ಆಯುರ್ವೇದ ಎಂಡಿ ಪದವಿಯಲ್ಲಿ ಡಾ.‌ಆಶಿಕಾ ಗುರುವಾಯನಕೆರೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ.

 

 

 

 

ಬೆಳ್ತಂಗಡಿ; ಮೈಸೂರಿನ ಸರಕಾರಿ ಆಯುರ್ವೇದ ಕಾಲೇಜಿನಲ್ಲಿ ಆಯುರ್ವೇದ ಸಂಹಿತಾ ಮತ್ತು ಸಿದ್ದಾಂತದಲ್ಲಿ ಅಭ್ಯಾಸ ಪೂರೈಸಿದ ಡಾ. ಆಶಿಕಾ ಗುರುವಾಯನಕೆರೆ ಅವರು ಎಂಡಿ ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಪೂರ್ತಿಗೊಳಿಸಿದ್ದಾರೆ.

ಕುವೆಟ್ಟು ಗ್ರಾಮದ ಸುನ್ನತ್‌ಕೆರೆ‌ ಮಸೀದಿ ಬಳಿ ನಿವಾಸಿ, ಚಾಲಕ ಬಿ. ಯೂಸುಫ್ ಮತ್ತು ಜಮೀಲಾ ದಂಪತಿ ಪುತ್ರಿಯಾಗಿರುವ ಡಾ. ಆಶಿಕಾ ಅವರು ಬೆಂಗಳೂರಿನ ಸರಕಾರಿ ಆಯುರ್ವೇದ ಕಾಲೇಜಿನಲ್ಲಿ ಬಿಎಎಮ್‌ಎಸ್‌ ವೈದ್ಯ ಪದವಿ ಪೂರ್ತಿಗೊಳಿಸಿದ್ದರು‌. ಇವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಗುರುವಾಯನಕೆರೆ ಸರಕಾರಿ ಶಾಲೆಗಳಲ್ಲಿ ಪೂರೈಸಿದರೆ, ಪ.ಪೂ ಶಿಕ್ಷಣವನ್ನು ವಾಣಿ ಕಾಲೇಜಿನಲ್ಲಿ ಮುಗಿಸಿದ್ದರು.
ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದ ಅವರು ಕಲಿಕೆಯಲ್ಲಿ ಸಾಧನೆಗಳನ್ನು ದಾಖಲಿಸುತ್ತಾ, ರಾಜೀವ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ ಕರ್ನಾಟಕ ಇಲ್ಲಿ ‘ಎ ಕಾನ್ಸೆಪ್ಚುವಲ್ ಏಂಡ್ ಎಪ್ಲೈಡ್ ರೀಸರ್ಚ್ ಓನ್ ಟ್ರೈಕಾಲಜಿ’ ಎಂಬ ವಿಶೇಷ ಅಧ್ಯಯನ ನಡೆಸಿ ಎಂಡಿ ಪದವಿ ಪೂರೈಸಿದ್ದಾರೆ‌.

error: Content is protected !!