‘ಕನ್ನಡ ‌ಪುಸ್ತಕ’ಗಳನ್ನು‌‌ ಸರ್ಕಾರಿ ಸಮಾರಂಭಗಳಲ್ಲಿ ಕಾಣಿಕೆಯಾಗಿ‌ ನೀಡಿ: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರಿಂದ ಅಧಿಕೃತ ಆದೇಶ: ಹೂ- ಗುಚ್ಛ, ಶಾಲು, ಹಾರ, ತುರಾಯಿ, ಇತರೆ ಕಾಣಿಕೆ ನಿಷೇಧಿಸಲು ಸೂಚಿಸಿದ್ದ ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ‌ ಸೂಚನೆ ಮೇರೆಗೆ ಸುತ್ತೋಲೆ

ಬೆಂಗಳೂರು: ರಾಜ್ಯ ಸರ್ಕಾರ ಮತ್ತು ಸರ್ಕಾರದ ಸ್ವಾಮ್ಯಕ್ಕೊಳಪಡುವ ಸಂಸ್ಥೆಗಳು ‌ನಡೆಸುವ ಸಮಾರಂಭಗಳಲ್ಲಿ ಕನ್ನಡ ‌ಪುಸ್ತಕಗಳನ್ನು‌ ಕಾಣಿಕೆಯಾಗಿ‌ ನೀಡಬಹುದು. ಹೂ- ಗುಚ್ಛ, ಶಾಲು, ಹಾರ, ತುರಾಯಿ, ಇತರೆ ಕಾಣಿಕೆ ಸಭೆಗಳಲ್ಲಿ ಹೂಗುಚ್ಛ, ಹಾರ, ಶಾಲು ನೀಡುವುದನ್ನು ನಿಷೇಧಿಸಿ ಸಿಎಂ ಬೊಮ್ಮಾಯಿ ಅವರ ಮೌಖಿಕ ಆದೇಶವನ್ನೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಅವರು ಸರ್ಕಾರದ ಅಧಿಕೃತ ಆದೇಶವನ್ನಾಗಿ ಜಾರಿಗೊಳಿಸಿ, ಸುತ್ತೋಲೆ ಹೊರಡಿಸಿದ್ದಾರೆ.

ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಗೆ ಆಗಮಿಸಿದ ಸಿ.ಎಂ. ಬೊಮ್ಮಾಯಿ ಅವರು ಹೂಗುಚ್ಚ ಸ್ವೀಕರಿಸಲು ನಿರಾಕರಿಸಿದರು. ಇದು ಅನಾವಶ್ಯಕ ವೆಚ್ಚ. ಸಭೆಗಳಲ್ಲಿ ಶಿಷ್ಟಾಚಾರದ ಹೆಸರಿನಲ್ಲಿ ಹೂಗುಚ್ಛ, ಹಾರ, ಶಾಲುಗಳನ್ನು ನೀಡುವ ಅಗತ್ಯವಿಲ್ಲ. ಇನ್ನು ಮುಂದೆ ಆ ಸಂಪ್ರದಾಯ ಬೇಡ.‌ ಶೀಘ್ರವೇ ಈ ಕುರಿತು ಆದೇಶ ಹೊರಡಿಸುವುದಾಗಿ ತಿಳಿಸಿದ್ದರು. ಬಳಿಕ ಸಿಎಂ ಬೊಮ್ಮಾಯಿ ಅವರ ಮೌಖಿಕ ಆದೇಶವನ್ನೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಅವರು ಸರ್ಕಾರದ ಅಧಿಕೃತ ಆದೇಶವನ್ನಾಗಿ ಜಾರಿಗೊಳಿಸಿ ಸುತ್ತೋಲೆ ಹೊರಡಿಸಿದ್ದಾರೆ.

 

error: Content is protected !!