ವೇಣೂರು ಕಾಲು ಜಾರಿ ನದಿಯಲ್ಲಿ ಮುಳುಗಿದ ವ್ಯಕ್ತಿಯ ಶವ ಪತ್ತೆ.

 

 

ಬೆಳ್ತಂಗಡಿ: ಅಕಸ್ಮಿಕವಾಗಿ ಕಾಲು ಜಾರಿ ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಸ್ಥಳೀಯ ನಿವಾಸಿ ಚಂದ್ರಶೇಖರ (21) ಎಂದು ಗುರುತಿಸಲಾಗಿದೆ.
.ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ವೇಣೂರು ಸಮೀಪ ಶಾಮಿಯಾನ ಅಂಗಡಿಯಲ್ಲಿ ಕೆಲಸ ಮಾಡುತಿದ್ದ ಚಂದ್ರ ಶೇಖರ ಎಂಬವರು ಹ  ಪಲ್ಗುಣಿ ನದಿಯಲ್ಲಿ ಶಾಮಿಯಾನದ ಮ್ಯಾಟ್ ತೊಳೆಯುತ್ತಿರುವ ಸಂದರ್ಭ ಅಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಮುಳುಗಿದಾಗ   ಸ್ಥಳೀಯರು ರಕ್ಷಣೆ ಮಾಡಲು ಪ್ರಯತ್ನ ಪಟ್ಟರೂ ಸಾಧ್ಯವಾಗದೇ ಇದ್ದಾಗ ಅಗ್ನಿ ಶಾಮಕ ದಳ ಮತ್ತು ಬಂಟ್ವಾಳದ ಮುಳುಗು ತಜ್ಞರಿಗೆ ಮಾಹಿತಿ ನೀಡಿ ಅವರು ಬಂದು ನದಿಯಲ್ಲಿ ಹುಡುಕಾಡಿ ಸಂಜೆ ಮೃತ ದೇಹವನ್ನು ಮೇಲಕ್ಕೆತ್ತಿದ್ದಾರೆ. ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!