ಕೇಂದ್ರ ಸರ್ಕಾರ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ ಗುರುನಾರಾಯಣ ಸ್ವಾಮಿಗಳ ಸ್ತಬ್ದ ಚಿತ್ರಕ್ಕೆ ಅವಕಾಶ ನಿರಾಕರಣೆ‌ ಸಮಾನ ಮನಸ್ಕ ವೇದಿಕೆಯಿಂದ  ಬೆಳ್ತಂಗಡಿಯಲ್ಲಿ ಪ್ರತಿಭಟನೆ

 

 

 

ಬೆಳ್ತಂಗಡಿ:ಎಡ ಮತ್ತು ಜಾತ್ಯಾತೀತ ಪಕ್ಷಗಳು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ದಲಿತ, ವಿದ್ಯಾರ್ಥಿ, ಯುವ ಜನ , ಮಹಿಳಾ ಸಂಘಟನೆಗಳು ಜಂಟಿಯಾಗಿ ಜ 26 ಗಣರಾಜ್ಯೋತ್ಸವ ದಿನದಂದು ನಡೆಸಲಿರುವ ನಾರಾಯಣ ಗುರುಗಳ ಭಾವಚಿತ್ರದ ಮೆರವಣಿಗೆ, ಗುರುಗಳಿಗೆ, ಗೌರವ ಸಲ್ಲಿಕೆ, ಅಂಗವಾಗಿ ಕುತ್ಯಾರು ದೇವಸ್ಥಾನದಿಂದ ಗುರು ನಾರಾಯಣ ಭವನ ತನಕ ಸ್ವಾಭಿಮಾನಿ ನಡಿಗೆ ಹಾಗೂ ನಂತರ ತಾಲೂಕು‌ ಕಚೇರಿಗೆ ತೆರಳಿ ಪ್ರತಿಭಟನೆಯನ್ನು ಬೆಳ್ತಂಗಡಿ ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆ ಮಾಡಲಿದೆ. ಎಂದು ಮಾಜಿ ಶಾಸಕ  ವಸಂತ ಬಂಗೇರ ಹಾಗೂ ಸಿಪಿಐ(ಎಂ) ಮುಖಂಡ  ಬಿ.ಎಂ ಭಟ್ ಹೇಳಿದರು. ಅವರು ಬೆಳ್ತಂಗಡಿ ಗುರುನಾರಾಯಣ ಸಭಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಕೇರಳ ಸರ್ಕಾರ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದ ಸಮಾಜ ಸುಧಾರಕ ಶ್ರೀ ನಾರಾಯಣ ಗುರುಗಳ ಸ್ತಬ್ದ ಚಿತ್ರಕ್ಕೆ ಗಣರಾಜ್ಯೋತ್ಸವದ ಪರೇಡ್ ನಲ್ಲಿ ಅವಕಾಶ ನೀಡದೇ ಅವಮಾನಿಸಿರುವ ಕೇಂದ್ರದ ಬಿಜೆಪಿ ಸರಕಾರದ ಕ್ರಮವನ್ನು ಖಂಡಿಸಿ ಹಾಗೂ ನಾರಾಯಣ ಗುರುಗಳ ಸ್ತಬ್ದ ಚಿತ್ರಕ್ಕೆ ಬದಲಾಗಿ ಶ್ರೀ ಶಂಕರಾಚಾರ್ಯರ ಸ್ತಬ್ದ ಚಿತ್ರವನ್ನು ಅಳವಡಿಸಿಕೊಟ್ಟರೆ ಪರಿಗಣಿಸುತ್ತೇವೆ ಎಂದು ಕೇಂದ್ರ ಸರಕಾರ ಹೇಳಿದೆ ಎಂದು ವರದಿಯಾಗಿದೆ. ಇದು ಧರ್ಮವನ್ನು ಒಡೆಯುವ ,ಹಿಂದುಳಿದ ವರ್ಗವನ್ನು ಕಡೆಗಣಿಸುವ ಹುನ್ನಾರ ಮತ್ತು ಮಾನವರೆಲ್ಲರೂ ಸಮಾನರು ಎಂದು ಸಾರಿದ ಶ್ರೀ ಗುರುನಾರಾಯಣ ಗುರುಗಳಿಗೆ ಮಾಡಿದ ಅವಮಾನವಾಗಿದೆ. ಈ ಕಾರಣಗಳಿಂದ ಜ 26 ಬೆಳಿಗ್ಗೆ 9:30 ನಾರಾಯಣ ಗುರುಗಳ ಭಾವಚಿತ್ರದ ಮೆರವಣಿಗೆ ನಡೆಸುವುದು ಮತ್ತು ಗುರುಗಳಿಗೆ ಗೌರವ ಸಲ್ಲಿಕೆ ಅಂಗವಾಗಿ ಕುತ್ಯಾರು ದೇವಸ್ಥಾನದಿಂದ ಗುರುನಾರಾಯಣ ಭವನ ತನಕ ಸ್ವಾಭಿಮಾನಿ ನಡಿಗೆ ಕಾರ್ಯಕ್ರಮ ನಡೆಯಲಿದ್ದು ನಂತರ ತಾಲೂಕು ಕಚೇರಿಗೆ ತೆರಳಿ ಕೇಂದ್ರ ಸರಕಾರದ ಈ ತಪ್ಪು ದೋರಣೆಯನ್ನು ಖಂಡಿಸಿ ಎಡ ಮತ್ತು ಜಾತ್ಯಾತೀತ ಪಕ್ಷಗಳು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು , ದಲಿತ, ವಿದ್ಯಾರ್ಥಿ ಯುವ ಜನ ಮಹಿಳಾ ಸಂಘಟನೆಗಳು ಜಂಟಿಯಾಗಿ ಪ್ರತಿಭಟನೆ ನಡೆಯಲಿದೆ.ಸಂವಿಧಾನದ ಮೂಲ ಆಶಯಕ್ಕೆ ಭಾರತ ದೇಶದ ಒಕ್ಕೂಟ ವ್ಯವಸ್ಥೆಯ ಉಲ್ಲಂಘನೆ ಮಾಡಿ ಈ ಬಾರಿಯ ಗಣರಾಜ್ಯೋತ್ಸವ ‌ ಪಥಸಂಚಲನದಲ್ಲಿ ಭಾಗವಹಿಸಲು ಕೇರಳ ಸರಕಾರ ಕಳುಹಿಸಿದ ಶ್ರೀ ನಾರಾಯಣ ಗುರುಗಳ ಸ್ತಬ್ದ ಚಿತ್ರವನ್ನು ತಿರಸ್ಕರಿಸುವುದನ್ನು ಭಾರತ ದೇಶದ ಪ್ರಜೆಗಳಾದ ನಾವು ಒಕ್ಕೋರಲಿನಿಂದ ಖಂಡಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪಿತಾಂಬರ ಹೇರಾಜೆ, ಬಿ.ಕೆ. ವಸಂತ, ಶೇಖರ್ ಲಾಯಿಲ ಉಪಸ್ಥಿತರಿದ್ದರು.

error: Content is protected !!