ಮುಗೆರಡ್ಕದಲ್ಲಿ ಸೇತುವೆ ಸಹಿತ ಅಣೆಕಟ್ಟು, ಏತ ನೀರಾವರಿ ಯೋಜನೆಗೆ ₹ 240 ಕೋಟಿ ಅನುದಾನ ಘೋಷಣೆ ಹಿನ್ನೆಲೆ: ಮೊಗ್ರು ಗ್ರಾಮಸ್ಥರಿಂದ ಶಾಸಕ ಹರೀಶ್ ಪೂಂಜರಿಗೆ ಗೌರವಾರ್ಪಣೆ: ಎರಡು ವರುಷಗಳ ಹಿಂದೆ ನೆರೆಗೆ ಕೊಚ್ಚಿ ಹೋಗಿದ್ದ ತೂಗು ಸೇತುವೆ

ಬೆಳ್ತಂಗಡಿ: ಕಳೆದ ಎರಡು ವರುಷಗಳ ಹಿಂದೆ ನೆರೆಗೆ ಮುಗೇರಡ್ಕದಲ್ಲಿ ತೂಗು ಸೇತುವೆ ಕೊಚ್ಚಿ ಹೋಗಿದ್ದ ಸಂದರ್ಭದಲ್ಲಿ ಆತಂಕಕ್ಕೊಳಗಾಗಿದ್ದ ಗ್ರಾಮಸ್ಥರಿಗೆ ಶಾಶ್ವತ ಸೇತುವೆ ಭರವಸೆಯನ್ನು ನೀಡಿ ಇದೀಗ ನುಡಿದಂತೆ ನಡೆದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಇವರಿಗೆ ಮೊಗ್ರು ಗ್ರಾಮದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.


ಮುಗೆರಡ್ಕದಲ್ಲಿ ಸೇತುವೆ ಸಹಿತ ಅಣೆಕಟ್ಟು ಮತ್ತು ಏತ ನೀರಾವರಿ ಯೋಜನೆಗೆ ರೂ. 240ಕೋಟಿ ಅನುದಾನವನ್ನು ಒದಗಿಸಿ ಗ್ರಾಮದ ಬಹು ವರುಷಗಳ ಬೇಡಿಕೆಯನ್ನು ಈಡೇರಿಸಿದ್ದಾರೆ ಈ ನಿಟ್ಟಿನಲ್ಲಿ ಅವರನ್ನು ಗ್ರಾಮಸ್ಥರ ಪರವಾಗಿ ಅಭಿನಂದಿಸುತ್ತಿದ್ದೇವೆ ಎಂಬ ಮಾಹಿತಿಯನ್ನು ಸ್ಥಳೀಯರೊಬ್ಬರು ತಿಳಿಸಿದರು.


ಈ ಸಂದರ್ಭದಲ್ಲಿ ದೈವಸ್ಥಾನದ ಮೊಕ್ತೇಸರ ಮನೋಹರ್ ಗೌಡ ಅಂತರ, ಗುತ್ತು ಬಾರಿಕೆ ಮೆನೆತನದ ಚಂದ್ರಹಾಸ ಗೌಡ, ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಗಂಗಾಧರ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯರು ಮತ್ತು ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಗಳಾದ ಬಾಲಕೃಷ್ಣ ಗೌಡ ಮುಗೇರಡ್ಕ, ಬೂತ್ ಅಧ್ಯಕ್ಷರದ ದುಸ್ಯಾಂತ್ ಗೌಡ, ಕಾರ್ಯದರ್ಶಿ ಗಳಾದ ರಮೇಶ್ ನೆಕ್ಕರಾಜೆ,ಸಿ ಬ್ಯಾಂಕ್ ಸದಸ್ಯರದ ಉದಯ ಭಟ್ ಕೊಳಬ್ಬೆ, ಶೀಲಾವತಿ, ಕಡಮ್ಮಾಜೆ ಫಾರ್ಮ್ ಮಾಲಕ, ಉದ್ಯಮಿ ದೇವಿಪ್ರಸಾದ್, ಜಯಪ್ರಸಾದ್, ಪುರಂದರ ಗೌಡ ನೈಮರ್ ನವಚೇತನ ಉಪಾಧ್ಯಕ್ಷ, ಮೊಗ್ರು ಶಕ್ತಿ ಕೇಂದ್ರದ ಪ್ರಮುಖ್ ಅಶೋಕ್ ಭಟ್, ಹಿರಿಯರಾದ ಕಿನ್ಯಣ್ಣ ಗೌಡ, ಕೇಶವ ಗೌಡ, ವಾಸುದೇವ ಗೌಡ ಅಂತರ,ವೀರಪ್ಪ ಗೌಡ ಆರ್ಥಿದಡಿ ಬಾಲಪ್ಪ ಗೌಡ,ಬಾಬು ಗೌಡ ನಿವೃತ ಪೊಲೀಸ್ ಅಧಿಕಾರಿ, ಕೊರಗಪ್ಪ ಗೌಡ ಪುಂಕೇತಡಿ, ನೇಮಿಚಂದ್ರ ಎಂ, ಭಾರತ್ ಜಾಲ್ನದೆ ವಿವಿಧ ಸಂಘಟನೆಗಳ ಕಾರ್ಯಕರ್ತರು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

error: Content is protected !!