ಬೆಳ್ತಂಗಡಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ರಚನೆಯಾಗಿದೆ.ಇಂದು 29 ಸಚಿವರು ಪ್ರಮಾಣ ವಚನ ಸ್ವೀಕರಿಸುವ ಮೂಲಕ ಜುಲೈ 28 ರಂದು ಅಸ್ತಿತ್ವಕ್ಕೆ ಬಂದ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟ ಪೂರ್ಣ ಪ್ರಮಾಣದ ರೂಪ ಪಡೆಯಿತು.
ಈಗಾಗಲೇ ಪ್ರಮಾಣ ವಚನ ಸ್ವೀಕರಿಸಿದ ಸಚಿವರುಗಳಿಗೆ ಕೋವಿಡ್ ನಿರ್ವಹಣೆ ಹಾಗೂ ನೆರೆ ಹಾವಳಿ ಪರಿಹಾರ ಕೆಲಸಗಳನ್ನು ತ್ವರಿತವಾಗಿ ಪರಿಶೀಲನೆ ಮಾಡಲು ಉಸ್ತುವಾರಿಯನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.
ದಕ್ಷಿಣ ಕನ್ನಡ ಉಸ್ತುವಾರಿಯಾಗಿ ಎಸ್.ಅಂಗಾರ, ಉಡುಪಿ ಜಿಲ್ಲಾ ಉಸ್ತುವಾರಿಯಾಗಿ ಸುನೀಲ್ ಕುಮಾರ್, ಕೊಡಗು ಜಿಲ್ಲಾ ಉಸ್ತುವಾರಿಯಾಗಿ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರುಗಳನ್ನು ಆಯ್ಕೆ ಮಾಡಲಾಗಿದೆ.
- ಬೆಳಗಾವಿ: ಗೋವಿಂದ ಎಂ ಕಾರಜೋಳ
- ಶಿವಮೊಗ್ಗ : ಕೆ ಎಸ್ ಈಶ್ವರಪ್ಪ
- ಬೆಂಗಳೂರು ನಗರ: ಆರ್. ಅಶೋಕ್
- ಚಿತ್ರದುರ್ಗ: ಬಿ. ಶ್ರೀರಾಮುಲು
- ರಾಯಚೂರು: ವಿ. ಸೋಮಣ್ಣ
- ಬಾಗಲಕೋಟೆ: ಉಮೇಶ್ ವಿ. ಕತ್ತಿ
- ತುಮಕೂರು: ಜೆ.ಸಿ. ಮಾಧುಸ್ವಾಮಿ
- ಚಿಕ್ಕಮಗಳೂರು: ಅರಗ ಜ್ಞಾನೇಂದ್ರ
- ರಾಮನಗರ: ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್
- ಗದಗ: ಸಿ. ಸಿ. ಪಾಟೇಲ
- ಬಳ್ಳಾರಿ ಮತ್ತು ವಿಜಯನಗರ: ಆನಂದ್ ಸಿಂಗ್
- ಬೀದರ್: ಪ್ರಭು ಬಿ. ಚವ್ಹಾಣ್
- ಕಲಬುರಗಿ: ಮುರುಗೇಶ್ ರುದ್ರಪ್ಪ ನಿರಾಣಿ
- ಉತ್ತರ ಕನ್ನಡ: ಅರೆಬೈಲ್ ಹೆಬ್ಬಾರ್ ಶಿವರಾಮ್
- ಮೈಸೂರು ಮತ್ತು ಚಾಮರಾಜ ನಗರ: ಎಸ್.ಟಿ ಸೋಮಶೇಖರ್
- ಹಾವೇರಿ: ಬಿ. ಸಿ. ಪಾಟೇಲ್
- ದಾವಣಗೆರೆ: ಬಿ. ಎ. ಬಸವರಾಜ್
- ಚಿಕ್ಕಬಳ್ಳಾಪುರ: ಡಾ. ಕೆ. ಸುಧಾಕರ್
- ಬೆಂಗಳೂರು ಗ್ರಾಮಾಂತರ: ಎನ್. ನಾಗರಾಜ್ (ಎಂಟಿಬಿ)
- ವಿಜಯಪುರ: ಜೊಲ್ಲೆ ಶಶಿಕಲ ಅಣ್ಣಾಸಾಹೇಬ್
- ಮಂಡ್ಯ: ಡಾ.ಕೆ.ಸಿ ನಾರಾಯಣ ಗೌಡ
ಯಾದಗಿರಿ: ಬಿ.ಸಿ. ನಾಗೇಶ್ - ಕೊಪ್ಪಳ: ಆಚಾರ್ ಹಾಲಪ್ಪ ಬಸಪ್ಪ
- ಧಾರವಾಡ: ಶಂಕರ್ ಬಿ.ಪಾಟೇಲ್ ಮುನೇನಕೊಪ್ಪ
- ಕೋಲಾರ: ಮುನಿರತ್ನ