ಅಭಿವೃದ್ಧಿ, ಜೀರ್ಣೋದ್ದಾರ ಕಾರ್ಯಗಳು ಇತರರಿಗೆ ಪ್ರೇರಣೆಯಾಗಲಿ:ಶಾಸಕ ಹರೀಶ್ ಪೂಂಜ. ಕಳಿಯ ಬದಿನಡೆ ಧರ್ಮದೈವಗಳ ಪ್ರತಿಷ್ಠಾಮಹೋತ್ಸವ ಕಲಶಾಭಿಷೇಕ ಮತ್ತು ನರ್ತನ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

 

ಕಳಿಯ:ಈ ಕ್ಷೇತ್ರದ ಅಭಿವೃದ್ಧಿ ಹಾಗೂ ಜೀರ್ಣೋದ್ಧಾರ ಕೆಲಸಗಳು ಬೇರೆಯವರಿಗೆ ಪ್ರೇರಣೆಯಾಗುವ ರೀತಿಯಲ್ಲಿ ನಡೆಯುತ್ತಿರುವುದು ಸಂತೋಷವನ್ನುಂಟು ಮಾಡುತ್ತಿದೆ. ಒಂದೇ ಮನಸ್ಸಿನಲ್ಲಿ ಒಂದೇ ಭಾವನೆಯಲ್ಲಿ ಇಲ್ಲಿ ಕೆಲಸ ಒಳ್ಳೆಯ ರೀತಿಯಲ್ಲಿ ನಡೆಯುತ್ತಿದೆ. ಆ ದೃಷ್ಟಿಯಲ್ಲಿ ಇವತ್ತು ಆಮಂತ್ರಣ ಪತ್ರಿಕೆ ಬಿಡುಗಡೆಯಾಗಿದೆ.ಇದರ ಮೂಲಕ ನಾಡಿದ್ದು ನಡೆಯುವ ಎಲ್ಲಾ ಕಾರ್ಯಗಳು ಯಶಸ್ವಿಯಾಗಿ ನಡೆಯಲು ದೈವ ದೇವರುಗಳ ಆಶೀರ್ವಾದ ಕೃಪೆ ಸದಾ ಇರುತ್ತದೆ. ಎಂದು  ಬೆಳ್ತಂಗಡಿ ಶಾಸಕರು  ಕಲಶಾಭಿಷೇಕ ಸಮಿತಿಯ ಗೌರವಾಧ್ಯಕ್ಷ   ಹರೀಶ್ ಪೂಂಜ ಹೇಳಿದರು ಅವರು ಡಿ 07 ರಂದು  ಕಳಿಯ ಬದಿನಡೆ ಉಳ್ಳಾಕುಲು ಉಳ್ಳಾಲ್ತಿ ಪರಿವಾರ ಸಾನಿಧ್ಯ ದೈವ ಕೊಡಮಣಿತ್ತಾಯ ಪರಿವಾರ ಸಾನಿಧ್ಯ ಮಂಜಲಡ್ಕ ಇಲ್ಲಿ ಡಿ 21 ರಿಂದ 26 ರವರೆಗೆ ನಡೆಯಲಿರುವ ಪ್ರತಿಷ್ಠಾ ಕಾರ್ಯ ಮತ್ತು ಕಲಶಾಭಿಷೇಕ ಹಾಗೂ ನರ್ತನ ಸೇವೆ ಇದರ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು

 

 

ಇವತ್ತಿನ ಕಾಲಘಟ್ಟದಲ್ಲಿ ಅಜೀರ್ಣವಾಸ್ಥೆಯಲ್ಲಿ ಅನೇಕ ದೈವ ದೇವಸ್ಥಾನಗಳು ಜೀರ್ಣೋದ್ದಾರಗೊಂಡು ಊರಿನ ,ಅಭಿವೃದ್ಧಿ ಆನೇಕ ಕುಟುಂಬಗಳು ನೆಮ್ಮದಿಯ ಜೀವನ ನಡೆಸುವಂತಾಗಿದೆ.ಜೀರ್ಣೋದ್ದಾರ ಹಾಗೂ ಪ್ರತಿಷ್ಠಾಪನೆಗೊಂಡು ನರ್ತನ ಸೇವೆ ನೋಡುವ ಭಾಗ್ಯ ನಮಗೆ ಬಂದಿದೆ ಇದು ನಮ್ಮ ಯೋಗ ಅದ್ದರಿಂದ ಎಲ್ಲರೂ ಸಮರ್ಪಣಾ ಮನೋಭಾವದಿಂದ ದೈವದ ಸೇವೆಯನ್ನು ಮಾಡಿದರೆ ನಮ್ಮ ಜೀವನದಲ್ಲಿ ದೈವದೇವರುಗಳು ಆಶೀರ್ವಾದ ಮಾಡುತ್ತಾರೆ ಎನ್ನುವ ಭಾವನೆಯಲ್ಲಿ ಮುಂದಿನ ದಿನಗಳಲ್ಲಿ ಇಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದರು.
ಕಲಶಾಭಿಷೇಕ ಸಮಿತಿಯ ಅಧ್ಯಕ್ಷ ಕೇಶವ ಬಂಗೇರ ಪ್ರಸ್ತಾವನೆಗೈದರು.
ಈ ಸಂದರ್ಭದಲ್ಲಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ರಾಘವೇಂದ್ರ ಭಾಂಗಿಣ್ಣಾಯ, ಕಾರ್ಯಾಧ್ಯಕ್ಷ ಸುರೇಂದ್ರ ಕುಮಾರ್ ಕಳಿಯಬೀಡು, ಅಧ್ಯಕ್ಷ ಸುವರ್ಣೇಂದ್ರ ಜೈನ್ ಕಳಿಯಬೀಡು, ಪ್ರಧಾನ ಕಾರ್ಯದರ್ಶಿ ಸತ್ಯೇಂದ್ರ ಕುಮಾರ್ ಕಳಿಯಬೀಡು, ಕೋಶಾಧಿಕಾರಿ ಕೂಸಪ್ಪ ಗೌಡ, ಕಲಶಾಭಿಷೇಕ ಸಮಿತಿ ಕಾರ್ಯಾಧ್ಯಕ್ಷ ವಸಂತ ಮಜಲು, ಪ್ರಧಾನ ಕಾರ್ಯದರ್ಶಿ ಸದಾನಂದ ಶೆಟ್ಟಿ, ಕೋಶಾಧಿಕಾರಿ ಬಾಲಕೃಷ್ಣ ಗೌಡ ಬಿರ್ಮೋಟ್ಟು, ಕಳಿಯ ಗ್ರಾ.ಪಂ ಅಧ್ಯಕ್ಷೆ ಸುಭಾಷಿಣಿ ಗೌಡ, ನಾಳ ಶ್ರೀ ದುರ್ಗಾಪರಮೆಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭುವನೇಶ್ ಗೇರುಕಟ್ಟೆ, ಪ್ರಧಾನ ಅರ್ಚಕ ರಾಘವೇಂದ್ರ ಅಸ್ರಣ್ಣ, ಕಲಶಾಭಿಷೇಕ ಸಮಿತಿ ಮತ್ತು ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳು, ಸರ್ವ ಸದಸ್ಯರು, ಊರ ಭಕ್ತಾಧಿಗಳು ಉಪಸ್ಥಿತರಿದ್ದರು.ಜೀರ್ಣೋದ್ಧಾರ ಸಮಿತಿ ಸಂಘಟನಾ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ ಸ್ವಾಗತಿಸಿ, ರಾಘವ ಕಾರ್ಯಕ್ರಮ ನಿರೂಪಿಸಿದರು.

 

 

 

ಬಂಗರಸರ ಆಳ್ವಿಕೆಯ ಬಂಗಾಡಿ ಸೀಮೆಯ ವ್ಯಾಪ್ತಿಗೆ ಬರುವ ಕಳಿಯಬೀಡು ಬಲ್ಲಾಳರ ಆಳ್ವಿಕೆಯಲ್ಲಿ ಪ್ರಜಾವರ್ಗದ ನೈತಿಕ ಬಲ ವೃದ್ದಿಗೆ ಉನ್ನತಿಯ ದಾರಿಗೆ ದೀಪವಾಗಿ ಕಂಡಿದ್ದು
ಬಂಗಾಡಿ ದೈವಗಳು. ಕಳಿಯ ಗ್ರಾಮದ ಬದಿನಡೆಯಲ್ಲಿ ಹಾಗೂ ಮಂಜಲಡ್ಕದಲ್ಲಿ ಪರಿವಾರ ದೈವಗಳ ಆರಾಧನೆ ವೈಭವದಿಂದ ನಡೆಯುತ್ತಿತ್ತು.
ಕಾಲಕ್ರಮೇಣ ಸುಮಾರು 90 ವರ್ಷಗಳಿಂದ ಈಚೀಗೆ
ಆರಾಧನೆಯ ಸೊಬಗಿನಿಂದ ಅನುಗ್ರಹದ ಕೊರತೆಯಿಂದ ಕಾಲಗರ್ಭದಲ್ಲಿ ಅಡಗಿ ಹೋಗಿತ್ತು.
ಪ್ರಧಾನವಾಗಿ ಕಳಿಯಗ್ರಾಮ ಜತೆಗೆ ನ್ಯಾಯತರ್ಪು, ಓಡಿಲ್ನಾಳ, ಕೊಯ್ಯೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಒಳಪಟ್ಟ ಆರಾಧನ ಕೇಂದ್ರವಾಗಿದ್ದು,
ಕಳೆದ ಎರಡು ವರ್ಷಗಳ ಹಿಂದೆ ಕಳಿಯಬೀಡು ಮನೆತನದ ನೇತೃತ್ವದಲ್ಲಿ ಗ್ರಾಮಸ್ಥರ ಸಹಕಾರದಿಂದ ಪ್ರಶ್ನಾ ಚಿಂತನೆ ನಡೆಸಿ, ದೈವಸ್ಥಾನಗಳ ಪುನರ್ ನಿರ್ಮಾಣದ ಕಾರ್ಯಗಳಿಗೆ ಮುನ್ನುಡಿ ಬರೆಯಲಾಯಿತು.

ಎರಡು ಕಡೆಗಳಲ್ಲಿ ಇರುವ ದೈವಸ್ಥಾನಗಳ ಅಭಿವೃದ್ಧಿಗೆ ಜೀರ್ಣೋದ್ಧಾರ ಸಮಿತಿ ರಚಿಸಿ, ಸುಮಾರು ಎಂಬತ್ತರಿಂದ ತೊಂಬತ್ತು ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರ ಹಾಗೂ ಬ್ರಹ್ಮ ಕಲಶ ಕಾರ್ಯಗಳು ನಡೆಯಲಿದೆ. ಗ್ರಾಮಸ್ಥರ, ದಾನಿಗಳ ಸಹಕಾರದಿಂದ ಅಭಿವೃದ್ಧಿ ಕೆಲಸಗಳು ಆಗಬೇಕಾಗಿದೆ. ಸರ್ವರ ಸಹಕಾರದ ಜತೆಗೆ
ಡಿಸೆಂಬರ್ 21 ರಿಂದ ಬ್ರಹ್ಮ ಕಲಶಾಭಿಷೇಕ ಹಾಗೂ ದೈವಗಳ ನರ್ತನ ಸೇವೆ ನಡೆಯಲಿದೆ.

error: Content is protected !!