ಸಂಘದ ಸದಸ್ಯರು ಪ್ರಾರ್ಥನೆ ಹಾಡಿದರು. ದಂತ ತಪಾಸಣೆ ಮತ್ತು ಚಿಕಿತ್ಸೆ, ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆ, ರಕ್ತದ ಗುಂಪು ವರ್ಗೀಕರಣ, ನೇತ್ರ ಪರೀಕ್ಷೆ, ಸ್ತ್ರೀ ರೋಗ ವಿಭಾಗ, ಎಲುಬು ರೋಗ ವಿಭಾಗ, ಸಾಮಾನ್ಯ ವೈದ್ಯಕೀಯ ತಪಾಸಣೆ ಮುಂತಾದ ಚಿಕಿತ್ಸೆ ಶಿಬಿರದಲ್ಲಿ ಲಭ್ಯವಾಯಿತು. ಸುಮಾರು 150 ಮಂದಿ ಶಿಬಿರದ ಪ್ರಯೋಜನ ಪಡೆದರು. ಕಾರಿತಾಸ್ ಇಂಡಿಯಾ ನವದೆಹಲಿ-ಸ್ಪರ್ಶ ಕಾರ್ಯಕ್ರಮ, ಮಣಿಪಾಲ್ ದಂತ ವೈದ್ಯಕೀಯ ಮಹಾವಿದ್ಯಾಲಯ ಮಂಗಳೂರು, ಜ್ಯೋತಿ ಆಸ್ಪತ್ರೆ ಲಾಯಿಲ, ಪ್ರಸಾದ್ ನೇತ್ರಾಲಯ ಮಂಗಳೂರು, ಮುಂಡಾಜೆ ಸೈಂಟ್ ಮೇರೀಸ್ ಚರ್ಚ್, ರೋಟರಿ ಸಮುದಾಯ ದಳ ಮುಂಡಾಜೆ, ಸಿ. ಎ ಬ್ಯಾಂಕ್ ಮುಂಡಾಜೆ, ಸ್ನೇಹಜ್ಯೋತಿ ಮಹಿಳಾ ತಾಲೂಕು ಒಕ್ಕೂಟ (ರಿ) ಬೆಳ್ತಂಗಡಿ, ಸ್ನೇಹಕಿರಣ್ ಜಿಲ್ಲಾ ಒಕ್ಕೂಟ ಬೆಳ್ತಂಗಡಿ, ಹಾಲು ಉತ್ಪಾದಕರ ಸಹಕಾರ ಸಂಘ ಮುಂಡಾಜೆ, ಚೈತನ್ಯ ಮಹಾಸಂಘ ತೋಟತ್ತಾಡಿ, ಸೈಂಟ್ ಮೇರೀಸ್ ಕ್ರೆಡಿಟ್ ಯೂನಿಯನ್ ಮುಂಡಾಜೆ, ಸೊಸೈಟಿ ಆಫ್ ಸೈಂಟ್ ವಿನ್ಸೆಂಟ್ ಡಿ’ ಪೌಲ್ ಮುಂಡಾಜೆ, ಕರ್ನಾಟಕ ಸೀರೋ ಮಲಬಾರ್ ಕ್ಯಾಥೋಲಿಕ್ ಎಸೋಸಿಯೇಶನ್ ಮುಂಡಾಜೆ ಹಾಗೂ ಸೀರೋ ಮಲಬಾರ್ ಯೂತ್ ಮೂವ್ ಮೆಂಟ್ ಮುಂಡಾಜೆ ಇವುಗಳ ಸಹಯೋಗದೊಂದಿಗೆ ಆರೋಗ್ಯ ಶಿಬಿರವು ನಡೆಯಿತು.

error: Content is protected !!