ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನಲ್ಲಿ “ಆ್ಯಂಟಿಕ್ ಫೆಸ್ಟ್” ಉದ್ಘಾಟನೆ.

 

 

 

 

ಬೆಳ್ತಂಗಡಿ:ಮುಳಿಯ ಜ್ಯುವೆಲ್ಸ್ ನಲ್ಲಿ “ಅ್ಯಂಟಿಕ್ ಫೆಸ್ಟ್” ನ ಉದ್ಘಾಟನಾ ಕಾರ್ಯಕ್ರಮ ಡಿ 23 ರಂದು ನೆರವೇರಿತು .ಕಾರ್ಯಕ್ರಮವನ್ನು ಸೌಮ್ಯಲತಾ ಅಬಕಾರಿ ನಿರೀಕ್ಷಕರು ಬೆಳ್ತಂಗಡಿ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಮುಳಿಯ ಸಂಸ್ಥೆಗೆ ಶುಭ ಹಾರೈಸಿ ಸಂಸ್ಥೆಯ ಸಮಾಜಮುಖಿ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾರುಕಟ್ಟೆ ವಿಭಾಗದ ಜಯಂತ್ ಉಪಸ್ಥಿತರಿದ್ದರು. ದೀಪಿಕ ಕಾರ್ಯಕ್ರಮ ನಿರೂಪಿಸಿದರು. ಶಾಖಾ ಪ್ರಬಂಧಕ ಗುರುರಾಜ್ ಅವಭೃತ ಸ್ವಾಗತಿಸಿ ಉಪ ಪ್ರಬಂಧಕ ಸತ್ಯ ಗಣೇಶ್ ವಂದಿಸಿದರು.

error: Content is protected !!