ಗಾಂಧಿ ತತ್ವಗಳೆಂದರೆ ನಮ್ಮ ಹಿರಿಯರು ಅನುಸರಿಸಿದ ಜೀವನ ತತ್ವಗಳು: ಶ್ರೀಧರ ಭಿಡೆ. ಬೆಳ್ತಂಗಡಿ ಗಾಂಧಿ ವಿಚಾರ ವೇದಿಕೆ ಮಹಿಳಾ ಘಟಕದ “ಮನೆ ಸಂವಾದ” ಕಾರ್ಯಕ್ರಮ.

 

 

 

 

 

ಉಜಿರೆ:ಗಾಂಧಿ ತತ್ವಗಳೆಂದರೆ ನಮ್ಮ ಹಿರಿಯರು ಅನುಸರಿಸಿದ ಜೀವನ ತತ್ವಗಳೇ ಆಗಿವೆ. ಕೃಷಿಕರ ಪ್ರತೀ ದಿನದ ಬೆಳಗು ಪಶು ಪಕ್ಷಿಗಳ ಸೇವೆಯಿಂದಲೇ ಪ್ರಾರಂಭವಾಗುತ್ತದೆ.ಎಂದು ಗಾಂಧಿ ವಿಚಾರ ವೇದಿಕೆಯ ಮಾತೃ ಸಮಿತಿಯ ಅಧ್ಯಕ್ಷ ಶ್ರೀಧರ ಭಿಡೆ ಹೇಳಿದರು. ಅವರು ನ 22: ಗಾಂಧಿ ವಿಚಾರ ವೇದಿಕೆಯ ಬೆಳ್ತಂಗಡಿ ಘಟಕದ ಮಹಿಳಾ ವಿಭಾಗದ ವತಿಯಿಂದ ಮಾಚಾರ್ ವಿನುತಾ ರಜತ್ ಗೌಡ ಅವದ ಮನೆಯಲ್ಲಿ ನಡೆದ ‘ಮನೆ ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸೇವೆಯಿಂದ ಆತ್ಮವಿಶ್ವಾಸ ಬರುತ್ತದೆ. ಆತ್ಮವಿಶ್ವಾಸವಿದ್ದಾಗ ತನ್ನ ಮೇಲೂ ನಂಬಿಕೆ ಇರುತ್ತದೆ. ಇತರರನ್ನೂ ನಂಬಲು ಸಾಧ್ಯವಾಗುತ್ತದೆ. ಆಗ ನೆಮ್ಮದಿಯ ಜೀವನ ಸಿಗುತ್ತದೆ” ಎಂದರು.

 

 

ಘಟಕದ ಮಹಿಳಾ ವಿಭಾಗದ ವಿನುತಾ ರಜತ್ ಗೌಡ ಮಾತನಾಡಿ ಗ್ರಾಮ ಪಂಚಾಯಿತಿಯನ್ನು ಅವಲಂಬಿಸದೆ ಗ್ರಾಮಸ್ಥರೇ ರಸ್ತೆ ರಿಪೇರಿ ಮಾಡಿಕೊಂಡು ಸ್ವಾವಲಂಬನೆಯ ತತ್ವವನ್ನು ಅನುಷ್ಠಾನಕ್ಕೆ ತಂದದ್ದನ್ನು ನೆನಪಿಸಿಕೊಂಡರು.

ಸಂವಾದದ ಅಧ್ಯಕ್ಷತೆ ವಹಿಸಿದ್ದ ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾ ಆರ್. ಶೆಟ್ಟಿ ಅವರು,”ಗಾಂಧೀಜಿಯವರು ಭಾರತೀಯರನ್ನು ದಾಸ್ಯದಿಂದ ಮುಕ್ತರಾಗಿಸಲು ಹೋರಾಡಿದವರು. ಆ ಆದರ್ಶಗಳು ಅವಶ್ಯವಾಗಿವೆ” ಎಂದರು.

 

 

ಸಂವಾದದಲ್ಲಿ ಉಜಿರೆ ಗ್ರಾಮ ಪಂಚಾಯತ್ ಸದಸ್ಯ ಅನಿಲ್ ಡಿಸೋಜಾ, ಮಾಜಿ ಅಧ್ಯಕ್ಷ ಶ್ರೀಧರ ಪೂಜಾರಿ, ಗಾಂಧಿ ವಿಚಾರ ವೇದಿಕೆಯ ಮಾತೃ ಸಮಿತಿಯ ಪ್ರಧಾನ ಕಾರ್ಯದರ್ಶಿ ಅರವಿಂದ ಚೊಕ್ಕಾಡಿ, ಸಮನ್ವಯಕಾರ ಕಾಂಚೋಡು ಗೋಪಾಲಕೃಷ್ಣ, ಹಾಗೂ ಸ್ಥಳೀಯರು ಭಾಗವಹಿಸಿದ್ದರು. ವಿನುತಾ ರಜತ್ ಗೌಡ ಸ್ವಾಗತಿಸಿ, ಸುಧಾ ವಂದಿಸಿದರು.

error: Content is protected !!