ಬಂದಾರು: ಸಾರ್ವಜನಿಕ ಸ್ಮಶಾನದ ಸುತ್ತ ಗಿಡನಾಟಿ: ಶ್ರೀ ರಾಮನಗರ ಜೈ ಶ್ರೀ ರಾಮ್ ಗೆಳೆಯರ ಬಳಗದಿಂದ ವನಮಹೋತ್ಸವ

ಬಂದಾರು: ಶ್ರೀ ರಾಮನಗರ ಜೈ ಶ್ರೀ ರಾಮ್ ಗೆಳೆಯರ ಬಳಗದ ವತಿಯಿಂದ ವನಮಹೋತ್ಸವ ಹಮ್ಮಿಕೊಳ್ಳಲಾಯಿತು.
ಬಂದಾರು ಸಾರ್ವಜನಿಕ ಸ್ಮಶಾನದ ಸುತ್ತ ಸುಮಾರು 75ಗಿಂತಲೂ ಹೆಚ್ಚು ಹಣ್ಣಿನ ಗಿಡಗಳನ್ನು ನಾಟಿ ಮಾಡಲಾಯಿತು.
ಬಳಗದ ಅಧ್ಯಕ್ಷ ಧನಂಜಯ ಅವರ ಅಧ್ಯಕ್ಷತೆಯಲ್ಲಿ ವನಮಹೋತ್ಸವ ನಡೆಯಿತು. ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪರಮೇಶ್ವರಿ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಿದರು.
ಬಳಗದ ಸದಸ್ಯರು ಗಿಡಗಳನ್ನು ದತ್ತು ನೀಡುವ ಮೂಲಕ, ಹಣ್ಣು ಗಿಡಗಳನ್ನು ನೆಡಲು ಸಹಕಾರ ನೀಡಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಬಿಜೆಪಿ ಹಿಂದುಳಿದ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಗಣೇಶ್ ಬಂಗೇರ, ತಾಲೂಕು ಪಂಚಾಯತ್ ಸದಸ್ಯರಾದ ಕೃಷ್ಣಯ್ಯ ಆಚಾರ್ಯ, ಪಂಚಾಯತ್ ಉಪಾಧ್ಯಕ್ಷ ಗಂಗಾಧರ್ ಪೂಜಾರಿ, ವಲಯ ಅರಣ್ಯ ಅಧಿಕಾರಿ ಎಸ್.ಆರ್. ಪಾಟೀಲ್, ಅರಣ್ಯ ರಕ್ಷಕ ಜಗದೀಶ್, ಸ್ಥಳೀಯರಾದ ಅಶೋಕ್ ಪಂಜಾಳ, ಪಂಚಾಯತ್ ಸದಸ್ಯರಾದ ಚೇತನ್, ಪುಷ್ಪವತಿ, ವಿಮಲ, ಬಳಗ ಕಾರ್ಯದರ್ಶಿ ಸುರಕ್ಷಿತ್, ಬಳಗದ ಸದಸ್ಯರು ಉಪಸ್ಥಿತರಿದ್ದರು. ಬಂದಾರು ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷ, ಬಳಗದ ಸ್ಥಾಪಕಧ್ಯಕ್ಷ ಉದಯ ಬಿ.ಕೆ. ಸ್ವಾಗತಿಸಿ, ವಂದಿಸಿದರು.

error: Content is protected !!