ಲಾಯಿಲ ಗ್ರಾಮ ಪಂಚಾಯತ್ ಮಾದರಿ ಎರೆಹುಳು ಗೊಬ್ಬರ ಘಟಕಕ್ಕೆ ಶಾಸಕ ಹರೀಶ್ ಪೂಂಜ ಚಾಲನೆ.

ಬೆಳ್ತಂಗಡಿ: ಸರಕಾರದ ಮನರೇಗಾ ಯೋಜನೆ ಮೂಲಕ ರೈತ ಬಂಧು ಅಭಿಯಾನಯದಡಿ ಬೆಳ್ತಂಗಡಿ ಲಾಯಿಲ ಗ್ರಾಮ ಪಂಚಾಯಿತಿಯ ಸ್ವಚ್ಛತಾ ಘಟಕದ ಅವರಣದಲ್ಲಿ ಮಾದರಿ ಎರೆಹುಳ ಗೊಬ್ಬರ ಘಟಕಕ್ಕೆ ಶಾಸಕ ಹರೀಶ್ ಪೂಂಜ ಅವರು ಭಾನುವಾರ ಚಾಲನೆ ನೀಡಿದರು.

75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯ ಸಂದರ್ಭ ರಾಜ್ಯಾದ್ಯಂತ ಸರಕಾರ ನರೇಗಾ ಯೋಜನೆಯಡಿ ರೈತ ಬಂಧು ಅಭಿಯಾನವನ್ನು ಹಮ್ಮಿಕೊಂಡಿದೆ. ಒಂದು ಗ್ರಾಮ ಪಂಚಾಯಿತಿಯಲ್ಲಿ ಇಪ್ಪತ್ತೈದು ಮಂದಿ ರೈತ ಫಲಾನುಭವಿಗಳಿಗೆ ಎರೆಹುಳ ತೊಟ್ಟಿ ನಿರ್ಮಾಣಕ್ಕೆ ಸಾಮಾಗ್ರಿ ಹಾಗೂ ಕೂಲಿ ಸಹಿತ ಸಬ್ಸಿಡಿಯಾಗಿ 27,000 ರೂ. ಅನುದಾನ ನೀಡಲಾಗುತ್ತದೆ. ಲಾಯಿಲ ಗ್ರಾ.ಪಂ.ನಲ್ಲಿ ತಾಲೂಕು ಪಂಚಾಯಿತಿ ವತಿಯಿಂದ ಮಾದರಿ ತೊಟ್ಟಿ ನಿರ್ಮಿಸಲಾಗಿದ್ದು, ತಾಲೂಕಿನಲ್ಲಿ ರೈತ ಬಂಧು ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಮುಂದಿನ ದಿನದಲ್ಲಿ ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಅಭಿಯಾನ ಅನುಷ್ಠಾನಗೊಳ್ಳಲಿದೆ.

ಶಾಸಕ ಹರೀಶ ಪೂಂಜ ಅವರು ಎರೆಹುಳವನ್ನು ಮಾದರಿ ತೊಟ್ಟಿಗೆ ಬಿಡುವ ಮೂಲಕ ಘಟಕಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

 

ಈ ಸಂದರ್ಭದಲ್ಲಿ  ಲಾಯಿಲ ಗ್ರಾ.ಪಂ. ಅಧ್ಯಕ್ಷೆ ಆಶಾ ಬೆನಡಿಕ್ಟಾ ಸಲ್ಡಾನ, ಉಪಾಧ್ಯಕ್ಷ ಗಣೇಶ್ ಲಾಯಿಲ, ತಾ.ಪಂ.‌ಇಒ ಕುಸುಮಾಧರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಂಜಿತ್ ಕುಮಾರ್, ತಾ.ಪಂ. ವ್ಯವಸ್ಥಾಪಕ ಪ್ರಶಾಂತ್ ಬಳಂಜ, ಮನರೇಗಾ ಶಿಕ್ಷಣ ಮತ್ತು ಮಾಹಿತಿ ಜಿಲ್ಲಾ ಸಂಯೋಜಕಿ ಸುನೀತಾ ಮಂಜುನಾಥ್, ತಾಲೂಕು ಸಂಯೋಜಕಿ ವಿನಿಷಾ ಉಜಿರೆ, ಗ್ರಾ.ಪಂ. ಕಾರ್ಯದರ್ಶಿ ಪುಟ್ಟಸ್ವಾಮಿ, ಲೆಕ್ಕ ಸಹಾಯಕಿ ರೇಶ್ಮಾ .ಮ.ಗಂಜಿಗಟ್ಟಿ ಹಾಗೂ ಗ್ರಾ.ಪಂ. ಸದಸ್ಯರುಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

error: Content is protected !!