ಭಜರಂಗದಳ ಮುಖಂಡನಿಂದ ದಲಿತ ವ್ಯಕ್ತಿಯ ಹತ್ಯೆ ಖಂಡನೀಯ: ಎಸ್ ಡಿ ಪಿ ಐ ಪ್ರದಾನ ಕಾರ್ಯದರ್ಶಿ ಭಾಸ್ಕರ ಪ್ರಸಾದ್.

 

 

 

ಬೆಳ್ತಂಗಡಿ: ತಾಲೂಕಿನ ಧರ್ಮಸ್ಥಳದ ಕನ್ಯಾಡಿ ಎಂಬಲ್ಲಿ ಭಜರಂಗದಳ ಮುಖಂಡ ಹಾಗೂ ಬಿಜೆಪಿ ನಾಯಕ ಕೃಷ್ಣ ಡಿ ಎಂಬಾತ ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಹತ್ಯೆಗೈದ ದುರ್ಘಟನೆಯನ್ನು ಎಸ್ ಡಿ ಪಿ ಐ ಖಂಡಿಸುತ್ತದೆ ಎಂದು ಎಸ್ ಡಿ ಪಿ ಐ ಕರ್ನಾಟಕ ರಾಜ್ಯ ಪ್ರದಾನ ಕಾರ್ಯದರ್ಶಿ ಭಾಸ್ಕರ ಪ್ರಸಾದ್ ಹೇಳಿದರು. ಅವರು ಬೆಳ್ತಂಗಡಿಯಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಹಿಂದೂಗಳ ರಕ್ಷಕ ಎಂದು ಜನಮನಸ್ಸನ್ನು ಕೆರಳಿಸಿ ಧರ್ಮರಾಜಕಾರಣ ಮಾಡುತ್ತಿರುವ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜ ಈ ಪ್ರಕರಣ ಕುರಿತು ಹಸ್ತಕ್ಷೇಪ ಮಾಡಿ ಹಿಂದೂ ಯುವಕನನ್ನು ಕೊಂದ ಬಿಜೆಪಿ ಹಾಗೂ ಭಜರಂಗದಳ ನಾಯಕರನ್ನು ಕಠಿಣ ಶಿಕ್ಷೆಗೊಳಪಡಿಸಿ ಹಾಗೂ ಹತ್ಯೆಯಾದ ದಲಿತ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡುವುದರಲ್ಲಿ ಮಂಚೂಣಿಯಲ್ಲಿರಬೇಕು ಎಂದು ಎಸ್ ಡಿ ಪಿ ಐ ಆಗ್ರಹಿಸುತ್ತದೆ. ಅದಲ್ಲದೆ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹತ್ಯೆಗೊಳಪಟ್ಟ ವ್ಯಕ್ತಿಯ ಕುಟುಂಬಕ್ಕೆ 10 ಲಕ್ಷ ಪರಿಹಾರ ಧನವನ್ನು ನೀಡಿ ಆರೋಪಿಯನ್ನು ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಎಸ್ ಡಿ ಪಿ ಐ ಮುಖಂಡರುಗಳಾದ ಅನ್ವರ್ ಸದತ್ ಬಜತ್ತೂರು, ಶಕೀರ್ ಅಳಕೆಮಜಲು, ನವಾಜ್ ಕಟ್ಟೆ, ನಿಸಾರ್ ಕುದ್ರಡ್ಕ , ಹೈದರ್ ನಿರ್ಸಾಲ್, ಉಪಸ್ಥಿತರಿದ್ದರು.

error: Content is protected !!