ಕಡಬ ಶಾಲೆಯಲ್ಲಿ ಗ್ಯಾಸ್  ಸೋರಿಕೆಯಿಂದ   ಬೆಂಕಿ ಸಿಬ್ಬಂದಿ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ.

 

:

 

 

ಕಡಬ:  ಅಡುಗೆ ಮಾಡುತ್ತಿರುವ  ವೇಳೆ ಗ್ಯಾಸ್ ಸೋರಿಕೆಯಿಂದ ಬೆಂಕಿ ಹತ್ತಿಕೊಂಡ ಘಟನೆ ಕಡಬ ಸಮೀಪದ ಶಾಲೆಯೊಂದರಲ್ಲಿ ನಡೆದಿದೆ.  ಅದರೆ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ದೊಡ್ಡ ಮಟ್ಟದ ಅನಾಹುತ ತಪ್ಪಿದೆ.

ಕಡಬ ತಾಲೂಕಿನ ನೂಜಿಬಾಳ್ತಿಲ ಸರ್ಕಾರಿ ಶಾಲೆಯಲ್ಲಿ ಘಟನೆ ನಡೆದಿದ್ದು, ಅಡುಗೆಗೆ ತಯಾರಿ ಮಾಡುತ್ತಿದ್ದ ಸಮಯದಲ್ಲಿ ಏಕಾಏಕಿ ಸಿಲಿಂಡರ್​ ಪೈಪ್​ನಲ್ಲಿ ಗ್ಯಾಸ್​ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ, ಸಿಬ್ಬಂದಿ ಹಾಗೂ ಸ್ಥಳದಲ್ಲಿದ್ದವರ ಸಮಯ ಪ್ರಜ್ಞೆಯಿಂದಾಗಿ ಭಾರೀ ಅನಾಹುತ ತಪ್ಪಿದೆ.ಕೂಡಲೇ ಸಿಬ್ಬಂದಿ ಬೆಂಕಿ ತಗುಲಿದ ಸಿಲಿಂಡರನ್ನು ಶಾಲಾ ಕಟ್ಟಡದಿಂದ ಹೊರ ತಂದು ಬೆಂಕಿ ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!