ಕಕ್ಕಿಂಜೆ:ಆರೋಗ್ಯ ಮತ್ತು ಶಿಕ್ಷಣ ದೇಶದ ಅಭಿವೃದ್ಧಿಯಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ.ಉತ್ತಮ ಆರೋಗ್ಯದ ಜತೆ ಎಲ್ಲರೂ ಶಿಕ್ಷಣ ಪಡೆಯುವಂತಾಗಬೇಕು ಎಂದು
ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಹೇಳಿದರು ಅವರು ಡಿ 17 ಶುಕ್ರವಾರ ಕಕ್ಕಿಂಜೆ ಸೈಂಟ್ ಜೋಸೆಫ್ ಆಸ್ಪತ್ರೆ ಹಾಗೂ ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್,ಪುತ್ತೂರು ಇವರ ಆಶ್ರಯದಲ್ಲಿ ಕಕ್ಕಿಂಜೆ ಸರಕಾರಿ ಪ್ರೌಢ ಶಾಲೆಯಲ್ಲಿ ‘ಸ್ವಾಸ್ಥ್ಯ ಅಮೃತ’ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.ಗ್ರಾಮೀಣ ಹಾಗೂ ಸರಕಾರಿ ಶಾಲೆಯ ವಿದ್ಯಾರ್ಥಿಗಳ ಕ್ಷೇಮಕಾಗಿ ಆಕಾಂಕ್ಷಾ ಟ್ರಸ್ಟ್ ತಾಲೂಕಿನ 75 ಶಾಲೆಗಳಲ್ಲಿ,ಆರೋಗ್ಯ ತಪಾಸಣೆ ಹಾಗೂ ಮಾಹಿತಿ ಕಾರ್ಯಕ್ರಮ ಆಯೋಜಿಸಿದೆ.ಇದು ವಿದ್ಯಾರ್ಥಿಗಳಿಗೆ ಸದೃಢವಾಗಿ ಬೆಳೆಯಲು ಅನುಕೂಲವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶ್ರೀಶ ಭಟ್ ಸರಿಯಾದ ಆಹಾರ ಪದ್ಧತಿ ಅನುಸರಿಸಿದರೆ ಆರೋಗ್ಯ ರಕ್ಷಣೆ ಸಾಧ್ಯ,ಮನೆ ಆಹಾರವನ್ನು ಹೆಚ್ಚು ಸೇವಿಸುವುದು ಆರೋಗ್ಯಕ್ಕೆ ಪೂರಕ ಎಂದರು.
ಕಾರ್ಯಕ್ರಮದಲ್ಲಿ
ಚಾರ್ಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಮನೋಜ್,ಪುತ್ತೂರು ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ವಿ.ಜಿ.ಭಟ್,ಉಪ್ಪಿನಂಗಡಿ ಇಂದ್ರಪ್ರಸ್ಥ ಕಾಲೇಜು ಪ್ರಾಂಶುಪಾಲ ಎಚ್.ಕೆ.ಪ್ರಕಾಶ್,ವಿವೇಕಾನಂದ ಪದವಿಪೂರ್ವ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಹರೀಶ್ ಶಾಸ್ತ್ರಿ,ಬೆಳ್ತಂಗಡಿ ಪತ್ರಕರ್ತರ ಸಂಘದ ಅಧ್ಯಕ್ಷ ಅಚುಶ್ರೀ ಬಾಂಗೇರು,ಕಕ್ಕಿಂಜೆ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ರವಿಕುಮಾರ್ ಬಿ,ಕಕ್ಕಿಂಜೆ ಎಂಬಿಎಂ ಅಧ್ಯಕ್ಷ ಎಂ.ಮಮ್ಮಿ ಕುಂಞ ಅರೆಕ್ಕಲ್, ಶಾಲಾಭಿವೃದ್ಧಿ ಸಮಿತಿಯ ಶ್ರೀನಿವಾಸ್ ಉಪಸ್ಥಿತರಿದ್ದರು.ಕಕ್ಕಿಂಜೆ ಸೈಂಟ್ ಜೋಸೆಫ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಸಂದೀಪ್ ಎಸ್.ಎಚ್ ಸ್ವಾಗತಿಸಿ .,ಡಾ.ಅನನ್ಯ ಲಕ್ಷ್ಮಿ ಸಂದೀಪ್, ಪ್ರಸ್ತಾವನೆಗೈದರು ಡಾ.ಸೋಹನ್ ಕುಮಾರ್ ಎನ್,ಆಡಳಿತಾಧಿಕಾರಿ ನಿಧಿನಾ ಪಿ.ತೋಮಸ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.ಮಾರ್ಕೆಟಿಂ ಗ್ ಕನ್ಸಲ್ಟೆಂಟ್ ಉಮೇಶ್ ಗೌಡ ಕೌಡಂಗೆ ಕಾರ್ಯಕ್ರಮ ನಿರೂಪಿಸಿದರು.ಪಿ.ಆರ್.ಒ. ಜೋಸ್ ವಂದಿಸಿದರು.
ಕಾರ್ಡ್ ವಿತರಣೆ
ವಿದ್ಯಾರ್ಥಿಗಳ ಆರೋಗ್ಯ ಅನುಕೂಲಕ್ಕಾಗಿ ಸಂಸ್ಥೆ ವತಿಯಿಂದ ಶಾಲಾ ಹುಡುಗರಿಗೆ ಬ್ಲೂ ಕಾರ್ಡ್,ಹುಡುಗಿಯರಿಗೆ ಪಿಂಕ್ ಕಾರ್ಡ್ ನೀಡಲಾಯಿತು.ಆಹಾರ ಸೇವನೆ ಕುರಿತು ಪೌಷ್ಟಿಕಾಂಶ ಚಾರ್ಟ್ ಬಿಡುಗಡೆಗೊಳಿಸಲಾಯಿತು.ಮಕ್ಕಳ ಆರೋಗ್ಯ ತಪಾಸಣೆ ನಡೆಸಿ,ಮಾಹಿತಿ ನೀಡಲಾಯಿತು.