ಆ.15ರವರೆಗೆ ಮಂಗಳೂರು, ಪುತ್ತೂರು, ಬಂಟ್ವಾಳ ತಾಲೂಕಿನ ಕೆಲ ಮದ್ಯದಂಗಡಿಗಳು ಬಂದ್!:‌ ಕೇರಳ ಗಡಿ ಪ್ರದೇಶದಲ್ಲಿ ಕೊರೋನಾ ಹೆಚ್ಚಳ‌ ಹಿನ್ನೆಲೆ, ದ.ಕ ಜಿಲ್ಲಾಧಿಕಾರಿಯಿಂದ ಆದೇಶ: ಜಿಲ್ಲೆಯ ಗಡಿಭಾಗದ 5 ಕಿ.ಮೀ. ವ್ಯಾಪ್ತಿಯಲ್ಲಿ ಮದ್ಯದಂಗಡಿ ಮುಚ್ಚಲು ಸೂಚನೆ

ಮಂಗಳೂರು: ಗಡಿ ಭಾಗದಲ್ಲಿರುವ ಮದ್ಯದಂಗಡಿಗಳನ್ನು ಆಗಸ್ಟ್ 15 ರ ವರೆಗೆ ಮುಚ್ಚುವಂತೆ ಜಿಲ್ಲಾಡಳಿತದಿಂದ ಆದೇಶ ಹೊರಡಿಸಲಾಗಿದೆ. ಕೇರಳದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಳವಾಗಿರುವ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಈ ಆದೇಶ ಹೊರಡಿಸಿದ್ದಾರೆ.

ಮಂಗಳೂರು ತಾಲೂಕಿನ ಸೋಮೇಶ್ವರ, ಕಿನ್ಯ, ಕೋಟೆಕಾರ್, ಮಂಜನಾಡಿ, ಬಂಟ್ವಾಳ ತಾಲೂಕಿನ ಕೇಪು, ಕರೋಪಾಡಿ, ಪೆರುವಾಯಿ, ನರಿಂಗಾನ, ಕಂಬ್ಳಪದವು, ಮುಡಿಪು, ಪಜೀರ್, ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು, ಬಡಗನ್ನೂರು, ಪಾಣಾಜೆ, ಸುಳ್ಯ ತಾಲೂಕಿನ ಅಲೆಟ್ಟಿ, ಮಂಡೆಕೋಲು, ಜಾಲ್ಸೂರು ಮತ್ತು ಕನಕಮಜಲು ಗ್ರಾಮದಲ್ಲಿ ಇರುವ ಮದ್ಯದಂಗಡಿಗಳ ಮುಚ್ಚಲು ಸೂಚಿಸಲಾಗಿದೆ.

ಕಾಸರಗೋಡು ಜಿಲ್ಲೆಯ ಗಡಿಭಾಗದ ಜನತೆ ಮದ್ಯಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮದ್ಯದಂಗಡಿಗಳನ್ನು ಅವಲಂಬಿಸಿದ್ದಾರೆ. ಈ ಕಾರಣದಿಂದ ಗಡಿಭಾಗದಲ್ಲಿರುವ ಜಿಲ್ಲೆಯ 5 ಕಿ.ಮೀ. ವ್ಯಾಪ್ತಿಯ ಮದ್ಯದ ಅಂಗಡಿಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಕೇರಳದಲ್ಲಿ ಕೊರೊನಾ ಪ್ರಕರಣ ಹೆಚ್ಚಳವಾಗಿದ್ದು ಆರ್​​​ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಇಲ್ಲದೆ ಗಡಿಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿದೆ.

error: Content is protected !!