ರಾಜಕೀಯ ನಿವೃತ್ತಿ ಇಲ್ಲ ಮಾಜಿ ಶಾಸಕ ವಸಂತ ಬಂಗೇರ ಸ್ಪಷ್ಟನೆ

 

 

 

 

ಬೆಳ್ತಂಗಡಿ: ಮಾಜಿ ಶಾಸಕ ವಸಂತ ಬಂಗೇರ ರಾಜಕೀಯ ನಿವೃತ್ತಿ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತಿದ್ದು ಈ ಬಗ್ಗೆ ಅವರು ಪ್ರತಿಕ್ರಿಯಿಸಿ ಯಾವುದೇ ಕಾರಣಕ್ಕೂ ರಾಜಕೀಯ ನಿವೃತ್ತಿ ಬಗ್ಗೆ ಯೋಚನೆ ಮಾಡಿಲ್ಲ ಕಳೆದ ಎರಡು ದಿನಗಳ ಹಿಂದೆ ಮಾದ್ಯಮವೊಂದು ನಡೆಸಿದ ಸಂದರ್ಶನದಲ್ಲಿ ರಾಜಕೀಯ ನಿಲುವಿನ ಬಗ್ಗೆ ನನ್ನಲ್ಲಿ ಕೇಳಿದ ಪ್ರಶ್ನೆಗೆ ಸಮರ್ಪಕವಾಗಿ ಉತ್ತರಿಸಿ ಮುಂದಿನ ಚುನಾವಣೆಯ ಬಗ್ಗೆ ಮಾತನಾಡಿದ್ದೇನೆ ಹೊರತು ರಾಜಕೀಯ ನಿವೃತ್ತಿ ಬಗ್ಗೆ ಉಲ್ಲೇಖಿಸಿರಲಿಲ್ಲ ಅದರೆ ಕೆಲವೊಂದು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಮಾಹಿತಿ ಹರಿದಾಡುತಿದ್ದು ಇದು ಸತ್ಯಕ್ಕೆ ದೂರವಾದ ಮಾಹಿತಿಯಾಗಿದೆ. ನಾನು ನನ್ನ ಜೀವನದ ಕೊನೆ ಕಾಲದವರೆಗೆ ಜನರ ಸೇವೆಗೆ ಬದ್ಧನಾಗಿದ್ದು ಅನ್ಯಾಯದ ವಿರುದ್ಧ ಸದಾ ಸ್ಪಂದಿಸುವುದಾಗಿ ಸ್ಷಷ್ಟ ಪಡಿಸಿದ್ದಾರೆ.

error: Content is protected !!