ಸಂಸ್ಕ್ರತಿ ಉಳಿಸಿ, ಬೆಳೆಸುವ ಕಾರ್ಯ ನಡೆಯಲಿ: ಡಾ. ನಿರಂಜನ್ ರೈ ಅಭಿಮತ: ಕುಪ್ಪೆಟ್ಟಿ ಭಜನಾ ಮಂದಿರ ವಠಾರದಲ್ಲಿ ಶ್ರೀ ಗಣೇಶ ಭಜನಾ ಮಂಡಳಿಯಿಂದ ಗುರುಪೂಜಾ ಉತ್ಸವ, ಮಕ್ಕಳಿಗೆ ಪುಸ್ತಕ, ಬ್ಯಾಗ್ ವಿತರಣೆ

 

 

ಬೆಳ್ತಂಗಡಿ: ಸಂಸ್ಕೃತಿಯನ್ನು ಕಳೆದುಕೊಳ್ಳುವ ಸ್ಥಿತಿ ಬರಬಾರದು ಅದನ್ನು ಉಳಿಸಿ, ಬೆಳೆಸುವ ಪ್ರಯತ್ನ ನಡೆಯಬೇಕು. ಗುರು-ಹಿರಿಯರನ್ನು ನೆನೆಯುವುದು ನಮ್ಮ ಧರ್ಮ. ಹಿರಿಯರ ಕನಸನ್ನು ನನಸು ಮಾಡುವ ಕೆಲಸವನ್ನು ನಾವು ಮಾಡಬೇಕಾಗಿದೆ ಎಂದು ‌ಧನ್ವಂತರಿ ಕ್ಲಿನಿಕ್ ಮಾಲಕ ಡಾ. ನಿರಂಜನ್ ರೈ ಹೇಳಿದರು.
ಅವರು ಕುಪ್ಪೆಟ್ಟಿ ಭಜನಾ ಮಂದಿರ ವಠಾರದಲ್ಲಿ ಶ್ರೀ ಗಣೇಶ ಭಜನಾ ಮಂಡಳಿಯಿಂದ ಹಮ್ಮಿಕೊಂಡಿದ್ದ 2021-22 ಸಾಲಿನ ಗುರುಪೂಜಾ ಉತ್ಸವ ಹಾಗೂ ಮಕ್ಕಳಿಗೆ ಪುಸ್ತಕ ಮತ್ತು ಬ್ಯಾಗ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ‌
ಆರ್.ಕೆ. ಕನ್ಸ್ಟ್ರಕ್ಷನ್ ಮಾಲಕ ರಾಧಾಕೃಷ್ಣ ಮಾತನಾಡಿ, ಭಜನಾ ಮಂದಿರದಿಂದ ನಡೆಯುವ ಇಂತಹ ಸಮಾಜಮುಖಿ ಕಾರ್ಯ ಶ್ಲಾಘನೀಯ. ಮಂದಿರಕ್ಕೆ ಸಂಬಂಧಪಟ್ಟ ಹಾಗೆ ಸಭಾಭವನದ ನಿರ್ಮಾಣದಲ್ಲಿ ಸಂಪೂರ್ಣವಾಗಿ ಸಹಕಾರ ನೀಡುವುದಾಗಿ ತಿಳಿಸಿದರು.
ಶಾರದಾ ರೈ ಮಾತನಾಡಿ, ಮನೆಯಲ್ಲಿ ಚಿಕ್ಕ ಮಕ್ಕಳಿಂದ ಭಜನೆ ಮಾಡುವ ಅಭ್ಯಾಸ ಮಾಡಿಸಿದರೆ ವೈಯಕ್ತಿಕ ನೆಲೆಯಲ್ಲಿ ಮತ್ತು ಸಮಾಜಕ್ಕೆ ಉತ್ತಮ. ಮನಸ್ಸಿನ ನಿಯಂತ್ರಣ ಶಾಂತಿ-ನೆಮ್ಮದಿ ಭಜನೆಯಿಂದ ಸಾಧ್ಯ. ಈ ಮೂಲಕ ದೇಶದ ಸಂಸ್ಕೃತಿ- ಸಂಸ್ಕಾರ ಉಳಿಸುವ ಪ್ರಯತ್ನ ನಡೆಯಬೇಕಿದೆ ಎಂದರು.
ಶ್ರೀದೇವಿ ಪುಷ್ಪಗಿರಿ ಮಾತನಾಡಿ, ಶ್ರೀ ಗಣೇಶ ಭಜನಾ ಮಂಡಳಿ ಭಜನೆಗೆ ಮಾತ್ರ ಸೀಮಿತವಾಗದೆ ಸಮಾಜ ಸೇವೆಯಲ್ಲಿ ತೊಡಗಿಕೊಂಡು ಮಾದರಿಯಾಗಿದೆ ಎಂದರು.

 

 

ನಿಸರ್ಗ ಕನ್ಸ್ಟ್ರಕ್ಷನ್ ಮಾಲಕ ರಾಜೇಂದ್ರ ಅವರು ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಬ್ಯಾಗ್ ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ನಿಸರ್ಗ ಕನ್ಸ್ಟ್ರಕ್ಷನ್ ಮಾಲಕ, ರಾಜೇಂದ್ರ, ಕಣಿಯೂರು ಗ್ರಾ.ಪಂ. ಅಧ್ಯಕ್ಷೆ ಗಾಯತ್ರಿ ಗೋಪಾಲಗೌಡ, ಉಪಾಧ್ಯಕ್ಷ ಸುನೀಲ್ ಸಾಲಿಯಾನ್, ಪದ್ಮುಂಜ ಸಿ. ಎ. ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಶೆಟ್ಟಿ ಪಣೆಕ್ಕರ, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಸುಧೀರ್ ಕೆ. ಎನ್., ಆಡಳಿತ ಸಮಿತಿ ಅಧ್ಯಕ್ಷ ಹರೀಶ್ ಕುಪ್ಪೆಟ್ಟಿ ಉಪಸ್ಥಿತರಿದ್ದರು.
ರವಿಪ್ರಕಾಶ್ ಭಟ್ ಸ್ವಾಗತಿಸಿ, ರೋಹಿತ್ ಶೆಟ್ಟಿ ವಂದಿಸಿದರು. ಸುಧೀರ್ ಕೆ. ಎನ್. ಹಲೇಜಿ ನಿರೂಪಿಸಿ, ಸುರೇಶ್ ಹೆಚ್.ಎಲ್. ಸಹಕರಿಸಿದರು.

 

error: Content is protected !!