ಶಾಲಾ ಮಕ್ಕಳಿಗೆ ಯುವ ಬ್ರಿಗೇಡ್ ವತಿಯಿಂದ ಟ್ಯಾಬ್ ವಿತರಣೆ.

 

 

ಬೆಳ್ತಂಗಡಿ:  ದಕ್ಷಿಣ ಕನ್ನಡ  ಯುವ ಬ್ರಿಗೇಡ್  ವತಿಯಿಂದ ಸರ್ಕಾರಿ ಪ್ರೌಢಶಾಲೆ ಬೆಳ್ತಂಗಡಿ ಶಾಲಾ ಮಕ್ಕಳಿಗೆ ಟ್ಯಾಬ್ ನೀಡುವ ಮೂಲಕ ಕೈ ಹಿಡಿದು ನಡೆಸೆನ್ನನು ಎನ್ನುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಮಾತನಾಡಿ ಪಕ್ಷಿಗಳು ಗೂಡು ಕಟ್ಟುವಾಗ ಹೇಗೆ ಯೋಜನೆ ಮಾಡುತ್ತದೆಯೋ ಅದೇ ರೀತಿ ಮಕ್ಕಳು ಕೂಡ ಪ್ರತಿ ವಿಷಯವನ್ನು ಕಲಿಯುವಾಗ ಯೋಜನೆ ರೂಪಿಸಿಕೊಂಡು ಕಲಿಯಬೇಕು ಹಾಗೂ ಯೋಜನೆಯನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಳ್ಳಬೇಕು ಎಂದರು. ಶಾಲಾ ಮುಖ್ಯೋಪಾಧ್ಯಾಯ ರಾಜೇಂದ್ರ ಎಮ್ ಅವರು ಮಾತನಾಡಿ ಯುವ ಬ್ರಿಗೇಡ್ ನ ಈ ಯೋಜನೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದಾಗಿ ಭರವಸೆ ನೀಡಿದರು. ಮಂಗಳೂರು ಜಿಲ್ಲಾ ಸಂಚಾಲಕ ಮನೀಷ್ ಟ್ಯಾಬ್ ಬಗ್ಗೆ ಮಾಹಿತಿ ನೀಡಿದರು .ಮಂಗಳೂರು ವಿಭಾಗ ಸಂಚಾಲಕ ಅಣ್ಣಪ್ಪ ನಾಯ್ಕ ಪ್ರಾಸ್ಥಾವಿಕ ಮಾತನಾಡಿದರು.
ಈ ಸಂದರ್ಭದಲ್ಲಿ ಉಧ್ಯಮಿ ಶಶಿಧರ್ ಪೈ , ಶಾಲಾ‌ ಎಸ್ ಡಿ ಎಮ್ ಸಿ ಉಪಾಧ್ಯಕ್ಷ ರುಕ್ಮಯ್ಯ ಪೂಜಾರಿ , ವಿಸ್ತಾರಕರಾದ ತಿಲಕ್ ಶಿಶಿಲ್ ಮತ್ತು ಶಿಕ್ಷಕರಾದ ತಾರಾನಾಥ ಹಾಗೂ ಶಾಲಾ ಶಿಕ್ಷಕರು ಪಾಲಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.
ಆಶಾಲತ ಕಾರ್ಯಕ್ರಮ ನಿರೂಪಿಸಿದರು. ಪೂರ್ಣಿಮಾ ಭಟ್ ಸ್ವಾಗತಿಸಿ ಸೆಫಿಯಾ ಕೆ ವಂದಿಸಿದರು

error: Content is protected !!