ರಾಷ್ಟ್ರದ ಸಮಗ್ರ ಅಭ್ಯುದಯದ ಹಿತಾಸಕ್ತಿಯೊಂದಿಗೆ ಬಜೆಟ್ ಮಂಡನೆ: ಶಾಸಕ ಹರೀಶ್ ಪೂಂಜ

 

 

 

ಬೆಳ್ತಂಗಡಿ: ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತರಾಮನ್ ಇಂದು ಸಂಸತ್ತಿನಲ್ಲಿ ಮಂಡಿಸಿದ 2022-23ರ ಸಾಲಿನ ಮುಂಗಡ ಪತ್ರ ರಾಷ್ಟ್ರದ ಅಭಿವೃದ್ಧಿಯನ್ನು ಮುಂದಿನ ಎರಡು ಮೂರು ದಶಕಗಳ ದೂರದೃಷ್ಟಿ ಹೊಂದಿ ನೀಡಿದ ಅಭ್ಯುದಯದ ಬಜೆಟ್ ಇದಾಗಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ಮಂಡನೆಯಾಗುತ್ತದೆ ಎಂಬ ವೀಕ್ಷಕರ ನಿರೀಕ್ಷೆ ಹುಸಿಯಾಗಿದೆ. ರಾಷ್ಟ್ರದ ಸಮಗ್ರ ಅಭ್ಯುದಯದ ಹಿತಾಸಕ್ತಿಯನ್ನು ಗಮನದಲ್ಲಿರಿಸಿ ನರೇಂದ್ರ ಮೋದಿ ಸರ್ಕಾರ ಅದ್ಭುತ ಮುಂಗಡ ಪತ್ರ ನೀಡಿದೆ. 5 ನದಿಗಳ ಜೋಡಣೆಗೆ 44,605 ಕೋಟಿ ರೂ. ಹಣ ಮೀಸಲು, ಸಣ್ಣ ಉದ್ಯಮಿಗಳಿಗೆ ತುರ್ತುಸಾಲ, ಕ್ರೆಡಿಟ್ ಗ್ಯಾರಂಟಿ ಅವಧಿ ವಿಸ್ತರಣೆ, ಸೋಲಾರ್ ಪವರ್ ವಿದ್ಯುತ್ ಯೋಜನೆ, ಒನ್ ಕ್ಲಾಸ್ ಒನ್ ಟಿವಿ ಕಾರ್ಯಕ್ರಮ ನಿಶ್ಚಿತವಾಗಿಯೂ ರಾಷ್ಟ್ರದ ಬೆಳವಣಿಗೆಗೆ ಪೂರಕವಾಗಲಿವೆ. 1486 ಅನುಪಯುಕ್ತ ಕಾನೂನುಗಳ ರದ್ದು ಸಾಮಾಜಿಕ ನ್ಯಾಯಾಂಗ ವ್ಯವಸ್ಥೆ ಸುಧಾರಣೆಗೊಳ್ಳಲಿದೆ. ಬಂಡವಾಳ ಹೂಡಿಕೆ ಹೆಚ್ಚಳದಿಂದ ಅಭಿವೃದ್ಧಿಯೊಂದಿಗೆ ಉದ್ಯೋಗಾವಕಾಶಗಳು ಹೆಚ್ಚಲಿದ್ದು ಬಹುದಿನಗಳ ಆಶಯದಂತೆ ಸಹಕಾರ ರಂಗದಲ್ಲಿ ಏಕರೂಪದ ತೆರಿಗೆ ವ್ಯವಸ್ಥೆ ಪರಿಣಾಮಕಾರಿಯಾಗಿ ಬಜೆಟ್‍ನಲ್ಲಿ ಜಾರಿಗೆ ತಂದ ನರೇಂದ್ರ ಮೋದಿಜಿಯವರ ನೇತೃತ್ವದ ಕೇಂದ್ರ ಸರಕಾರ ಅಭಿನಂದನಾರ್ಹ ಎಂದು ಶಾಸಕ ಹರೀಶ್ ಪೂಂಜ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

error: Content is protected !!