ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್ ವತಿಯಿಂದ ಕೋವಿಡ್ ತುತ್ತಾದ ಸಂಘದ ಸದಸ್ಯರಿಗೆ ಆಹಾರದ ಕಿಟ್ ವಿತರಣೆ

 

 

 

ಬೆಳ್ತಂಗಡಿ : ಡಿ.ಕೆ.ಆರ್.ಡಿ.ಎಸ್ ವತಿಯಿಂದ ಬೆಳ್ತಂಗಡಿ ಧರ್ಮ ಪ್ರಾಂತ್ಯ ಧರ್ಮಾಧ್ಯಕ್ಷರಾದ ಲಾರೆನ್ಸ್ ಮುಕ್ಕುಯಿ ಇವರ ಮಾರ್ಗದರ್ಶನದಲ್ಲಿ  ಕಾರಿತಾಸ್ ಇಂಡಿಯಾ ಮತ್ತು ಸೈಂಟ್ ಕತ್ರಿನಾ ಚರ್ಚ್ ಜರ್ಮನಿ ಇವರ ಆರ್ಥಿಕ ನೆರವಿನೊಂದಿಗೆ ಬೆಳ್ತಂಗಡಿ ತಾಲೂಕಿನ ನಾವೂರು, ಮುಂಡಾಜೆ, ಇಂದಬೆಟ್ಟು, ಉಜಿರೆ, ನೆರಿಯ, ಚಾರ್ಮಾಡಿ, ಕಳೆಂಜ, ಪುದುವೆಟ್ಟು, ಧರ್ಮಸ್ಥಳ ಗ್ರಾಮ ಪಂಚಾಯತ್ ವ್ಯಾಪ್ತಿ ಮತ್ತು ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿತ ಸಂಘದ ಸದಸ್ಯರಿಗೆ ಆಹಾರದ ಕಿಟ್ ವಿತರಣಾ ಕಾರ್ಯಕ್ರಮವನ್ನು ದಿನಾಂಕ 24.8.21ರಂದು ಹಮ್ಮಿಕೊಳ್ಳಲಾಯಿತು.

ಕೋವಿಡ್ 2 ನೇ ಅಲೆ ಪ್ರತಿ ಮನೆಯ ಬಾಗಿಲು ತಟ್ಟಿರುವ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರು ಸಂಕಷ್ಟದಲ್ಲಿದ್ದಾರೆ. ನಾವು ನಮ್ಮಿಂದಾದ ಸಹಾಯವನ್ನು ಇನ್ನೊಬ್ಬರಿಗೆ ಮಾಡುವಂತಾಗಲಿ ಎಂದು ಸಂಸ್ಥೆಯ ನಿರ್ದೇಶಕರಾದ ವಂ.ಫಾ.ಬಿನೋಯಿ ಎ.ಜೆ ಕೋವಿಡ್ ಸೋಂಕಿಗೆ ತುತ್ತಾಗಿದ್ದ ಡಿ.ಕೆ.ಆರ್.ಡಿ.ಎಸ್ ಸಂಘದ ಸದಸ್ಯರಿಗೆ ಆಹಾರದ ಕಿಟ್ ‌ವಿತರಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಕಾರ್ಯಕರ್ತರಾದ ಶ್ರೀ.ಮಾರ್ಕ್ ಡಿಸೋಜ, ಶ್ರೀ. ಜಾನ್ಸನ್, ಸ್ನೇಹ ಜ್ಯೋತಿ ಮಹಿಳಾ ತಾಲೂಕು ಒಕ್ಕೂಟದ ಪದಾಧಿಕಾರಿಗಳಾದ ಶ್ರೀಮತಿ ಮಂಜುಳಾ ಜಾನ್, ಶ್ರೀಮತಿ ಜಯ, ಶ್ರೀಮತಿ ಉಷಾ, ಶ್ರೀಮತಿ ಲಲಿತಾ ಮತ್ತು ಶ್ರೀಮತಿ ಆಲೀಸ್ ಉಪಸ್ಥಿತರಿದ್ದರು.

ವಿವಿಧ ಗ್ರಾಮದ 100 ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸಲಾಯಿತು.

error: Content is protected !!