ಬೆಳ್ತಂಗಡಿ:ತಮಿಳುನಾಡಿನ ನೀಲಗಿರಿ ಸಮೀಪದ ಕುನ್ನೂರು ಎಂಬಲ್ಲಿ ಡಿ.08 ಬುಧವಾರ ನಡೆದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ವೀರ ಮರಣವನ್ನಪ್ಪಿದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ಪತ್ನಿ ಮಧುಲಿಕಾ ಸೇರಿದಂತೆ 13 ಸೇನಾಧಿಕಾರಿಗಳಿಗೆ ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಗೌರವನಮನ ಕಾರ್ಯಕ್ರಮ ಬೆಳ್ತಂಗಡಿ ಮೂರು ಮಾರ್ಗದ ಬಳಿ ನಡೆಯಿತು.
ನಿವೃತ್ತ ಸೈನಿಕರಾದ ಸುನೀಲ್ ಶೆಣೈ ಮತ್ತು ಉಮೇಶ್ ಬಂಗೇರ ದೀಪ ಬೆಳಗಿಸಿ ಮಡಿದ ಯೋಧರ ಭಾವಚಿತ್ರಕ್ಕೆ ಪುಷ್ಪರ್ಚನೆಗೈದು ಗೌರವ ನಮನ ಸಲ್ಲಿಸಿದರು. ವೀರ ಮರಣವನ್ನಪ್ಪಿದವರ ಆತ್ಮಕ್ಕೆ ಪರಮಾತ್ಮನು ಚಿರಶಾಂತಿ ನೀಡಿ ಅವರ ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಮೌನ ಪ್ರಾರ್ಥನೆಯೊಂದಿಗೆ ದೇವರಲ್ಲಿ ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಯುವ ಮೋರ್ಚಾ ಅಧ್ಯಕ್ಷ ಯಶವಂತ ಗೌಡ ಬೆಳಾಲು ಕಾರ್ಯದರ್ಶಿ ಉಮೇಶ್ ಕುಲಾಲ್ ,ಸೀತಾರಾಮ್ ಬೆಳಾಲ್ , ಪ್ರಮೋದ್ ದಿಡುಪೆ, ಗಣೇಶ್ .ಆರ್.ಲಾಯಿಲ, ರಜನಿ ಕುಡ್ವ, ,.ಜಯಾನಂದ ಗೌಡ, ಶರತ್ ಬೆಳ್ತಂಗಡಿ,ಅರವಿಂದ ಲಾಯಿಲ, ಚಂದ್ರರಾಜ್ ಮೇಲಂತಬೆಟ್ಟು,ಹರಿಕೃಷ್ಣ, ರಾಜೇಶ್ ಪೈ, ಬಾನು ಪ್ರಸನ್ನ, ಹರೀಶ್ ಕಲ್ಲಗುಡ್ಡೆ,ದಯಾರಾಜ್ ಗೇರುಕಟ್ಟೆ, ಸತೀಶ್ ಶೆಟ್ಟಿ ಪುಂಡಿಕ್ಕು, ಜಗದೀಶ್ ಕನ್ನಾಜೆ,ಪ್ರಶಾಂತ್ ಅಂತರ, ಗುರು ಲಾಯಿಲ, ಸಂಕೇತ್ ಬೆಳ್ತಂಗಡಿ, ಕೇಶವ ಅಚ್ಚಿನಡ್ಕ,ಮಂಜುನಾಥ್ ರೆಂಕೆದಗುತ್ತು, ಸೇರಿದಂತೆ ಇನ್ನಿತರ ಯುವ ಮೋರ್ಚಾ ಕಾರ್ಯಕರ್ತರು ಉಪಸ್ಥಿತರಿದ್ದರು.