ಬೆಳ್ತಂಗಡಿ: ಪಂಡಿತ್ ದೀನದಯಾಳ ಉಪಾಧ್ಯಾಯ 105ನೇ ಜನ್ಮದಿನಾಚರಣೆ

 

ಬೆಳ್ತಂಗಡಿ: ಬೆಳ್ತಂಗಡಿ ಬಿಜೆಪಿ ಮಂಡಲ ಹಾಗೂ ಮಹಿಳಾ ಮೋರ್ಚಾ ವತಿಯಿಂದ ಸಾಮಾಜಿಕ ಚಿಂತಕ, ಅರ್ಥಶಾಸ್ತ್ರಜ್ಞ ಹಾಗೂ ಭಾರತೀಯ ಜನತಾ ಪಕ್ಷದ ಆದರ್ಶ ಮತ್ತು ತತ್ವಗಳನ್ನು ಜೊತೆಗೂಡಿಸಿಕೊಂಡು ಭಾರತೀಯ ಜನಸಂಘವನ್ನು ರೂಪಿಸಿದ ಪಂಡಿತ್ ದೀನದಯಾಳ ಉಪಾಧ್ಯಾಯರವರ 105ನೇ ವರ್ಷದ ಜನ್ಮದಿನಾಚರಣೆಯನ್ನು ಸೆ.25ರಂದು ಬಿಜೆಪಿ ಮಂಡಲ ಕಛೇರಿಯಲ್ಲಿ ಆಚರಿಸಲಾಯಿತು.
ಶಾಸಕ ಹರೀಶ್ ಪೂಂಜ ಅವರು ಪಂಡಿತ್ ದೀನ ದಯಾಳ್ ಅವರ ಭಾವಚಿತ್ರ ಬಳಿ ದೀಪ ಬೆಳಗಿಸಿ, ಪುಷ್ಪಾರ್ಚನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಕೆ.ಪ್ರತಾಪ ಸಿಂಹ ನಾಯಕ್, ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಗಣೇಶ್ ನಾವೂರು , ಬಾಲಕೃಷ್ಣ ಶೆಟ್ಟಿ ಸವಣಾಲು, ಜಯಂತ್ ಗೌಡ, ಬೆಳ್ತಂಗಡಿ ಮಹಿಳಾ ಮೋರ್ಚಾದ ಅಧ್ಯಕ್ಷೆ ವಿಜಯ ಆರಂಬೋಡಿ .ಜಿಲ್ಲಾ ಕಾರ್ಯದರ್ಶಿ ಮಂದಾರತಿ ಶೆಟ್ಟಿ, ತಾಲೂಕಿನ ಪ್ರಧಾನ ಕಾರ್ಯದರ್ಶಿ ಸವಿತಾ ಶೆಟ್ಟಿ, ಪಟ್ಟಣ ಪಂಚಾಯತ್ ಅಧ್ಯಕ್ಷೆ ರಜನಿ ಕುಡ್ವ, ಮಹಿಳಾ ಮೋರ್ಚಾದ ಸದಸ್ಯರಾದ ಪುಷ್ಪಾವತಿ ಆರ್ ಶೆಟ್ಟಿ, ಅಮಿತಾ ಕುಶಾಲಪ್ಪ ಗೌಡ, ನೇತ್ರಾ ಶಶಿಕುಮಾರ್, ಸುಮಲತ ಶೆಟ್ಟಿ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

error: Content is protected !!