ಬೆಳ್ತಂಗಡಿ:ಒಬ್ಬ ವ್ಯಕ್ತಿಯ ಪ್ರಶಂಸೆಯನ್ನು ಎಷ್ಟು ಮಾಡಿದರೂ ಕಡಿಮೆಯೇ ಅನ್ನುವ ಹಾಗೆ ಬಹಳಷ್ಟೂ ಕಥೆಗಳನ್ನು ಕಟ್ಟಿಕೊಂಡಿರುವ ವ್ಯಕ್ತಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಪಡಂಗಡಿ ಭೋಜರಾಜ ಹೆಗ್ಡೆಯವರಾಗಿದ್ದಾರೆ.ಎಂದು ಮೂಡಬಿದ್ರೆ ಜೈನಮಠದ ಭಾರತ ಭೂಷಣ ಜಗದ್ಗುರು ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ನುಡಿದರು . ಅವರು ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಸಾರ್ವಜನಿಕ ನುಡಿ ನಮನ ಸಮಿತಿ ಆಯೋಜಿಸಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಪಡಂಗಡಿ ಭೋಜರಾಜ ಹೆಗ್ಡೆ ನುಡಿ ನಮನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಒಬ್ಬ ಮನುಷ್ಯ ತನ್ನ ವರ್ತನೆಯಲ್ಲಿ ಸಂಸ್ಕಾರಗಳಿಗೆ ಒಳಪಟ್ಟು ಆ ವ್ಯಕ್ತಿ ತನ್ನ ಚಿಂತನೆಯಲ್ಲಿ ವೈರಾಗ್ಯವನ್ನು ಕಂಡಾಗ ಅದು ನಿಜವಾದ ಸತ್ಯವನ್ನು ಹುಡುಕಾಡುತ್ತ ಶಾಂತಿ ಪೂರ್ವಕ ಮರಣವಾದರೆ ಅದರಲ್ಲಿ ಮುಕ್ತಿ ದೊರೆಯುತ್ತದೆ. ಸ್ವಾತಂತ್ರ್ಯದ ನಿಜವಾದ ಅರ್ಥವೇ ನಮಗೆ ಗೊತ್ತಿಲ್ಲ ನಾವೆಲ್ಲರೂ ಗೊಂದಲದಲ್ಲಿದ್ದೇವೆ.ನಮ್ಮ ದೇಶದಲ್ಲಿ ನಮ್ಮನ್ನೇ ಆಳಿ ನಮ್ಮೆಲ್ಲರನ್ನೂ ಗುಲಾಮರಂತೆ ನೋಡಿದಂತಹ ವ್ಯಕ್ತಿಗಳ ವಿರುದ್ದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದವರು ಭೋಜರಾಜ ಹೆಗ್ಡೆಯವರು. ಒಬ್ಬ ವ್ಯಕ್ತಿ ತನ್ನ ಜೀವನದ ಖಾಸಗಿ ಬದುಕನ್ನು ಸಮಾಜಕ್ಕಾಗಿ ಒತ್ತೆಯಿಟ್ಟು ಸುಂದರ ನಾಡಿನ ನಿರ್ಮಾಣಕ್ಕಾಗಿ ಒಂದು ಸ್ಥಾನವನ್ನು ಭದ್ರ ಪಡಿಸುತ್ತಾನೆ.ಅದೇ ರೀತಿ ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಅಥವಾ ಸಾಮಾಜಿಕ ಕಳಕಳಿ ಇರುವಂತಹ ವ್ಯಕ್ತಿ ತಮ್ಮ ಬದುಕಿನ ಜವಾಬ್ದಾರಿ ಬೇರೆ ಬೇರೆ ಇದ್ದರೂ.ಸಮಾಜದಲ್ಲಿ ಆದರ್ಶವಾಗಿ ಬದುಕಿದವರಲ್ಲಿ ಭೋಜರಾಜ ಹೆಗ್ಡೆ ಒಬ್ಬರು ಎಂದು ಹೇಳಲು ಅಚ್ಚರಿಯಾಗುತ್ತಿದೆ. ಒಳ್ಳೆಯ ವ್ಯಕ್ತಿತ್ವದ ಅವರು ಎಲ್ಲಾ ಜನಾಂಗದ ಮಕ್ಕಳೊಂದಿಗೆ ಸಮಾಜದವರೊಂದಿಗೆ ತೋರಿಸುತ್ತಿದ್ದ ಪ್ರೀತಿ, ಭಾಂದವ್ಯ, ವಿಶ್ವಾಸ ಅತ್ಯಂತ ಅಪೂರ್ವ .ಎಲ್ಲ ಧರ್ಮದವರೊಂದಿಗೆ ತುಂಬಾ ಸಲುಗೆಯಿಂದ ಇದ್ದವರು ನಗುಮೊಗದ ಮಾತು ತುಂಬಾ ಸರಳವಾಗಿ ಬದುಕಿದಂತಹ ಆದರ್ಶ ವ್ಯಕ್ತಿಯಾಗಿದ್ದಾರೆ ಅವರು ಮರಣವನ್ನು ಗೆದ್ದ ಶ್ರೇಷ್ಠ ಆತ್ಮ , ನಾವು ನಮಗಾಗಿ ಬದುಕುವುದು ಬೇಡ ಸಮಾಜಕ್ಕಾಗಿ ಬದುಕೋಣ ಜಗತ್ತಿನ ಎಲ್ಲ ನೋವು ಮತ್ತು ಆಕ್ರಂದನ, ಭಾವನೆಗಳಿಗೆ ಸ್ಪಂದಿಸುತ್ತ ಬದುಕೋಣ ಅಂತವರ ಬದುಕು ನಿಜವಾದ ಬದುಕಾಗಿರುತ್ತದೆ .ಅಂತಹ ಬದುಕನ್ನು ಕಂಡವರು ಭೋಜರಾಜ ಹೆಗ್ಡೆಯವರು ಎಂದರು.
ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲ ಅವರು ನುಡಿ ನಮನ ಸಲ್ಲಿಸಿ
ದೊಡ್ಡವರಲ್ಲಿ ದೊಡ್ಡವರಂತೆ ಮಕ್ಕಳಲ್ಲಿ ಮಕ್ಕಳಂತೆ ಇರುವ ಗುಣ ಭೋಜರಾಜ ಹೆಗ್ಡೆ ಯವರಲ್ಲಿ ಇತ್ತು. ಅವರ ಶಿಸ್ತು ಬದ್ಧ ವ್ಯಕ್ತಿತ್ವದಿಂದ ಮಹಾ ಮಸ್ತಕಾಭಿಷೇಕ ಸಂದರ್ಭಗಳಲ್ಲಿ ಮುನಿ ಸೇವಾ ಸಮಿತಿ ಅಂದ್ದ ಕೂಡಲೇ ಎಲ್ಲರೂ ಇವರ ಹೆಸರನ್ನೇ ಉಲ್ಲೇಖಿಸುತಿದ್ದರು. ಪ್ರತೀ ವರುಷ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭಗಳಲ್ಲಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ನಿಜವಾದ ಸ್ವಾತಂತ್ರ್ಯ ದಿನಾಚರಣೆಯ ಸಂದೇಶವನ್ನು ತಿಳಿಸುವ ಮಹತ್ವದ ಕಾರ್ಯವನ್ನು ಮಾಡುತಿದ್ದರು. ಈಗಿನ ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರು ಯಾರು ಎಂಬುವುದನ್ನು ಕಣ್ಣಾರೆ ಕಾಣಲು ಆಸಾದ್ಯ ಅದರೆ ನಾವು ಕಣ್ಣಾರೆ ನೋಡಿದ್ದೇವೆ ಅದು ನಮ್ಮ ಯೋಗ.ಸೌಮ್ಯ ಸ್ವಭಾವದ ಸರಳ ಜೀವನವನ್ನು ನಡೆಸಿದ ಇವರ ಆದರ್ಶಗಳನ್ನು ಎಲ್ಲರೂ ತಮ್ಮ ಜೀವನದಲ್ಲಿಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಎಂದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ಮಾಜಿ ಶಾಸಕ ವಸಂತ ಬಂಗೇರ ಹಾಗೂ ವಿದ್ವಾಂಸ ಭರತ್ ಬಜಗೋಳಿ ನುಡಿ ನಮನ ಸಲ್ಲಿಸಿದರು. ಶಾಂತಿರಾಜ್ ಜೈನ್ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಸುರೇಂದ್ರ ಹೆಗ್ಗಡೆ ಅವರ ಸಂದೇಶವಾಚನ ಮಾಡಿದರು.ವಕೀಲ ಶಶಿಕಿರಣ್ ಜೈನ್ ಸ್ವಾಗತಿಸಿದರು. ಶೃತಿ ಜೈನ್ ಕಾರ್ಯಕ್ರಮ ನಿರೂಪಿಸಿ ಸೋಮಶೇಖರ್ ಧನ್ಯವಾದವಿತ್ತರು. ಕೊನೆಯಲ್ಲಿ ಗಣ್ಯರು ಭೋಜರಾಜ ಹೆಗ್ಡೆಯವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಗೈದು ಗೌರವ ಸಲ್ಲಿಸಿದರು.