ರಾಮಾಯಣ, ಮಹಾಭಾರತದ ಕಥೆಯ ಸೂಕ್ಷ್ಮತೆ ಅರಿವಿನಿಂದ ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳಲು ಸಾಧ್ಯ: ಧರ್ಮಾಧಿಕಾರಿ‌ ಡಾ. ವೀರೇಂದ್ರ ಹೆಗ್ಗಡೆ

 

 

 

ಧರ್ಮಸ್ಥಳ: ಶಾಸ್ತ್ರೀಯ ಸಂಗೀತ ಮತ್ತು ಭಕ್ತಿಗೀತೆಗಳು ಸಾವಿರಾರು ವರ್ಷಗಳಿಂದ ಶಾಶ್ವತವಾಗಿ ಉಳಿದಿವೆ. ನಮ್ಮ ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳಲು ರಾಮಾಯಣ, ಮಹಾಭಾರತದ ಕಥೆಯ ಸೂಕ್ಷ್ಮತೆಯನ್ನು ನಾವು ಅರ್ಥಮಾಡಿಕೊಳ್ಳುವುದು ಅಗತ್ಯ. ಭಜನಾ ಮಂಡಳಿಗಳನ್ನು ದೇವಸ್ಥಾನವಾಗಿಸದೆ ಭಜನಾ ಮಂಡಳಿಯಾಗಿಯೇ ಉಳಿಸಿಕೊಳ್ಳಬೇಕು. ಭಜನಾ ಮಂಡಳಿಗಳಲ್ಲಿ ರಾಗ, ತಾಳ ಪಕ್ವವಾಗಿರಬೇಕು ಎಂದು ಧರ್ಮಸ್ಥಳದ‌ ಧರ್ಮಾಧಿಕಾರಿ‌ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ನುಡಿದರು.

 

 

ಅವರು ಧರ್ಮಸ್ಥಳದಲ್ಲಿ ಆಯೋಜಿಸಿರುವ ಭಜನಾ ತರಬೇತಿ ಕಮ್ಮಟದ ಶಿಬಿರಾರ್ಥಿಗಳಿಗೆ ಸಂದೇಶವನ್ನು ನೀಡಿದರು.
ಉತ್ತರ ಕರ್ನಾಟಕದಲ್ಲಿ ಭಜನೆ ಆಕರ್ಷಣೀಯವಾಗಿ ನಡೆಯುತ್ತದೆ. ಭಜನೆಯಲ್ಲಿ ಶಿಸ್ತು ಇದ್ದರೆ ಗ್ರಾಮದಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ. ಸಂಘಟನೆಯಿಂದ ಭಜನಾ ಮಂಡಳಿಗಳಲ್ಲಿ ಶಿಸ್ತು ಕಾಪಾಡಲು ಸಾಧ್ಯವಾಗುತ್ತದೆ.

 

 

ಭಗವಂತನನ್ನು ಒಲಿಸಿಕೊಳ್ಳಲು ಭಜನೆ ಪೂರಕ ಮಂತ್ರವಾಗಿದೆ. ನೃತ್ಯ ಭಜನೆಯಲ್ಲಿ ಸಂಗೀತ ಭಜನೆಗೆ ಪ್ರಾಧಾನ್ಯತೆ ನೀಡಬೇಕು. ಭಜನಾ ಸಂಗೀತಕ್ಕೆ ಆಕಾರವನ್ನು ಕೊಟ್ಟ ದಾಸ ಶ್ರೇಷ್ಠರು ಧರ್ಮ ಪ್ರಚಾರವನ್ನು ಸುಲಭವಾಗಿ ಜನಸಾಮಾನ್ಯರಿಗೆ ಮನದಟ್ಟು ಮಾಡಿದರು ಎಂದರು.
ಶ್ಲೋಕಗಳನ್ನು ನೆನಪಿಡುವುದು ಕಷ್ಟ, ಆದರೆ ಭಜನೆಗಳನ್ನು ಸುಲಭವಾಗಿ ನೆನಪು ಇಟ್ಟುಕೊಳ್ಳಬಹುದು. ಭಜನೆಯ ಸತತ ಅಭ್ಯಾಸದಿಂದ ಸಮಾನತೆ ಒಗ್ಗಟ್ಟು, ಏಕಾಗ್ರತೆ ಕಾಪಾಡಬಹುದು ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಕ ನಿರ್ದೆಶಕ ಡಾ. ಎಲ್. ಎಚ್. ಮಂಜುನಾಥ್ ಮತ್ತು ಶಾಂತಿವನಟ್ರಸ್ಟ್ ಕಾರ್ಯದರ್ಶಿ ಸೀತಾರಾಮ ತೋಳ್ಪಡಿತ್ತಾಯ ಅವರು ಡಾ.ಹೆಗ್ಗಡೆಯವರನ್ನು ಗೌರವಿಸಿದರು. ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ನಿರೂಪಿಸಿ, ಮಮತಾ ರಾವ್ ವಂದಿಸಿದರು.

error: Content is protected !!