ಬೆಳ್ತಂಗಡಿ: ನಾರಾಯಣ ಗುರುಗಳು ಜಗತ್ತಿನ ಗುರುಗಳಾಗಿದ್ದು ಅವರು ಜನಿಸದೇ ಇದ್ದಲ್ಲಿ ಇಂದಿಗೂ ದೇಶದ 70% ಹಿಂದುಳಿದ ವರ್ಗಗಳು,ಮಹಿಳೆಯರು ತಲೆಎತ್ತಿ ನಡೆಯಲು ಸಾಧ್ಯವಿರುತ್ತಿರಲಿಲ್ಲ. ಮಹಿಳೆಯರು ಮೇಲ್ವರ್ಗದವರ ದಬ್ಬಾಳಿಕೆಯಿಂದ ಸರಿಯಾಗಿ ಬಟ್ಟೆ ಧರಿಸಲು ಇಲ್ಲದಂತ ಕಾಲದಲ್ಲಿ ಹಿಂದುಳಿದವರ ಪರ, ಮಹಿಳೆಯರ ಪರ ಧ್ವನಿಯಾಗಿ ನಿಂತ ನಾರಾಯಣ ಗುರುಗಳ ಸ್ಥಬ್ದ ಚಿತ್ರವನ್ಬು ಗಣರಾಜ್ಯೋತ್ಸವ ದಿನದಂದು ಬಳಸಲು ತಿರಸ್ಕರಿಸಬಹುದು. ಆದರೆ ಮುಂದಿನ ವರ್ಷದವರೆಗೆ ಅವಕಾಶ ನೀಡುವುದನ್ನು ಕಾಯುತ್ತಿದ್ದೇವೆ. ಮುಂದಿನ ವರ್ಷವು ಅವಕಾಶ ನೀಡದೇ ಇದ್ದಲ್ಲಿ ದೇಶವ್ಯಾಪಿ ಪ್ರತಿಭಟನೆ ಮಾಡಿ ನಾರಾಯಣ ಗುರುಗಳು ವಿಶ್ವಗುರುಗಳು ಎಂದು ತೋರಿಸಲಾಗುವುದು ಎಂದು ಮಾಜಿ ಶಾಸಕ ಶ್ರೀ ಗುರುನಾರಾಯಣ ಸ್ವಾಮಿ ಸೇವಾಸಂಘದ ಗೌರವಾಧ್ಯಕ್ಷ ಕೆ.ವಸಂತ ಬಂಗೇರ ಹೇಳಿದರು.
ಅವರು ಬುಧವಾರ ಶ್ರೀಗುರುನಾರಾಯಣ ಸ್ವಾಮಿ ಸೇವಾಸಂಘ (ರಿ) ಬೆಳ್ತಂಗಡಿ, ಮಹಿಳಾ ಬಿಲ್ಲವ ವೇದಿಕೆ ಬೆಳ್ತಂಗಡಿ, ಯುವಬಿಲ್ಲವ ವೇದಿಕೆ ,ಯುವವಾಹಿನಿ ಘಟಕ ವೇಣೂರು ಮತ್ತು ಬೆಳ್ತಂಗಡಿ ಮತ್ತು ವಿವಿಧ ಸಂಘಟನೆಗಳ ವತಿಯಿಂದ ನಡೆದ ನಾರಾಯಣ ಗುರುಗಳ ಸ್ಥಬ್ದಚಿತ್ರ ಮೆರವಣಿಗೆಗೆ ಕುತ್ಯಾರು ಶ್ರಿ ಸೋಮನಾಥೇಶ್ವರ ದೇವಸ್ಥಾನದ ಎದುರು ಚಾಲನೆ ನೀಡಿ ಮಾತನಾಡಿ ಹಿಂದುಳಿದ ವರ್ಗದವರಿಗೆ ದೇವಸ್ಥಾನ ಪ್ರವೇಶ ಇಲ್ಲದ ಸಮಯದಲ್ಲಿ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ದೇವಸ್ಥಾನ ಕಟ್ಟಿ ದೇವಸ್ಥಾನಕ್ಜೆ ಪ್ರವೇಶಕ್ಕೆ ಅವಕಾಶ ನೀಡಿದವರು ನಾರಾಯಣ ಗುರುಗಳು. ಅವರ ಚಿಂತನೆಗಳು ಕೇಂದ್ರ ಸರಕಾರಕ್ಕೆ ತಿಳಿದ್ದಿಲ್ಲವಾದರೆ ಅದನ್ನು ತಿಳಿಸುವ ಸಮಯ ಹತ್ತಿರದಲ್ಲಿ ಬರುತ್ತಿದೆ ಎಂದರು.
ಸಾಹಿತಿ ಅತ್ರಾಡಿ ಅಮ್ರುತಾ ಶೆಟ್ಟಿ ಮಾತನಾಡಿ ದೇಶದ 85% ಹಿಂದುಳಿದ ವರ್ಗಕ್ಕೆ ಸ್ವಾಭಿಮಾನದ ಬದುಕನ್ನು ರೂಪಿಸಿದವರು ನಾರಾಯಣ ಗುರುಗಳು. ಸಮಾಜ ಪರಿವರ್ತನೆಗೆ ತೊಡಗಿದವರನ್ನು ಇದುವರೆಗೂ ತುಳಿತಕ್ಕೊಳಪಡಿಸಿದ ಉದಾಹರಣೆಗಳು ತುಂಬಾ ಇದೆ ಆದರೆ ನಾರಾಯಣ ಗುರುಗಳನ್ನು ಅಷ್ಟು ಸುಲಭದಲ್ಲಿ ತುಳಿತಕ್ಕೊಡಪಡಿಸಲು ಸಾದ್ಯವಿಲ್ಲ. ಇಂದು ನಾರಾಯಣಗುರುಗಳ ಸ್ಥಬ್ದ ಚಿತ್ರವನ್ನು ತಿರಸ್ಕರಿಸಲು ಮಾತ್ರ ಸಾದ್ಯ ಆದರೆ ನಾರಾಯಣಗುರುಗಳ ತತ್ವಸಿದ್ಧಾಂತವನ್ನು ತಿರಸ್ಕರಿಸಲು ಯಾರಿಂದಲೂ ಸಾದ್ಯವಿಲ್ಲ. ನಾರಾಯಣಗುರುಗಳ ಸ್ಥಬ್ಧಚಿತ್ರವನ್ನು ದೆಹಲಿಯಲ್ಲಿ ತಿರಸ್ಕರಿಸಿದೆ ಎಂದರೆ ಹಳ್ಳಿಹಳ್ಳಿಯಲ್ಲೂ ನಾರಾಯಣಗುರುಗಳ ಸ್ಥಬ್ದಚಿತ್ರ ಉದಯವಾಯಿತು ಎಂದರ್ಥ. ಇನ್ನಾದರು ಹಿಂದುಳಿದ ವರ್ಗದವರ,ಶೋಷಿತರ ನೋವಿನ ಕಿಚ್ಚು ಜೀವಂತವಾಯಿತು ಎಂದು ಅರ್ಥಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳಾದ ಪಿತಾಂಬರ ಹೇರಾಜೆ, ನ್ಯಾಯವಾದಿ ಭಗೀರಥ ಜಿ, ಜಯರಾಮ ಬಂಗೇರ ಹೇರಾಜೆ, ಕೋಶಾಧಿಕಾರಿ ಅಭಿನಂದನ್ ಹರೀಶ್ ಕುಮಾರ್, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಸುಜಿತಾ ವಿ ಬಂಗೇರ, ಕಾರ್ಯದರ್ಶಿ ಶಾಂಭವಿ ಪಿ. ಬಂಗೇರ, ಯುವವಾಹಿನಿ ಬೆಳ್ತಂಗಡಿ ಅಧ್ಯಕ್ಷೆ ಸುಜಾತಾ ಅಣ್ಣಿ ಪೂಜಾರಿ, ವೇಣೂರು ಘಟಕಗಳ ಅಧ್ಯಕ್ಷ ಯೋಗೀಶ್ ಪೂಜಾರಿ, ಸಮಾನ ಮನಸ್ಕ ಸಂಘಟನೆಯ ರಾಜಶೇಖರ ಅಜ್ರಿ, ರಕ್ಷಿತ್ ಶಿವರಾಮ್, ಶೈಲೇಶ್ ಕುಮಾರ್, ರಂಜನ್ ಜಿ. ಗೌಡ, ಜಗದೀಶ್ ಡಿ, ಬಿ.ಎಂ.ಭಟ್, ಶೇಖರ ಲಾಯಿಲ, ಬಿ.ಕೆ ವಸಂತ್, ವಸಂತ ಪುದುವೆಟ್ಟು, ಅಬ್ದುಲ್ ರಹಿಮಾನ್ ಪಡ್ಪು, ರಾಜೀವ್ ಸಾಲ್ಯಾನ್, ಭರತ್ ಇಂದಬೆಟ್ಟು, ರಾಜಶ್ರೀ ರಮಣ್, ಧರ್ಣಪ್ಪ ಮಾಸ್ಟರ್, ಉಷಾ ಶರತ್, ದಯಾನಂದ ಬೆಳಾಲು, ನಮಿತಾ ಪೂಜಾರಿ, ಜುಬೈರ್, ಸಲೀಮ್, ಮಧುಕರ ಸುವರ್ಣ, ಶ್ರೀಮತಿ ನೆಬಿಸಾ, ಪುಷ್ಪಾ, ಈಶ್ವರಿ, ಭವ್ಯ, ಕವಿತಾ, ಕಿರಣ್ ಪ್ರಭಾ, ಹಾಗೂ ತಾಲೂಕಿನ ವಿವಿಧ ಗ್ರಾಮಗಳ ಬಿಲ್ಲವ ಸಂಘಟನೆಯ ಪ್ರಮುಖರು, ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು, ನಾರಾಯಣ ಗುರುಗಳ ಭಕ್ತರು, ಅನುಯಾಯಿಗಳು, ಸಮಾನ ಮನಸ್ಕ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.
ಸಂಘದ ಕಾರ್ಯದರ್ಶಿ ಜಯವಿಕ್ರಮ ಕಲ್ಲಾಪು ಸ್ವಾಗತಿಸಿದರು. ನ್ಯಾಯವಾದಿ ಮನೋಹರ ಕುಮಾರ್ ಇಳಂತಿಲ ಕಾರ್ಯಕ್ರಮ ನಿರೂಪಿಸಿದರು. ಯುವ ಬಿಲ್ಲವ ವೇದಿಕೆ ಅಧ್ಯಕ್ಷ ನಿತೀಶ್ ಹೆಚ್ ವಂದಿಸಿದರು. ಬಳಿಕ ವಿವಿಧ ಸಂಘಟನೆಗಳು ಹಾಗೂ ಮುಖಂಡರ ನೇತೃತ್ವದಲ್ಲಿ ತಶೀಲ್ದಾರರ ಮೂಲಕ ರಾಷ್ಟçಪತಿಗಳಿಗೆ ಹಾಗೂ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.