ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷರಾಗಿ ಪ್ರಸಾದ್, ಕೆ. ಎಸ್, ಪ್ರಧಾನ ಕಾರ್ಯದರ್ಶಿ ಯಾಗಿ ಶೈಲೇಶ್ ಆರ್ ಠೋಸರ್ ಆಯ್ಕೆ.

 

 

                     ಪ್ರಸಾದ್ ಕೆ.ಎಸ್ 

 

 

                ಶೈಲೇಶ್ ಆರ್. ಠೋಸರ್.  

 

ಬೆಳ್ತಂಗಡಿ; ವಕೀಲರ ಸಂಘ (ರಿ) ಬೆಳ್ತಂಗಡಿ ಇದರ ವಾರ್ಷಿಕ ಮಹಾಸಭೆಯು ಅ. 29 ರಂದು ಬೆಳ್ತಂಗಡಿಯ ಮಂಜುನಾಥ ಸ್ವಾಮಿ ಸಭಾ ಭವನದಲ್ಲಿ ಅದ್ಯಕ್ಷರಾದ ಎಲೋಶಿಯಸ್ ಲೋಬೋರವರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರದಾನ ಕಾರ್ಯದರ್ಶಿ ಶ್ರೀಕೃಷ್ಣ ಶೆಣೈ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಹರಿಪ್ರಕಾಶ್ ಪಿ. ಎನ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಚುನಾವಣಾಧಿಕಾರಿಯಾಗಿ ಎಂ. ಬಿ ಸಂಪಿಗೆತ್ತಾಯ ಕಾರ್ಯ ನಿರ್ವಹಿಸಿದರು. 2021-2023 ನೇ ಸಾಲಿನ ನೂತನ ಆಡಳಿತ ಮಂಡಳಿಗೆ ಅವಿರೋಧವಾಗಿ ಪದಾಧಿಕಾರಿಗಳ ಆಯ್ಕೆ ನಡೆಯಿತು.

ನೂತನ ಅದ್ಯಕ್ಷರಾಗಿ ಹಿರಿಯ ನ್ಯಾಯವಾದಿ ಪ್ರಸಾದ್, ಕೆ. ಎಸ್, ಪ್ರಧಾನ ಕಾರ್ಯದರ್ಶಿ ಯಾಗಿ ಯುವ ನ್ಯಾಯವಾದಿ ಶೈಲೇಶ್ ಆರ್ ಠೋಸರ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಗಣೇಶ ಗೌಡ, ಕೋಶಾಧಿಕಾರಿಯಾಗಿ ಹರಿಪ್ರಕಾಶ್, ಪಿ.ಎನ್, ಜತೆ ಕಾರ್ಯದರ್ಶಿ ಯಾಗಿ ಪ್ರಿಯಾಂಕ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಿವ ಕುಮಾರ್, ಎಸ್. ಎಂ, ಅಶೋಕ ಕರಿಯನೆಲ, ಮನೋಹರ ಕುಮಾರ್, ಇಳಂತಿಲ, ಶ್ರೀನಿವಾಸ ಗೌಡ, ಶಿವಯ್ಯ ಎಸ್.ಎಲ್ ಮತ್ತು ಸುಭಾಷಿನಿ, ಆರ್ ಆಯ್ಕೆಯಾದರು. ಸಾಂಸ್ಕೃತಿಕ ಕಾರ್ಯದರ್ಶಿ ಯಾಗಿ ಮುಮ್ತಾಜ್ ಬೇಗಂ, ಕ್ರೀಡಾ ಕಾರ್ಯದರ್ಶಿ ಯಾಗಿ ಧನಂಜಯ ಕುಮಾರ್, ಡಿ ಆಯ್ಕೆಯಾದರು. ಹಿರಿಯ ಸಮಿತಿ ಚೇರ್ ಮೆನ್ ಆಗಿ ಸುಬ್ರಹ್ಮಣ್ಯ ಕುಮಾರ್, ಅಗರ್ತ, ಸಮಿತಿ ಸದಸ್ಯರುಗಳಾಗಿ ಸೇವಿಯರ್ ಪಾಲೇಲಿ ಮತ್ತು ವೈ. ಶಾಮ ಭಟ್ ರವರುಗಳನ್ನು ಆಯ್ಕೆ ಮಾಡಲಾಯಿತು.

error: Content is protected !!