ರೈತರು ಹಾಗೂ ಬಡವರ ಮಕ್ಕಳ ಏಳಿಗೆಗೆ ಹೆಚ್ಚಿನ ಆದ್ಯತೆ: ಹೊಸ ಶಿಷ್ಯ ವೇತನ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನದಲ್ಲಿ ಹೆಚ್ಚಳ: ಸಿಎಂ ಬೊಮ್ಮಾಯಿ ಸಂಪುಟದಿಂದ ಕರುನಾಡಿಗೆ ಬಂಪರ್ ಗಿಫ್ಟ್

ಬೆಂಗಳೂರು: ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಅನೇಕ ಹೊಸ ಘೋಷಣೆಗಳನ್ನು ಮಾಡಿದ್ದಾರೆ.

  • ಪ್ರಮುಖವಾಗಿ ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ 1,000 ಕೋಟಿ ರೂ. ವಿದ್ಯಾರ್ಥಿ ವೇತನ ಯೋಜನೆ ಜಾರಿಗೊಳಿಸಿದ್ದಾರೆ.
    ಅನ್ನದಾತರ ಮಕ್ಕಳು ಕಲಿಕೆಯಿಂದ ವಂಚಿತರಾಗಬಾರದು. ಹೀಗಾಗಿ ಶಿಷ್ಯವೇತನ ಜಾರಿ ಮಾಡಲಾಗುವುದು ಎಂದು ಅವರು ಹೇಳಿದರು.
  • ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನದಲ್ಲಿ ಹೆಚ್ಚಳ. ಇದೇ ವೇಳೆ ಸಂಧ್ಯಾ ಸುರಕ್ಷಾ ಯೋಜನೆಯನ್ನು 1 ಸಾವಿರ ರೂ.ನಿಂದ 1,200 ರೂ.ಗೆ ಹೆಚ್ಚಳ.
  • ವಿಧವಾ ವೇತನ 600 ರೂ. ಇದ್ದು, ಇದೀಗ 800 ರೂ.ಗೆ ಏರಿಕೆ ಮಾಡಲಾಗಿದೆ.
  • ಅಂಗವಿಕಲ ವೇತನ 600 ರೂ.ರಿಂದ 800 ರೂ.ಗೆ ಏರಿಕೆ ಆಗಲಿದೆ ಎಂದು ತಿಳಿಸಿದರು.

ನನ್ನ ಆಡಳಿತದಲ್ಲಿ ರೈತರು ಹಾಗೂ ಬಡವರ ಮಕ್ಕಳ ಏಳಿಗೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ನೂತನ ಸಿಎಂ ತಿಳಿಸಿದರು.

error: Content is protected !!