ಕನ್ಯಾಡಿ ದಿನೇಶ್ ಸಾವು ಪ್ರಕರಣ: ಹಲ್ಲೆಗೈದ ಆರೋಪಿ ಕೃಷ್ಣ ಪೊಲೀಸ್ ವಶಕ್ಕೆ

 

 

ಬೆಳ್ತಂಗಡಿ: ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಕನ್ಯಾಡಿಯ ದಿನೇಶ್ ಅವರಿಗೆ ಎರಡು ದಿನಗಳ ಹಿಂದೆ ಹಲ್ಲೆ ಮಾಡಿದ ಕೃಷ್ಣ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಫೆ 23 ರಂದು ಕ್ಷುಲ್ಲಕ ಕಾರಣಕ್ಕಾಗಿ ಆರೋಪಿತ ಕೃಷ್ಣ ದಿನೇಶ್ ಎಂಬವರಿಗೆ ಹಲ್ಲೆಗೈದಿದ್ದು ದಿನೇಶ್ ತನ್ನ ಮನೆಯಲ್ಲಿ ಕೃಷ್ಣ ಹಲ್ಲೆ ಮಾಡಿದ ಬಗ್ಗೆ ಹೇಳಿದ್ದಲ್ಲದೆ ವಿಪರೀತ ಹೊಟ್ಟೆ ನೋವಾಗುತ್ತಿದೆ ಎಂದಿದ್ದಾರೆ ಮರುದಿನ ಬೆಳಗ್ಗೆ ನೋವು ಉಲ್ಬಣಿಸಿದಾಗ ದಿನೇಶ್ ಅವರ ತಾಯಿ ಕೃಷ್ಣನಲ್ಲಿ ವಿಚಾರಿಸಿ ಆಸ್ಪತ್ರೆಗೆ ದಾಖಲಿಸುವಂತೆ ತಾಕೀತು ಮಾಡಿದ್ದಾರೆ ಕೃಷ್ಣ ದಿನೇಶ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ ಅದರೆ ಅಲ್ಲಿ ಫೆ 25 ರಂದು  ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು ಈ ಬಗ್ಗೆ ವಿಷಯ ತಿಳಿದ ಕೃಷ್ಣ ತಪ್ಪಿಸಿಕೊಂಡಿದ್ದರು. ಅದಲ್ಲದೆ ಮೃತ ದಿನೇಶ್ ಅವರ ತಾಯಿ  ಕೂಡ ಮಗನಿಗೆ ಕೃಷ್ಣ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಪರಿಣಾಮವಾಗಿ ಅವನು ಸಾವನ್ನಪ್ಪಿದ್ದಾನೆ ಅದ್ದರಿಂದ ಇದು ಕೊಲೆ ಎಂದು ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದರು. ಹಲ್ಲೆಮಾಡುವ ವಿಡಿಯೋ ಕೂಡ ಎಲ್ಲೆಡೆ ವೈರಲ್ ಆಗುತಿದ್ದು . ಇದೀಗ ಆರೋಪಿ ಕೃಷ್ಣನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತಿದ್ದಾರೆ.

error: Content is protected !!