ಬೆಳ್ತಂಗಡಿ ಅಂಬೇಡ್ಕರ್ ಭವನ ನೀಲ ನಕಾಶೆ ನಿರ್ಮಾಣ ಪ್ರಗತಿಯಲ್ಲಿ: ಸುಸಜ್ಜಿತ ಭವನದ ಜತೆ ಅಂಬೇಡ್ಕರ್ ಜೀವನ ಪರ ಗ್ರಂಥಾಲಯ ನಿರ್ಮಾಣದ ಚಿಂತನೆ: ಶಾಸಕ ಹರೀಶ್ ಪೂಂಜ ಹೇಳಿಕೆ: ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲ ಎಸ್.ಸಿ. ಮೋರ್ಚಾ ವಿಶೇಷ ಕಾರ್ಯಕಾರಿಣಿ ಸಭೆ.

 

 

ಬೆಳ್ತಂಗಡಿ: ಬಿಜೆಪಿ ಬೆಳ್ತಂಗಡಿ ಮಂಡಲ ಎಸ್.ಸಿ. ಮೋರ್ಚಾ ವತಿಯಿಂದ ವಿಶೇಷ ಕಾರ್ಯಕಾರಿಣಿ ಸಭೆ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಸೋಮವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ, ಸಂವಿಧಾನ ಶಿಲ್ಪಿ
ಡಾ.ಬಿ.ಆರ್.ಅಂಬೇಡ್ಕರ್ ಅವರ ಕಲ್ಪನೆಯಂತೆ ಭಾರತೀಯ ವಿಚಾರಧಾರೆ ಜನಮಾನಸದಲ್ಲಿ ಉದ್ದೀಪನಗೊಳಿಸುವ ಕೆಲಸವನ್ನು ಬಿಜೆಪಿ ಒಂದು ರಾಜಕೀಯ ಪಕ್ಷವಾಗಿ ನೆರವೇರಿಸುತ್ತಿದೆ. ಬಿಜೆಪಿ ಪಕ್ಷ ಸಂವಿಧಾನ ರಚನೆಯಂತೆ ಅಂಬೇಡ್ಕರ್ ಅವರ ಕಲ್ಪನೆಯಂತೆ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷ ಮತ ಬೇಟೆಗೆ ಬಿದ್ದು ಜಾತ್ಯಾತೀತ ಎಂಬ ರಾಜಕೀಯ ಮಾಡಿದ್ದೇ ಹೊರತು ಕಟ್ಟ ಕಡೆಯ ಎಸ್.ಸಿ. ಸಮುದಾಯವನ್ನು ಮೇಲೆತ್ತುವ ಕೆಲಸ ಮಾಡಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಅಂಬೇಡ್ಕರ್ ಅವರ ಎಲ್ಲ ಸ್ಥಳಗಳನ್ನು ಪುನರುಜ್ಜೀವನ ಗೊಳಿಸಿರುವ ಕೆಲಸ ಮಾಡುತ್ತಿದ್ದಾರೆ. ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ 64 ಗ್ರಾ.ಪಂ. ಎಸ್.ಸಿ. ಮೀಸಲಾತಿ ಸದಸ್ಯರಲ್ಲಿ 54 ಸದಸ್ಯರು ಬಿಜೆಪಿಯಲ್ಲಿ ಗೆಲುವು ಕಂಡಿದ್ದಾರೆ. ಅನೇಕ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರಾಗಿದ್ದಾರೆ. ದಲಿತ ಕಾಲನಿ, ಸಮುದಾಯಕ್ಕೆ ವಿಶೇಷ ಅನುದಾನಗಳು ನನ್ನ ಅವಧಿಯಲ್ಲಿ ಬಂದಿದೆ. ಮುಂದಿನ ದಿನಗಳಲ್ಲಿ ದಲಿತ ಕಾಲನಿಗಳ ಅಭಿವೃದ್ಧಿ ನೆಲೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಮೂಲಕ ಸಮುದಾಯದ ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕಾಗಿ ಅನುದಾನ ತರಿಸುವುದಾಗಿ ಭರವಸೆ ನೀಡಿದರು.
ಕೃಷಿಗೆ ಪೂರಕ ಯೋಜನೆಗಳನ್ನು ಅನುದಾನಗಳನ್ನು ತರುವ ಕೆಲಸವಾಗಲಿದೆ. ಸಶಕ್ತವಾದ ಸಮಾಜವನ್ನ ರೂಪಿಸುವಲ್ಲಿ ಮೂಲಸೌಕರ್ಯ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದಂತೆ ಎಲ್ಲ ಸೌಲಭ್ಯ ಒದಗಿಸಲಾಗುವುದು ಎಂದರು.
ಈಗಾಗಲೆ ಬೆಳ್ತಂಗಡಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅನುದಾನ ಬಂದಿದ್ದು, ಅದರ ನೀಲ ನಕಾಶೆಯ ತಯಾರಿಯಲ್ಲಿದೆ. ಸುಸಜ್ಜಿತವಾದ ಭವನದ ಜತೆಗೆ ಅಂಬೇಡ್ಕರ್ ಜೀವನ ಪರವಾದ ಲೈಬ್ರೇರಿ ಬೇಕೆಂದು ಚಿಂತಿಸಿದ್ದೇನೆ ಎಂದರು.
ಬಿಜೆಪಿ ಬೆಳ್ತಂಗಡಿ ಮಂಡಲ ಎಸ್.ಸಿ. ಮೋರ್ಚಾದ ಅಧ್ಯಕ್ಷ ಗೋಪಾಲಕೃಷ್ಣ ಕುಕ್ಕಳ ಅಧ್ಯಕ್ಷತೆ ವಹಿಸಿದ್ದರು.
ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಭಾಗೀರಥಿ ಮುರಳ್ಯ, ರಾಜ್ಯ ಎಸ್ ಸಿ ಮೋರ್ಚಾದ ಕಾರ್ಯಕಾರಿಣಿ ಸದಸ್ಯ ದಿನೇಶ್ ಅಮ್ಟೂರ್, ಎಸ್ ಸಿ ಮೋರ್ಚಾ ಜಿಲ್ಲಾಧ್ಯಕ್ಷ ವಿನಯನೇತ್ರ ದಡ್ಡಲಕಾಡು, ಪ್ರ.ಕಾರ್ಯದರ್ಶಿ ಅಣ್ಣಿ ಎಲ್ರಿಮಾರು, ಉಪಾಧ್ಯಕ್ಷರಾದ ರಾಘವ ಕಲ್ಮಂಜ, ಸದಾಶಿವ ಕರಂಬಾರು, ಸದಸ್ಯರಾದ ಸಿ.ಕೆ. ಚಂದ್ರಕಲಾ, ಕೇಶವ ಕನ್ಯಾಡಿ, ಪ್ರಭಾರಿ ಸುರೇಂದ್ರ ನರಿಕೊಂಬು, ತಾಲೂಕು ಪ್ರಭಾರಿ ಕೊರಗಪ್ಪ ಗೌಡ, ಮಂಡಲ ಪ್ರ. ಕಾರ್ಯದರ್ಶಿ ಗಣೇಶ್ ಗೌಡ, ಉಪಾಧ್ಯಕ್ಷ ಸೀತಾರಾಮ ಬಿ.ಎಸ್., ಹಿಂದುಳಿದ ವರ್ಗ ಮೋರ್ಚಾದ ಅಧ್ಯಕ್ಷ ಪ್ರಭಾಕರ ಆಚಾರ್ಯ,
ಮಹಿಳಾ ಮೋರ್ಚಾ ಪ್ರ.‌ಕಾರ್ಯದರ್ಶಿ ಸವಿತಾ ಶೆಟ್ಟಿ ಲಾಯಿಲ, ಎಪಿಎಂಸಿ‌ ಸದಸ್ಯ ಈಶ್ವರ ಬೈರ, ತಾಲೂಕು ಎಸ್ ಸಿ ಮೋರ್ಚಾದ ಪ್ರ.ಕಾರ್ಯದರ್ಶಿಗಳಾದ ಕೃಷ್ಣಪ್ಪ ಗರ್ಡಾಡಿ, ವಸಂತಿ‌ ನೆರಿಯ ಮೊದಲಾದವರು ಇದ್ದರು.

error: Content is protected !!