ಲಾಯಿಲ: ಪಡ್ಲಾಡಿ ಅಂಬೇಡ್ಕರ್ ಭವನ ಪರಿಸರ ಸ್ವಚ್ಚತಾ ಕಾರ್ಯ:

 

 

 

ಬೆಳ್ತಂಗಡಿ: ಲಾಯಿಲ ಪಂಚಾಯತ್ ವ್ಯಾಪ್ತಿಯ ಪಡ್ಲಾಡಿ ಅಂಬೇಡ್ಕರ್ ಭವನ  ಸುತ್ತಮುತ್ತ ಶ್ರಮದಾನದ ಮೂಲಕ ಸ್ವಚ್ಚತಾ ಕಾರ್ಯ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆ ನೇತೃತ್ವದಲ್ಲಿ ನಡೆಯಿತು.

 

 

ಈ ಸಂದರ್ಭದಲ್ಲಿ ಮಾತನಾಡಿದ ಅವರು‌ ಲಾಯಿಲ ಗ್ರಾಮದ ಒಂದನೇ ವಾರ್ಡಿನ ಎಲ್ಲರ ಸಹಕಾರದಿಂದ ವಾರ್ಡಿನ ಹಲವು ರಸ್ತೆಗಳ ಬದಿಯಲ್ಲಿ ಬೆಳೆದ ಹುಲ್ಲು ಹಾಗೂ ಪರಿಸರದ ಸ್ವಚ್ಛತಾ ಕೆಲಸಗಳು ಶ್ರಮದಾನದ ಮೂಲಕ ಯಶಸ್ವಿಯಾಗಿ ನಡೆಯುತ್ತಿರುವುದು ಸಂತೋಷವನ್ನುಂಟು ಮಾಡುತಿದೆ

 

 

ಇದಕ್ಕೆ ಈ ವಾರ್ಡಿನ ಜನರು ನೀಡುತ್ತಿರುವ ಸಹಕಾರವೇ ಕಾರಣ. ಪಂಚಾಯಿತಿ ವತಿಯಿಂದಲೇ ಎಲ್ಲ ಕೆಲಸ ಆಗಬೇಕು ಎಂಬ ಯೋಚನೆಯಲ್ಲಿ ಇರುವ ಜನ ಸಾಮಾನ್ಯರಿಗೆ ಲಾಯಿಲ ಪಂಚಾಯತ್ ಒಂದನೇ ವಾರ್ಡಿನ ಜನರ ಕೆಲಸ ಪ್ರೇರಣೆಯಾಗಲಿ. ಇದೇ ರೀತಿ ಎಲ್ಲ ಪಂಚಾಯಿತಿಗಳಲ್ಲಿ ಸ್ವ- ಇಚ್ಛೆಯಿಂದ ಜನರು ಶ್ರಮದಾನದ ಮೂಲಕ ಸ್ವಚ್ಚತಾ ಕೆಲಸಗಳನ್ನು ಮಾಡಿ ಪಂಚಾಯಿತಿಯೊಂದಿಗೆ ಸಹಕರಿಸಬೇಕು ಎಂದರು. ಶ್ರಮದಾನದಲ್ಲಿ ಭಾಗವಹಿಸಿದವರಿಗೆ ದಾನಿಗಳಿಂದ ಊಟ ಹಾಗೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

ಸುಮಾರು 40 ಮಂದಿ ಸ್ಥಳೀಯ ನಿವಾಸಿಗಳು ಶ್ರಮದಾನದಲ್ಲಿ ಭಾಗವಹಿಸಿದ್ದರು.

error: Content is protected !!