ಮುಂಡಾಜೆ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ

 

 

 

ಬೆಳ್ತಂಗಡಿ:ಮುಂಡಾಜೆ ಸಮೀಪ   ನದಿಯಲ್ಲಿ  ಮುಳುಗಿ ನಾಪತ್ತೆಯಾಗಿದ್ದ ಯುವಕನ ಶವ  ಇಂದು ಬೆಳಿಗ್ಗೆ ಪತ್ತೆಯಾಗಿದೆ.  ಪುತ್ತೂರು ಕಬಕ ನಿವಾಸಿ ಕಿರಣ್ (20 ) ಮುಂಡಾಜೆ ಸಮೀಪದ ಪರಮುಖ ಎಂಬಲ್ಲಿರುವ  ತನ್ನ ಅಜ್ಜಿ ಮನೆಗೆ ಬಂದಿದ್ದು ತನ್ನ ಸಹೋದರನ ಜೊತೆ ಆದಿತ್ಯವಾರ ಸಂಜೆ ಸ್ನಾನಕ್ಕೆಂದು ಮನೆ ಸಮೀಪದ ನೇತ್ರಾವತಿ ನದಿಗೆ ತೆರಳಿದ್ದ ವೇಳೆ  ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ನಾಪತ್ತೆಯಾಗಿದ್ದ. ಸ್ಥಳೀಯರು ಹಾಗೂ ಅಗ್ನಿಶಾಮಕ ದಳ ತಡ ರಾತ್ರಿ ತನಕ ಕಾರ್ಯಾಚರಣೆ ನಡೆಸಿ ಹುಡುಕಾಟ ನಡೆಸಿದರೂ ಯುವಕ ಪತ್ತೆಯಾಗಿರಲಿಲ್ಲ . ಅದರೆ ಇವತ್ತು ಬೆಳಗ್ಗೆ ಹುಡುಕಾಡಿದಾಗ ಮೃತ ದೇಹ ಪತ್ತೆಯಾಗಿದೆ.

error: Content is protected !!