2 ಚಿನ್ನದ ಪದಕ ಪಡೆದ 3 ನೇ ತರಗತಿಯ ಪೋರಿ: ಅಖಿಲ ಭಾರತ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಬೆಳ್ತಂಗಡಿಯ ದೀಕ್ಷಿತಾ ಸಾಧನೆ

 

 

 

 

ಬೆಳ್ತಂಗಡಿ:ಮೂಡಬಿದ್ರೆ ಸಮಾಜ ಮಂದಿರದ ಸ್ವಾಮಿ ಸ್ಟ್ರೆಂತ್ ತರಬೇತಿ ಕೇಂದ್ರದಲ್ಲಿ ಜ13 ರಂದು ಶೊರಿನ್ – ಆರ್ ವೈ ಯು ಕರಾಟೆ ಅಸೋಸಿಯೇಷನ್ ಆಯೋಜಿಸಿದ 6 ನೇ ಅಖಿಲ ಭಾರತ ಕರಾಟೆ ಚಾಂಪಿಯನ್‌ ಶಿಪ್ ನಲ್ಲಿ ಬೆಳ್ತಂಗಡಿ ವೈಎಸ್ ಕೆ ಕರಾಟೆ ಗುರು ಅಶೋಕ್ ಆಚಾರ್ಯ ಇವರ ಶಿಷ್ಯೆ ದೀಕ್ಷಿತ . ಕೆ ಇವರು _ಜೂನಿಯರ್ ವಿಭಾಗದ ಕಟಾದಲ್ಲಿ ಪ್ರಥಮ_ ಹಾಗೂ ಕುಮಿಟೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು 2 ಚಿನ್ನದ ಪದಕ ಪಡೆದಿರುತ್ತಾರೆ. ಇವರು ಬೆಳ್ತಂಗಡಿ ಪೊಲೀಸ್ ಹೆಡ್ ಕಾನ್ಸ್ಟೇಬಲ್  ಕನಕರಾಜ್ ಆರ್ ಹಾಗೂ ಸುಮತಿ ಕೆ ಇವರ ಪುತ್ರಿಯಾಗಿದ್ದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ CBSE ಆಂಗ್ಲ ಮಾದ್ಯಮ ಶಾಲೆಯ 3 ನೇ ತರಗತಿಯ B ವಿಭಾಗದ ವಿದ್ಯಾರ್ಥಿನಿಯಾಗಿದ್ದಾಳೆ.

error: Content is protected !!