ಸ್ಪಂದನಾ ಸೇವಾ ಸಂಘದ 40ನೇ ಸೇವಾ ಯೋಜನೆ ಧನಸಹಾಯ ವಿತರಣೆ

ಬೆಳ್ತಂಗಡಿ: ಆರ್ಥಿಕ ಸಂಕಷ್ಟದಲ್ಲಿದ್ದು ಆಕಸ್ಮಿಕವಾಗಿ ಬಿದ್ದು ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಕೊಯ್ಯೂರು ಗ್ರಾಮದ ಕಿನ್ಯಾಜೆ ನಿವಾಸಿ ವಿಶ್ವನಾಥ ಗೌಡ ಇವರಿಗೆ ಸ್ಪಂದನಾ ಸೇವಾ ಸಂಘದ 40ನೇ ಸೇವಾ ಯೋಜನೆಯ ಧನಸಹಾಯ ರೂ 20,000/- ಚೆಕ್ಕನ್ನು ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನಿರ್ದೇಶಕರಾದ ರವೀಂದ್ರನಾಥ್ ಗೌಡ ಪೆರ್ಮುದೆ ಇವರ ಮೂಲಕ ಫಲಾನುಭವಿಗೆ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಸಂಘದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿಗಳಾದ ಮೋಹನ್ ಗೌಡ ಕೊಯ್ಯೂರು, ಮಾಜಿ ನಿರ್ದೇಶಕರಾದ ವಿಜಯ್ ಕುಮಾರ್ ಕೊಯ್ಯೂರು, ವಾಣಿ ಸೌಹಾರ್ದ ಕೋ-ಆಪರೇಟೀವ್ ಸೊಸೈಟಿ (ಲಿ.)ನ ನಿರ್ದೇಶಕರುಗಳಾದ ಉಷಾದೇವಿ ಕಿನ್ಯಾಜೆ, ಸುರೇಶ್ ಕೌಡಂಗೆ, ತಾಲೂಕು ಮಹಿಳಾ ವೇದಿಕೆಯ ಕಾರ್ಯದರ್ಶಿ ಗೀತಾ ರಾಮಣ್ಣ ಗೌಡ, ಕೊಯ್ಯೂರು ಗ್ರಾಮ ಸಮಿತಿಯ ಅಧ್ಯಕ್ಷರಾದ ನಾರಾಯಣ ಗೌಡ ಮೈಂದಕೋಡಿ, ಉಪನ್ಯಾಸಕರಾದ ದಿವಾ ಕೊಕ್ಕಡ, ಕೊಯ್ಯೂರು ಗ್ರಾಮ ಪಂಚಾಯತ್ ಸದಸ್ಯರಾದ ಯಶವಂತ ಗೌಡ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಪ್ರವೀಣ್ ಗೌಡ ಮಾವಿನಕಟ್ಟೆ, ವಾಣಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಮೀನಾಕ್ಷಿ ಮಹಾಬಲ ಗೌಡ ಮತ್ತು ಸ್ಥಳೀಯ ಗ್ರಾಮದ ಸ್ವಜಾತಿ ಬಾಂಧವರು ಹಾಗೂ ಸ್ಪಂದನಾ ಸೇವಾ ಸಂಘದ ಸದಸ್ಯರು ಉಪಸ್ಥಿತರಿದ್ದರು.

error: Content is protected !!