100 ರೂಪಾಯಿಗಾಗಿ ಪತ್ನಿಯ ಜೊತೆ ಆರಂಭವಾಗಿದ್ದ ಗಲಾಟೆ, ಕೊಲೆಯಲ್ಲಿ ಅಂತ್ಯ!: ಪತ್ನಿಯ ಅಣ್ಣನಿಂದಲೇ ಹಲ್ಲೆ, ಗಾಯಗೊಂಡಿದ್ದ ಪುಂಜಾಲಕಟ್ಟೆ, ತೆಂಕಕಜೆಕಾರು ವ್ಯಕ್ತಿ ಸಾವು: ಮರದ ದೊಣ್ಣೆಯಿಂದ ಹಲ್ಲೆಗೈದ, ಕೊಲೆ ಆರೋಪಿ ಪೊಲೀಸ್ ವಶಕ್ಕೆ: ಮೃತ ವ್ಯಕ್ತಿಯ ತಾಯಿಯಿಂದ ಠಾಣೆ ದೂರು

 

 

 

 

 

ಬೆಳ್ತಂಗಡಿ: ಗಂಡ ದುಡಿದು ಬಂದ ಹಣವನ್ನು ಮನೆಗೆ ಬಂದು ಹೆಂಡತಿಗೆ ನೀಡಿದ್ದು ಅದರಲ್ಲಿ ನೂರು ರೂಪಾಯಿ ಕೇಳಿದ ವಿಚಾರದಲ್ಲಿ ಸಣ್ಣ ಗಲಾಟೆ ಅಗಿದ್ದು ನಂತರ ಹೆಂಡತಿಯ ಅಣ್ಣ ಬಂದು ಮಾರಣಾಂತಿಕ ಹಲ್ಲೆ‌ ಮಾಡಿ ಕೊಲೆ‌ ಮಾಡಿರುವ ಪ್ರಕರಣ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ತೆಂಕಕಜೆಕಾರು ಗ್ರಾಮದಲ್ಲಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಘಟನೆಯ ವಿವರ:
ಬಂಟ್ವಾಳ ತಾಲೂಕಿನ ತೆಂಕಕಜೆಕಾರು ಗ್ರಾಮದ ಬರಮೇಲು ಮನೆಯ ಕುಂಜಿರ ಪೂಜಾರಿಯ ಮಗನಾದ ಕೇಶವ ಪೂಜಾರಿ(47) ಮಂಗಳೂರು ಹೊಟೇಲ್‌ನಲ್ಲಿ ಕುಕ್ಕರ್ ಅಗಿ ಕೆಲಸ ಮಾಡುತ್ತಿದ್ದು ಜ.31ರಂದು ಕೆಲಸದಿಂದ ಮನೆಗೆ ಬಂದು ದುಡಿದ 8,000 ರೂಪಾಯಿ ಹಣವನ್ನು ಹೆಂಡತಿ ಪ್ರೇಮ ಅವರ ಕೈಗೆ ನೀಡಿದ್ದಾರೆ. ಬಳಿಕ ಅದರಲ್ಲಿ 100 ರೂಪಾಯಿ ಕೇಳಿದ ವಿಚಾರಕ್ಕೆ ಗಂಡನ ಜೊತೆ ಸಣ್ಣ ಗಲಾಟೆಯನ್ನು ಹೆಂಡತಿ‌ ಮಾಡಿ ನಂತರ ತನ್ನ ಅಣ್ಣನಾದ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ನಾನಿಲ್ ದಡ್ಡಿ ಮನೆಯ ತಿಮ್ಮಪ್ಪ ಪೂಜಾರಿಯವರ ಮಗನಾದ ಅಶೋಕ್‌ ಯಾನೆ ಚಂದಪ್ಪ ಪೂಜಾರಿಗೆ ಕರೆ ಮಾಡಿ ತನ್ನ ಗಂಡನ ಮನೆಗೆ ಕರೆಸಿದ್ದು ಮನೆಗೆ ಬಂದು ತನ್ನ ಭಾವನ ಮೇಲೆ ಕೊಲಿನಿಂದ ಹಲ್ಲೆ ಮಾಡಿ ಗಂಭೀರ ಗಾಯಮಾಡಿ ವಾಪಸ್ ಹೋಗಿದ್ದ. ಮರುದಿನ ಕೇಶವ ಪೂಜಾರಿಗೆ ವಿಪರೀತವಾಗಿ ದೇಹದಲ್ಲಿ ನೋವು ಜಾಸ್ತಿಯಾಗಿದ್ದು ತಕ್ಷಣ ಇವರನ್ನು ಕೇಶವ ಪೂಜಾರಿ ತಾಯಿ ಲೀಲಾ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ನೀಡಬೇಕು ಎಂದು ಸೂಚಿಸಿದ್ದರು ಆದ್ರೆ ಅಲ್ಲಿ ಮದ್ದು ,ಮಾತ್ರೆ ತಂದು ವಾಪಸಾಗಿ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾದಗ ಯಾವುದೇ ಪ್ರಕರಣ ದಾಖಲಿಸದೆ ಕೇಶವ ಪೂಜಾರಿ ಮತ್ತು ತಾಯಿ ಲೀಲಾ ಅವರಿಗೆ ಬೈದು ವಾಪಸ್ ಕಳುಹಿಸಿದ್ದರು ಎನ್ನಲಾಗದೆ. ಮನೆಯಲ್ಲಿಯೇ ಮಾತ್ರೆ ಸೇವಿಸುತ್ತಾ ಇದ್ದ ಕೇಶವ ಪೂಜಾರಿಗೆ ಫೆ.8ರಂದು ದೇಹದಲ್ಲಿ ಯಾವುದೇ ಚಟುವಟಿಕೆ ಮಾಡಲು ಸಾಧ್ಯವಾಗದೆ ಇದ್ದಾಗ ಮನೆಯಲ್ಲಿದ್ದ ಶಾರದ ಹಾಗೂ ದಿನೇಶ್ ಬಂಟ್ವಾಳ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಸಂಜೆ ಕರೆದುಕೊಂಡು ಹೋದಾಗ ಕೇಶವ ಪೂಜಾರಿ ಸಾವನ್ನಪ್ಪಿದ್ದಾರೆ. ಈ ವಿಚಾರ ಯಾರಿಗೂ ತಿಳಿಸದೆ ಶವಪರೀಕ್ಷೆ ಮಾಡಿಸದೆ ವಾಪಸ್ ಆಸ್ಪತ್ರೆಯಿಂದ ಆಂಬುಲೆನ್ಸ್ ಮೂಲಕ ಮನೆಗೆ ಕರೆದುಕೊಂಡು ಬಂದಿದ್ದಾರೆ ಈ ವಿಚಾರ ಅಕ್ಕಪಕ್ಕದ ಮನೆಯವರಿಗೆ ಗೊತ್ತಾಗಿ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್ ಅವರಿಗೆ ಕರೆ ಮಾಡಿ ನಡೆದ ಘಟನೆ ಬಗ್ಗೆ ಮಾಹಿತಿ ನೀಡಿದ್ದು ಅವರು ಪುಂಜಾಲಕಟ್ಟೆ ಪೊಲಿಸರಿಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳಲು ಸೂಚಿಸಿದ ಮೇಲೆ ಪುಂಜಾಲಕಟ್ಟೆ ಪೊಲೀಸರು ಕೇಶವ ಪೂಜಾರಿ ಮನೆಗೆ ಹೋಗಿ ಮೃತದೇಹವನ್ನು ಶವಪರೀಕ್ಷೆ ಮಾಡಲು ಮೊದಲು ಬಂಟ್ವಾಳ ಆಸ್ಪತ್ರೆಗೆ ಸಾಗಿಸಲು ಹೇಳಿದ್ದು ನಂತರ ಪೊಲೀಸರೆ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಎಂದು ಸೂಚಿಸಿದ ಮೇಲೆ ಕೆ.ಎಸ್‌.ಹೆಗ್ಡೆ ಆಸ್ಪತ್ರೆಗೆ ಸಾಗಿಸಿದ್ದರು ಮರುದಿನ ಫೆ. 8ರಂದು ಆಸ್ಪತ್ರೆಯಲ್ಲಿ ಡಾ.ಮಹಾಬಲ ಶೆಟ್ಟಿ ಮತ್ತು ಡಾ.ಸೂರಜ್ ಶೆಟ್ಟಿ ಮೃತದೇಹದ ಶವಪರೀಕ್ಷೆ ಮಾಡಿದ್ದು ಪ್ರಾಥಮಿಕ ವರದಿಯಲ್ಲಿ ಹಲ್ಲೆ ಮಾಡಿದ್ದರಿಂದ ಮೆದುಳು ಹಾಗೂ ಲಿವರ್ ನಿಷ್ಕ್ರಿಯವಾಗಿದ್ದು ದೇಹದ ಹಲವು ಕಡೆ ಹಲ್ಲೆ ಮಾಡಿದ ಗಾಯವಿದೆ ಇದೊಂದು ಕೊಲೆ ರೀತಿಯಲ್ಲಿ ಇದೆ ಎಂದು ಹೇಳಿದ್ದರು. ಇದರಿಂದ ಮೃತಪಟ್ಟ ಕೇಶವ ಪೂಜಾರಿ ತಾಯಿ ಲೀಲಾ ಅವರು ನೀಡಿದ ದೂರಿನ ಮೇರೆಗೆ ಪುಂಜಾಲಕಟ್ಟೆ ಪೊಲೀಸರು ಫೆ. 18 ರಂದು ಐಪಿಸಿ 304 ಅಡಿಯಲ್ಲಿ ಪ್ರಕರಣ ದಾಖಲಿಸಿ ಸುಮ್ಮನಿದ್ದರು. ನಂತರ ಶವಪರೀಕ್ಷೆ ವರದಿ ಠಾಣೆಗೆ ಬಂದಿದ್ದು ಅದರ ಆಧಾರದಲ್ಲಿ ಫೆ.20 ರಂದು ಐಪಿಸಿ 304 ರಿಂದ ಐಪಿಸಿ 302 ಸೆಕ್ಷನ್ ಅಗಿ ಬದಲಾಯಿಸಿ ನ್ಯಾಯಾಲಯಕ್ಕೆ ವರದಿ ಮಾಡಿದ್ದರು, ಆದರೆ ಹಲ್ಲೆ ಮಾಡಿದ ಭಾವ ಚಂದಪ್ಪ ಪೂಜಾರಿ ಯಾನೆ ಅಶೋಕ್ ಮೇಲೆ ಯಾವುದೇ ಕ್ರಮಕೈಗೊಳ್ಳದೆ ಪುಂಜಾಲಕಟ್ಟೆ ಪೊಲೀಸರು ಸುಮ್ಮನಿದ್ದರು. ಇದರಿಂದ ಕುಟುಂಬ ಸದಸ್ಯರು ಸೇರಿಕೊಂಡು ಪಶ್ಚಿಮ ವಲಯ ಐಜಿಪಿ ಕಛೇರಿಗೆ ಹೋಗಿ ದೂರು ನೀಡಿದ್ದರು ಅವರು ಎಸ್ಪಿ ಬಳಿಗೆ ಕಳುಹಿಸಿ ದೂರು ನೀಡಲು ಸೂಚಿಸಿದರು ನಂತರ ಈ ವಿಚಾರವನ್ನು ಎಸ್ಪಿ ಕಛೇರಿಗೆ ಹೋಗಿ ವಿಷಯ ತಿಳಿಸಿದಾಗ ಎಸ್ಪಿ ಯವರು ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್ ಗೆ ಕರೆ ಮಾಡಿ ಸೂಕ್ತ ಕ್ರಮ‌ ಕೈಗೊಳ್ಳಲು ಸೂಚಿಸಿದ್ದರು.
ಆರೋಪಿ ಬಂಧನ:
ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್ ಮತ್ತು ತಂಡ ಆರೋಪಿಯನ್ನು ಫೆ.21ರಂದು ಮಧ್ಯಾಹ್ನ ಖಚಿತ ಮಾಹಿತಿ ಮೇರೆಗೆ ಮಂಗಳೂರಿನ ಬಜಪೆ ವ್ಯಾಪ್ತಿಯ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದಲ್ಲಿಂದ ವಶಕ್ಕೆ ಪಡೆದು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಹಸ್ತಾಂತರ ಮಾಡಿದ್ದು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

error: Content is protected !!