ರಾಜ್ಯದಲ್ಲಿ ಪದವಿ ಕಾಲೇಜ್ ಪ್ರಾರಂಭಕ್ಕೆ ಮಹೂರ್ತ ಫೀಕ್ಸ್:  ಯಡಿಯೂರಪ್ಪ ಮಹತ್ವದ ನಿರ್ಧಾರ: ಅನ್ ಲಾಕ್ 4:0 ಬಗ್ಗೆ ಸಚಿವರು ಅಧಿಕಾರಿಗಳ ಸಭೆಯ ನಂತರ ನಿರ್ಧಾರ: ರಾಜ್ಯದಲ್ಲಿ ನೈಟ್​ ಕರ್ಫ್ಯೂವನ್ನು ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆವರೆಗೆ ವಿಧಿಸಲು ತೀರ್ಮಾನ: ನಾಳೆಯಿಂದಲೇ ಚಿತ್ರಮಂದಿರಗಳು ಪುನಾರಂಭ: ಶೇಕಡಾ 50 ರಷ್ಟು ಆಸನ ಭರ್ತಿಗೆ ಅವಕಾಶ ನೀಡಲಾಗಿದೆ

ಬೆಂಗಳೂರು: ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಸಚಿವರು ಹಾಗೂ ಅಧಿಕಾರಿಗಳ ಜತೆ ಸಭೆ ನಡೆಸಿದ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅನ್ ಲಾಕ್ 4.O ಕುರಿತು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ರಾಜ್ಯದಲ್ಲಿ ನೈಟ್​ ಕರ್ಫ್ಯೂವನ್ನು ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆವರೆಗೆ ವಿಧಿಸಲು ತೀರ್ಮಾನಿಸಿದ್ದಾರೆ.

ಸಿನಿಮಾ ಥಿಯೇಟರ್​ಗಳಲ್ಲಿ ಶೇಕಡಾ 50 ರಷ್ಟು ಆಸನ ಭರ್ತಿಗೆ ಅವಕಾಶ ನೀಡಲಾಗಿದೆ. ಇದೇ ತಿಂಗಳ 26 ರಿಂದ ಡಿಗ್ರಿ ಕಾಲೇಜುಗಳ ಪುನಾರಂಭಕ್ಕೆ ಒಪ್ಪಿಗೆ ಸೂಚಿಸಲಾಗಿದ್ದು, ಮೊದಲ ಡೋಸ್​​ ವ್ಯಾಕ್ಸಿನ್​ ಪಡೆದ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಮಾತ್ರ ಅವಕಾಶ ಇದೆ.

error: Content is protected !!